BELನಲ್ಲಿ ನೇಮಕಾತಿ : ಸಾಫ್ಟ್ವೇರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Karnataka Health Promotion Trust Recruitment: ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ.

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ಟ್ರೈನಿ ಸಾಫ್ಟ್ವೇರ್, ಹಿರಿಯ ಸಾಫ್ಟ್ವೇರ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು, ಗಾಜಿಯಾಬಾದ್, ವಿಶಾಖಪಟ್ಟಣಂ, ಮುಂಬೈ, ಕೋಲ್ಕತ್ತಾ, ಕೊಚ್ಚಿಗಳಲ್ಲಿ ಈ ಹುದ್ದೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

ಹುದ್ದೆ ವಿವರ: ಒಟ್ಟು ಹುದ್ದೆ 40

•          ಸೀನಿಯರ್ ಸಾಫ್ಟ್ವೇರ್ ಟ್ರೈನಿ – 15

•          ಜೂನಿಯರ್ ಸಾಫ್ಟ್ವೇರ್ ಟ್ರೈನಿ – 15

•          ಸಾಫ್ಟ್ವೇರ್ ಪ್ರೊಫೆಷನಲ್ಸ್ – 10

ವಯೋಮಿತಿ: ಸೀನಿಯರ್ ಸಾಫ್ಟ್ವೇರ್ ಟ್ರೈನಿ ಹುದ್ದೆಗೆ ಅಭ್ಯರ್ಥಿಗಳ ಗರಿಷ್ಠ 18 ವರ್ಷ, ಜೂನಿಯರ್ ಸಾಫ್ಟ್ವೇರ್ ಟ್ರೈನಿ ಹುದ್ದೆಗೆ ಗರಿಷ್ಠ 26 ವಯೋಮಿತಿ, ಸಾಫ್ಟ್ವೇರ್ ಪ್ರೋಫೆಷನಲ್ಸ್ ಹುದ್ದೆಗೆ ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಎಂಸಿಎ, ಎಂಎಸ್ಸಿ, ಬಿಸಿಎ, ಬಿಎಸ್ಸಿ, ಬಿಇ ಅಥವಾ ಬಿಟೆಕ್ ಪದವಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡಲಾಗಿದೆ. ಜೂನಿಯರ್ ಸಾಫ್ಟ್ವೇರ್ ಟ್ರೈನಿ ಹುದ್ದೆಗೆ 150ರೂ, ಜೂನಿಯರ್ ಸಾಫ್ಟ್ವೇರ್ ಟ್ರೈನಿ ಹುದ್ದೆಗೆ 100, ಸಾಫ್ಟ್ವೇರ್ ಪ್ರೊಫೆಷನಲ್ ಹುದ್ದೆಗೆ 450 ರೂ ಆಗಿದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

ಈ ಹುದ್ದೆಗೆ ಅಭ್ಯರ್ಥಿಗಳು ಜೂನ್ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 30 ಆಗಿದೆ.

ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ bel-india.in ಭೇಟಿ ನೀಡಿ.

Leave a Reply

Your email address will not be published. Required fields are marked *