ರಾಯಚೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿರವಾರ ಡಿಪೋಗೆ ಸೇರಿದ ಬಸ್ಸು ರಸ್ತೆ ಬಿಟ್ಟು ಅಪಾಯಕಾರಿಯಾಗಿ ಹೀಗೆ ತಗ್ಗಿಗೆ ಇಳಿದರೂ ಯಾರೂ ಗಾಯಗೊಂಡಿಲ್ಲ ಮತ್ತು ಡ್ರೈವರ್ ಹಾಗೂ ಕಂಡಕ್ಟರ್ ಕೂಡ ಸುರಕ್ಷಿತವಾಗಿದ್ದಾರೆ.

ಇಂದು ಬೆಳಗ್ಗೆ ಸಿರವಾರ ತಾಲೂಕಿನ ನಿಲೋಗಲ್ ಕ್ರಾಸ್ ಬಳು ನಡೆದ ಘಟನೆ ಇದು. ಅಸಲಿಗೆ ನಡೆದಿದ್ದೇನೆಂದರೆ, ಬಸ್ಸು ರಸ್ತೆಮೇಲೆ ಬಸ್ಸು ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಕುರಿಹಿಂಡೊಂದು ಬಸ್ಸಿಗೆ ಅಡ್ಡಬಂದುಬಿಟ್ಟಿದೆ, ಕುರಿಗಳ ಮೇಲೆ ಹರಿಯುವುದನ್ನು ತಪ್ಪಿಸಲು ಚಾಲಕ ಜೋರಾಗಿ ಬ್ರೇಕ್ ಅದುಮಿದ್ದಾರೆ. ಆಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬಿಟ್ಟು ತಗ್ಗಿಗೆ ಇಳಿದಿದೆ, ಯಾರಿಗೂ ಗಾಯಗಳಾಗದಿರೋದು ಅದೃಷ್ಟದ ಸಂಗತಿ.