ರಾಮನಗರ || ರಾಮನಗರದಲ್ಲಿ ಯೂತ್ Congress ಸಮಾವೇಶ; ಯಾವ ಪುರುಷಾರ್ಥಕ್ಕೆ ಸಮಾವೇಶ ಇವರ ಸಾಧನೆ ಏನು ? Nikhil ಕಿಡಿ

ರಾಮನಗರ || ರಾಮನಗರದಲ್ಲಿ ಯೂತ್ Congress ಸಮಾವೇಶ; ಯಾವ ಪುರುಷಾರ್ಥಕ್ಕೆ ಸಮಾವೇಶ ಇವರ ಸಾಧನೆ ಏನು ? Nikhil ಕಿಡಿ

ರಾಮನಗರ : ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಲಾಗಿದೆ. ಎರಡು ವರ್ಷದಲ್ಲಿ ಕಾಂಗ್ರೆಸ್ ನಾಯಕರ ಸಾಧನೆ ಏನು? ಕಾಂಗ್ರೆಸ್ ಸರ್ಕಾರದ ಸಾಧನೆಗಳೇನು? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅವರು ಕಿಡಿಕಾರಿದರು.

ಭಾರತ-ಪಾಕ್ ಯುದ್ಧಕ್ಕೆ ನಮ್ಮ ಸಹಕಾರವಿದೆ ನಮ್ಮ ಸೇನೆಗೆ ನಾವು ಪ್ರೋತ್ಸಾಹಿಸಬೇಕು. ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ಈ ಸಂದರ್ಭದಲ್ಲಿ ನಾವು ಪ್ರಧಾನಿ ಮೋದಿಯವರಿಗೆ ಬೆಂಬಲ ಕೊಡಬೇಕು. ಆದರೆ ಕಾಂಗ್ರೆಸ್ ನವರು ಮಾತ್ರ ಶಾಂತಿ ಮಂತ್ರ ಜಪಿಸುತ್ತಾರೆ. ಇವರ ಮಕ್ಕಳಿಗೆ ಗನ್ ಪಾಯಿಂಟ್ ನಲ್ಲಿ ಇಟ್ಟಿದ್ರೆ ಹೀಗೆ ಹೇಳ್ತಿದ್ರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅವರು ಕಿಡಿಕಾರಿದರು.

ಪಹಲ್ಗಾಮ್ ದಾಳಿ ದಿನ ಒಂದೆಡೆ ಯುದ್ಧ ಆಗುತ್ತಿದೆ, ಮತ್ತೊಂದು ಕಡೆ ರಾಮನಗರದ ಶಾಸಕರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾವೇಶ ಮಾಡುತ್ತಾರೆ. ಪಹಲ್ಗಾಮ್ ದಾಳಿ ದಿನ ರಾಮನಗರದಲ್ಲಿ ಸೀರೆ ಹಂಚಿದ್ರು. ಸರಿಯಾದ ಅನುಕೂಲ ಮಾಡದೇ ಮಹಿಳೆಯರಿಗೆ ಹಲವು ರೀತಿ ಸಮಸ್ಯೆ ಆಯ್ತು.  ಈಗ ಯೂತ್ ಕಾಂಗ್ರೆಸ್ ಸಮಾವೇಶ ಮಾಡ್ತಿದ್ದಾರೆ. ಏನು ಸಾಧನೆ ಇದೆ ಎಂದು ಮಾಡ್ತಿದ್ದಾರೆ? ಇವರ ಸರ್ಕಾರದ ಸಾಧನೆ ಏನಿದೆ ಎಂದು ಯಾವ ಸಮಾವೇಶ ಮಾಡಿದ್ರು ಇವರ ಕಥೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮೇ ೨೫ ರಂದು ನಡೆಯುವ ಬಮೂಲ್ ಚುನಾವಣೆಗೆ ಸಂಬAಧಿಸಿದAತೆ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದ ಸಭೆಯನ್ನು ನಡೆಸಿದರು.

ಇದೇ ವೇಳೆ ಜಯಮುತ್ತು ಅವರ ಗೆಲುವಿಗಾಗಿ  ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕೆಂದು ಸೂಚಿಸಲಾಯಿತು. ಸಭೆಯಲ್ಲಿ ಜಿಲ್ಲೆಯ ಮುಖಂಡರು, ಕಾರ್ಯಕರ್ತರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಇದೇ ವೇಳೆ ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಜಯಮುತ್ತು ಅವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಆನಂದಸ್ವಾಮಿ ಅವರು, ಮುಖಂಡರುಗಳಾದ ಹಾಪ್ ಕಾಮ್ಸ್ ದೇವರಾಜು ಅವರು, ನಿಡಗೋಡಿ ಬಾಬು ಅವರು,  ಕುಕ್ಕೂರು ದೊಡ್ಡಿ ಜಯರಾಮ್ ಅವರು, ನಾಗರಾಜ್ ಅವರು, ರಾಮಚಂದ್ರು ಅವರು,  ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಮುಖಂಡರು,  ಪದಾಧಿಕಾರಿಗಳು, ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *