RBI ಹಣಕಾಸು ನೀತಿ ಸಮಿತಿ ಸಭೆ ಆರಂಭ : ಹೇರಿಕೆಯಾಗುತ್ತಾ ಬಡ್ಡಿದರ..?

ಇನ್ಮುಂದೆ ನೀವು ಪರ್ಸ ತುಂಬಾ ಹಣ ಇಡುವಂತಿಲ್ಲ : RBI ಗವರ್ನರ್ ಸ್ಫೋಟಕ ಮಾಹಿತಿ

ನವದೆಹಲಿ: ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ (ಎಂಪಿಸಿ) ಆರಂಭವಾಗಿದ್ದು, ಈ ಬಾರಿಯೂ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಸಾಧ್ಯತೆಗಳಿವೆ ಎಂದು ಹಣಕಾಸು ತಜ್ಞರು ಸೋಮವಾರ ಹೇಳಿದ್ದಾರೆ.

ಅ.9ರಂದು ಆರ್ಬಿಐ ನಿರ್ಧಾರ ಪ್ರಕಟ: ಆರು ಸದಸ್ಯರ ಸಮಿತಿಯ ಸಭೆಯಲ್ಲಿ ಇಂದು ಬಡ್ಡಿದರಗಳ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಲಾಯಿತು. ಆರ್ಬಿಐ ಗವರ್ನರ್ ಅಕ್ಟೋಬರ್ 9ರಂದು ಎಂಪಿಸಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಹಣದುಬ್ಬರ ಹೆಚ್ಚಳ ಆತಂಕ: “ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅಸ್ಥಿರತೆ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಕಚ್ಚಾ ತೈಲ ಬೆಲೆಗಳ ಮೇಲಿನ ಪರಿಣಾಮದಿಂದ ಹಣದುಬ್ಬರ ಹೆಚ್ಚಾಗುವ ಆತಂಕ ಉಂಟಾಗಿದೆ” ಎಂದು ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಹೇಳಿದರು.

“ಹೆಚ್ಚಿನ ಬಡ್ಡಿದರಗಳ ಹೊರತಾಗಿಯೂ, ಭಾರತದ ಆರ್ಥಿಕ ಬೆಳವಣಿಗೆಯು ಚೇತರಿಸಿಕೊಂಡಿದೆ. ಮನೆ ಮಾರಾಟದಂತಹ ಬಳಕೆಯ ಸೂಚಕಗಳು ದೃಢವಾದ ಆವೇಗವನ್ನು ಕಾಯ್ದುಕೊಂಡಿವೆ. ಈ ಸುಸ್ಥಿರ ಬೆಳವಣಿಗೆಯು ರೆಪೊ ದರವನ್ನು ಅಸ್ತಿತ್ವದಲ್ಲಿರುವ ಶೇಕಡಾ 6.5 ರ ಮಟ್ಟದಲ್ಲಿರಿಸಲು ಆರ್ಬಿಐಗೆ ಸಾಕಷ್ಟು ಅನುಕೂಲಕರವಾಗಿದೆ” ಎಂದು ಬೈಜಾಲ್ ತಿಳಿಸಿದರು.

Leave a Reply

Your email address will not be published. Required fields are marked *