ತಮ್ಮ ಮುದ್ದು ಮುಖದ ಮೂಲಕ ಅನೇಕ ಅಭಿಮಾನಿಗಳ ಮನೆಗೆದ್ದಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ನಟನೆ ಆರಂಭಿಸಿದ ಇವರು ಟಾಲಿವುಡ್ ಹಾಗೆ ಬಾಲಿವುಡ್ನ ಬೇಡಿಕೆಯ ನಟಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಈಗ ಒಂದರ ಹಿಂದೆ ಒಂದು ಬಾಲಿವುಡ್ ಸಿನಿಮಾ ಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ರಶ್ಮಿಕ ನಟಿಸಿರುವ 3 ಹಿಂದಿ ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿದೆ ಒಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎರಡು ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗ ಮತ್ತೊಂದು ಹೊಸ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ರಶ್ಮಿಕ. ಬಾಲಿವುಡ್ ನ ಮತ್ತೊಬ್ಬ ಯುವ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಂಧಾಧುನ್, ಬದಾಯಿ ಹೋ, ಆರ್ಟಿಕಲ್ 15 ಇನ್ನು ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಆಯುಷ್ಮಾನ್ ಖುರಾನಾ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಸಿನಿಮಾ ವಿಜಯನಗರ ಸಾಮ್ರಾಜ್ಯದ ಕಥೆಯನ್ನು ಹೊಂದಿರಲಿದ್ದು ಸಿನಿಮಾದ ಚಿತ್ರೀಕರಣವನ್ನು ಹಂಪಿಯಲ್ಲಿ ಸಹ ಚಿತ್ರತಂಡ ನಡೆಸಲಿದೆ. ಇನ್ನು ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು ಒಂದು ಭಾಗ ಪ್ರಸ್ತುತ ಕಾಲದಲ್ಲಿ ನಡೆಯಲಿದ್ದು ಎರಡನೇ ಭಾಗ ವಿಜಯನಗರ ಸಾಮ್ರಾಜ್ಯದ ಕಾಲದ ಕಥೆಯನ್ನು ಹೊಂದಿರಲಿದೆ.
ಹಂಪಿ ಕಥೆಯಲ್ಲಿ ರಶ್ಮಿಕಾ ಮಂದಣ್ಣ!
