ರಾಮನಗರ || ಜಿಲ್ಲೆಗೆ Good news: ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗೆ DCM ಚಾಲನೆ

ರಾಮನಗರ || ಜಿಲ್ಲೆಗೆ Good news: ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗೆ DCM ಚಾಲನೆ

ರಾಮನಗರ : ಜಿಲ್ಲೆಯ ಜನರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗುಡ್ನ್ಯೂಸ್ ನೀಡಿದ್ದಾರೆ. ರಾಮನಗರ ಜಿಲ್ಲೆಯ ನಾನಾ ಕಡೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸಮೀಪದ ಸತ್ತೇಗಾಲ ಕಾವೇರಿ ನದಿ ಅಣೆಕಟ್ಟಿನಿಂದ ರಾಮನಗರ ಜಿಲ್ಲೆಯ ಹಲವು ಕಡೆಗೆ ನಾನಾ ಕಡೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದೆ.

ರಾಮನಗರ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸಲುವಾಗಿ ಸುಮಾರು 540 ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿ ಸತ್ತೇಗಾಲ ಸಮೀಪದ ಅಣೆಕಟ್ಟಿನಿಂದ ಗುರುತ್ವಾಕರ್ಷಣೆಯ ಮೂಲಕ ಇಗ್ಗಲೂರಿನಲ್ಲಿರುವ ಬ್ಯಾರೇಜ್ಗೆ ನೀರು ಹರಿಸಲಾಗುವುದು. ಈಗ ಇರುವ ಕೆರೆ ತುಂಬಿಸುವ ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸಲಾಗುವುದು. ಅಲ್ಲಿಂದ ನೀರನ್ನು ಮೇಲಕ್ಕೆತ್ತಿ ಮಂಚನಬೆಲೆ ಮತ್ತು ವೈ.ಜಿ. ಗುಡ್ಡ ಜಲಾಶಯಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶ್ರೀಕ್ಷೇತ್ರ ಕೆಂಗಲ್ ಅಯ್ಯನಗುಡಿಯಲ್ಲಿ ಮೇ 15ರಿಂದ 18ರವರೆಗೆ ನಡೆಯಲಿರುವ ವಿಶ್ವ ಸಂರಕ್ಷಣ ಮಹಾಯಜ್ಞಕ್ಕೆ ದೇಗುಲದ ಅರ್ಚಕರು ಹಾಗೂ ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರು ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ. ಲೋಕಕಲ್ಯಾಣಕ್ಕಾಗಿ ಕೈಗೊಂಡಿರುವ ಈ ಪುಣ್ಯದ ಕಾರ್ಯವು ಫಲಪ್ರದವಾಗಲಿ ಎಂದು ಶಿವಕುಮಾರ್ ಶುಭಕೋರಿದ್ದಾರೆ. ಮೇ 11ಕ್ಕೆ ಯುವ ಕಾಂಗ್ರೆಸ್ ಸಮಾವೇಶ ಇದೇ ಮೇ 11ರಂದು ರಾಮನಗರದಲ್ಲಿ ಬೃಹತ್ ಯುವ ಕಾಂಗ್ರೆಸ್ ಸಮಾವೇಶ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಕೆ ಸುರೇಶ್, ಯುವ ಕಾಂಗ್ರೆಸ್ ನಾಯಕತ್ವ, ದೇಶದ ಹಿತರಕ್ಷಣೆಗೆ ಮುಂದಾಳತ್ವ ಎಂದಿದ್ದಾರೆ. ನಮ್ಮ ಒಗ್ಗಟ್ಟು ಹಾಗೂ ಪಕ್ಷನಿಷ್ಠೆಯನ್ನು ಪ್ರಚುರಪಡಿಸಲು ಇದೊಂದು ಸದಾವಕಾಶ. ಈ ಕಾರ್ಯಕ್ರಮದಲ್ಲಿ ನಾನೂ ಹೆಮ್ಮೆಯಿಂದ ಪಾಲ್ಗೊಳ್ಳುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಒಟ್ಟಾಗಿ ಬಂದು ಈ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದ್ದಾರೆ.

ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಜೀವಾಳ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಪಕ್ಷಕ್ಕೆ ಶಕ್ತಿಯನ್ನು ತುಂಬಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *