ತಮ್ಮ ನಗುಮೊಗದಿಂದಲೇ ಇಡೀ ಕನ್ನಡಿಗರ ಮನ ಗೆದ್ದಿದ್ದ ನಗುಮೊಗದ ಒಡೆಯ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ ನಂತರ ತೆರೆಗಪ್ಪಳಿಸಿದ ಗಂಧದಗುಡಿ ಚಿತ್ರಕ್ಕೆ 2 ವರ್ಷಗಳ ಸಂಭ್ರಮ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ನಾಳೆಗೆ ಮೂರು ವರ್ಷ ಪೂರ್ಣಗೊಳ್ಳಲಿದೆ. ಆದರೆ ಅವರ ನೆನಪು ಮಾತ್ರ ಎಂದೆಂದಿಗೂ ಜೀವಂತ. ಅಭಿಮಾನಿಗಳು ಪುನೀತ್ ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾರೆ ಹಾಗೆ ಅಪ್ಪು ಅವರ ನಿಧನದ ನಂತರ ಬಂದ ಗಂಧದ ಗುಡಿ ಚಿತ್ರ ತೆರೆಗೆ ಅಪ್ಪಳಿಸಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಪುನೀತ್ ರಾಜಕುಮಾರ್ ಅವರ ಮೊದಲನೇ ಪುಣ್ಯ ಸ್ಮರಣೆ ಸಂದರ್ಭ ಈ ಚಿತ್ರ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಭಿಮಾನಿಗಳು ಈ ದಿನವನ್ನು ನೆನೆದಿದ್ದು ಗಂಧದ ಗುಡಿ ಚಿತ್ರ ಚಿತ್ರಮಂದಿರ ಪ್ರವೇಶಿಸುವ ವೇಳೆ ಗಂಧದಗುಡಿಯ ಸಾರಥಿಯೇ ಇಲ್ಲದಿದ್ದದ್ದು ಮಾತ್ರ ನೋವಿನ ಸಂಗತಿಯಾಗಿತ್ತು.
ಪುನೀತ್ ಗಂಧದಗುಡಿಗೆ 2 ವರ್ಷ: ಅಭಿಮಾನಿಗಳು ಭಾವುಕ.
