ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನಪ್ರಿಯ ಮತ್ತು ಫೆಮಸ್ ನಟಿಯರಿದ್ದಾರೆ. ಕೆಲವರು ತನ್ನ ನಿಜವಾದ ಹೆಸರಿನಿಂದ ಪ್ರಸಿದ್ಧಿಯಾಗಿದ್ದರೆ, ಇನ್ನು ಕೆಲವರು ನಟನೆ ಆರಂಭ ಮಾಡಿ ಕೆಲ ಕಾಲದ ನಂತರ ಕೆಲವು ಕಾರಣಂತರಗಳಿಂದ ತಮ್ಮ ಹೆಸರನ್ನ ಬದಲಾಯಿಸಿರುತ್ತಾರೆ. ಹಾಗಾದ್ರೆ ಬನ್ನಿ ನಮ್ಮ ಹೆಮ್ಮೆಯ ಕನ್ನಡ ನಟಿಯರ ನಿಜವಾದ ಹೆಸರುಗಳನ್ನ ತಿಳಿಯೊಣ.
ಕ್ರೇಜಿ ಕ್ವೀನ್ ಎಂಬ ಹೆಸರಿನಿಂದ ಕರೆಯಲ್ಪಡುವ ಚಲನಚಿತ್ರ ನಿರ್ಮಾಪಕ ಮತ್ತು ಕನ್ನಡ ಚಲನಚಿತ್ರಗಳ ನಟಿ ರಕ್ಷಿತಾ ಅವರ ನಿಜವಾದ ಹೆಸರು ಶ್ವೇತಾ.
ಕನ್ನಡ ಚಿತ್ರರಂಗಕ್ಕೆ ಸುಮಾರು 150 ಚಲನಚಿತ್ರಗಳಲ್ಲಿ ನಟಿಸಿರುವ ನಟಿ, ಧ್ವನಿ ಕಲಾವಿದೆ ಮತ್ತು ಮಾಜಿ ರೂಪದರ್ಶಿ ಯಾದ ಸುಧಾ ರಾಣಿ ಅವರ ನಿಜವಾದ ಹೆಸರು ಜಯಶ್ರೀ.
ಫಿಲ್ಮ್ಫೇರ್ ಪ್ರಶಸ್ತಿಗಳು, ಉದಯ ಪ್ರಶಸ್ತಿ ಮತ್ತು ಕರ್ನಾಟಕ ರಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿರುವಂತ, ಕರ್ನಾಟಕದ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ರಮ್ಯಾ ಅರವ ನಿಜವಾದ ಹೆಸರು ದಿವ್ಯಾ ಸ್ಪಂದನಾ.
ಕ್ಯೂಟ್ ಹಾಗೂ ಅದಿತಿ ಪ್ರಭುದೇವ ಎಂಬ ವೇದಿಕೆಯ ಹೆಸರಿನಿಂದ ಜನಪ್ರಿಯವಾಗಿ ಕರೆಯಲ್ಪಡುವ ಕನ್ನಡ ಚಿತ್ರರಂಗದಲ್ಲಿ ನಟಿಯ ನಿಜವಾದ ಹೆಸರು, ಸುದೀಪನ ಬಣಕಾರ್ ಪ್ರಭುದೇವ.
ಮಳೆ ಹುಡುಗಿ ಎಂದು ಪ್ರಸಿದ್ಧಿಯನ್ನ ಗಳಿಸಿ, ಒಂದು ದಶಕದಲ್ಲಿ ಐದು ಭಾಷೆಗಳಲ್ಲಿ ಮತ್ತು 50 ಚಲನಚಿತ್ರಗಳಲ್ಲಿ ನಟಿಸಿ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವಂತ ನಟಿ ಪೂಜಾ ಗಾಂಧಿಯವರ ಮೊದಲ ಹೆಸರು ಸಂಜನಾ ಗಾಂಧಿ.
ಒಂದು ಫಿಲ್ಮ್ಫೇರ್ ಪ್ರಶಸ್ತಿ ಸೌತ್ ಮತ್ತು ಮೂರು ಸೌತ್ ಇಂಡಿಯನ್ನ ಇಂಟರ್‌ನ್ಯಶನಲ್ ಮೂವೀ ಅವಾರ್ಡ್ಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದು, ಡಿಂಪಲ್ ಚೆಲುವೆ ಎಂದು ಫೇಮಸ್ ಆಗಿರುವ ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂದಿಯಾ ರಾಮ್.
ಬಿಗ್‌ಬಾಸ್ ಕನ್ನಡ ಸೀಸನ್ 3 ರ ವಿಜೇತರು, ಪ್ರಸ್ತುತ ಕರ್ನಾಟಕ ಕೇಡರ್‌ನಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತಿಯ ನಟಿ ಮತ್ತು ರಾಜಕಾರಣಿಯಾದ ಶೃತಿ ಅವರ ನಿಜವಾದ ಹೆಸರು ಗಿರಿಜಾ. ಮೂರು ದಶಕಗಳ ವೃತ್ತಿಜೀವನದಲ್ಲಿ ಸುಮಾರು 70 ಚಲನಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಅಗ್ರ ನಾಯಕಿಯರಲ್ಲಿ ಒಬ್ಬರಾಗಿ “ಕನಸಿನ ರಾಣಿ” ಎಂದು ಕರೆಸಿಕೊಳ್ಳುವ ಮಾಲಾಶ್ರೀ ಅವರ ನಿಜವಾದ ಹೆಸರು ಶ್ರೀ ದುರ್ಗಾ