ಮಳೆ.. ಮಳೆ.. 72 ಗಂಟೆಗಳ ಕಾಲ ಅಬ್ಬರಿಸಲಿದೆ ಭಾರಿ ಭರ್ಜರಿ ಮಳೆ!

ಬೆಂಗಳೂರು || ಬೆಳಗ್ಗೆಯೇ ಬೆಂಗಳೂರಲ್ಲಿ ತುಂತುರು ಮಳೆ; ಕೆಲ ಗಂಟೆಗಳಲ್ಲೇ ಈ ಜಿಲ್ಲೆಗಳಲ್ಲಿ ಭಾರೀ ಮಳೆ

ಮಳೆ.. ಮಳೆ.. ಚಳಿಗಾಲದಲ್ಲೂ ಅಬ್ಬರಿಸುತ್ತಿರುವ ಮಳೆ ಜನರನ್ನು ಈಗ ರೊಚ್ಚಿಗೇಳುವ ರೀತಿ ಮಾಡಿದೆ. ಯಾಕಂದ್ರೆ ಮಳೆಗಾಲ ಮುಗಿದು ಹೋಗಿ, ಇನ್ನೇನು ಚಳಿಗಾಲ ಶುರುವಾಗುವ ಸಮಯದಲ್ಲಿ ಕೂಡ ಈ ರೇಂಜ್ಗೆ ಮಳೆ ಬೀಳುತ್ತಿರುವುದು ಚಿಂತೆ ಹೆಚ್ಚು ಮಾಡುತ್ತಿದೆ. ಈ ಹೊತ್ತಲ್ಲೇ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೂಡ ಅಕಾಲಿಕ ಮಳೆಯ ಪರಿಣಾಮ ನಾಶ ಆಗುತ್ತಿದ್ದು, ಅನ್ನದಾತ ರೈತರು ತಲೆಮೇಲೆ ಕೈಹೊತ್ತು ಕೂರುವ ವಾತಾವರಣ ನಿರ್ಮಾಣ ಆಗಿದೆ. ಪರಿಸ್ಥಿತಿ ಹೀಗಿದ್ದರೂ, ಮುಂದಿನ 72 ಗಂಟೆಗಳ ಕಾಲ ಮತ್ತಷ್ಟು ರಣಮಳೆ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಿಗೆ ಅಪ್ಪಳಿಸುವುದು ಕನ್ಫರ್ಮ್ ಆಗಿದೆ!

ಮಳೆರಾಯ ತನ್ನ ಅಸಲಿ ಆರ್ಭಟ ತೋರಿಸಲು ಸಜ್ಜಾಗಿದ್ದಾನೆ, ಬಂಗಾಳ ಕೊಲ್ಲಿ ಭಾಗದಲ್ಲಿ ಇದೀಗ ಹೊಸದಾಗಿ ಚಂಡಮಾರುತ ಹುಟ್ಟಿಕೊಂಡಿದೆ. ಇದೇ ಚಂಡಮಾರುತದ ಪರಿಣಾಮ ಇದೀಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲು ಕಾರಣವಾಗಿದೆ. ಅದರಲ್ಲೂ ಸೋಮವಾರ ತನಕ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆರ್ಭಟಿಸುವ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಭರ್ಜರಿ ಮಳೆ! ಮಳೆ.. ಮಳೆ.. ಯಾಕೆ ಹೀಗೆ ಚಳಿಗಾಲದ ಸಮಯದಲ್ಲಿ ಕೂಡ ಮಳೆ ಬೀಳುತ್ತಿದೆ? ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಅಷ್ಟಕ್ಕೂ, ಬಂಗಾಳ ಕೊಲ್ಲಿ ಸಮುದ್ರ ಪ್ರದೇಶ ಕರ್ನಾಟಕ ರಾಜ್ಯಕ್ಕೆ ಹತ್ತಿರದಲ್ಲೇ ಇದೆ. ಇದೀಗ ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ ಚಂಡಮಾರುತ ಜನ್ಮ ಪಡೆದು ಮಳೆ ಬರಲು ಶುರುವಾಗಿದೆ. ಇದೀಗ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಸಾಂಕ್ರಾಮಿಕ ರೋಗಗಳ ಭೀತಿ! ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ & ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಹೀಗೆ ಮಳೆ ಆರ್ಭಟ ಹೆಚ್ಚಾಗುತ್ತಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಅಕಾಲಿಕ ಮಳೆಯ ಕಾರಣಕ್ಕೆ ಜ್ವರ, ಶೀತ & ಗಂಟಲು ಕೆರೆತ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಜನರನ್ನು ಕಾಡುವ ಭಯ ಆವರಿಸಿದೆ.

ಒಟ್ನಲ್ಲಿ ಮಳೆ ಆರ್ಭಟಕ್ಕೆ ಜನರು ಬೆಚ್ಚಿ ಬಿದ್ದಿದ್ದು, ಈಗಲಾದರೂ ಮಳೆಯ ಆರ್ಭಟ ನಿಂತು ಜನರು ನೆಮ್ಮದಿಯಾಗಿ ಬದುಕುವಂತೆ ಆಗಲಿ ಅಂತಾ ಪ್ರಾರ್ಥನೆ ಮಾಡುವಂತೆ ಆಗಿದೆ. ಕಳೆದ ವರ್ಷ ಮಳೆಯೇ ಇಲ್ಲದೆ ಜನರು ಪರದಾಡಿದ್ದರು, ಆದರೆ ಈ ವರ್ಷ ಭಾರಿ ಮಳೆ ಕಾರಣಕ್ಕೆ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿರುವುದು ದುರಂತವೇ ಸರಿ.

Leave a Reply

Your email address will not be published. Required fields are marked *