ರಾಮನಗರ: ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚನ್ನಪಟ್ಟಣ (Channapatna) ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಪ್ರಸಿದ್ಧ 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹದ ದೇವಾಲಯದಲ್ಲಿ ಮೀನಾ ತೂಗುದೀಪ ಪವಾಡ ಬಸಪ್ಪನ ಆಶೀರ್ವಾದ ಪಡೆದಿದ್ದಾರೆ. ಮಗನ ಸಂಕಷ್ಟಗಳನ್ನ ನಿವಾರಣೆ ಮಾಡುವಂತೆ ಪವಾಡ ಬಸಪ್ಪನ ಬಳಿ ಪ್ರಾರ್ಥನೆ ಮಾಡಿದ ಮೀನಾ ತೂಗುದೀಪಗೆ ಪವಾಡ ಬಸಪ್ಪ ತನ್ನ ಬಲಗಾಲನ್ನು ಕೊಟ್ಟು ಆಶೀರ್ವಾದ ಮಾಡಿದೆ.
ಇನ್ನೂ ಮೀನಾಗೆ ದೇವಾಲಯ ಆಡಳಿತ ಮಂಡಳಿಯಿಂದ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮೀನಾ, ಈ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಇಲ್ಲಿ ಎಲ್ಲಾ ಕಡೆ ಪಾಸಿಟಿವ್ ಎನರ್ಜಿ ಇದೆ. ಹಾಗಾಗಿ ಬಂದು ದರ್ಶನ ಪಡೆದಿದ್ದೇನೆ. ಇಲ್ಲಿಗೆ ಬರುವ ಎಲ್ಲಾ ಭಕ್ತರಿಗೂ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.