ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ. ಮೊದಲು ರವಿ ಬಸ್ರೂರು ಅವರ ಹೆಸರು ಘೋಷಣೆಯಾಗಿತ್ತು. ಆದರೆ ಈಗ ಅನಿರುದ್ಧ್ ಅವರ ಆಯ್ಕೆ ಖಚಿತವಾಗಿದೆ ಎನ್ನಲಾಗುತ್ತಿದೆ. ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಒಂದಿಲ್ಲೊಂದು ಅಪ್ಡೇಟ್ ಸಿಗುತ್ತಲೇ ಇದೆ. ಈ ಸಿನಿಮಾ ಪಾತ್ರವರ್ಗದ ಕಾರಣಕ್ಕೆ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜಕನ ಆಯ್ಕೆ ಸಂಪೂರ್ಣ ಫೈನಲ್ ಆಗಿದೆ. ಟಾಲಿವುಡ್ ಹಾಗೂ ಕಾಲಿವುಡ್ನ ಹಿಟ್ ಸಂಗೀತ ಸಂಯೋಜಕ ರಾಕ್ಸ್ಟಾರ್ ಅನಿರುದ್ಧ್ ರವಿಚಂದ್ರನ್ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡಲಿದ್ದಾರೆ ಎಂದು ವರದಿ ಆಗಿದೆ.
ಯಾವುದೇ ಸಿನಿಮಾ ಗಮನ ಸೆಳೆಯಬೇಕು ಎಂದರೆ ಮ್ಯೂಸಿಕ್ ಕೂಡ ಮುಖ್ಯವಾಗುತ್ತದೆ. ಈ ಮೊದಲು ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆದ ‘ಜೈಲರ್’ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದು ಅನಿರುದ್ಧ್ ಅವರೇ. ಈ ಹಾಡುಗಳು ಗಮನ ಸೆಳೆದವರು. ಚಿತ್ರದ ಬಿಜಿಎಂ ಕೂಡ ಪ್ರೇಕ್ಷಕರಿಂದ ಹೆಚ್ಚಿನ ಅಂಕ ಪಡೆಯಿತು. ಅನಿರುದ್ಧ್ ಅವರು ಈ ರೀತಿಯ ಹಲವು ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರನ್ನು ‘ಟಾಕ್ಸಿಕ್’ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.