ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಮತ್ತು ಚಿತ್ರನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಜನರ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯ ರದ್ದು ಮಾಡಿರುವುದಕ್ಕೆ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ತೃಪ್ತಿ ಮತ್ತು ನಿರಾಳತೆಯನ್ನು ವ್ಯಕ್ತಪಡಿಸಿದ್ದಾರೆ.
ಕೋರ್ಟ್ ನಲ್ಲಿ ಇವತ್ತು ತೀರ್ಪು ಹೊರಬೀಳುವ ಸಮಯದಲ್ಲಿ ಕಾಶೀನಾಥಯ್ಯ ಲಿಂಗಪೂಜೆಗೆ ಕುಳಿತಿದ್ದರು, ಅವರ ಬೇಡಿಕೆ ಫಲಿಸಿದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೆಚ್ಚಾಗಿದೆ, ಹೈಕೋರ್ಟ್ ಅರೋಪಗಳಿಗೆ ಜಾಮೀನು ನೀಡಿದಾಗ ಆತಂಕ ಶುರುವಾಗಿತ್ತು, ಸರ್ಕಾರದ ವಿಶೇಷ ಕಾಳಜಿ ಮತ್ತು ಸರ್ವೋಚ್ಚ ನ್ಯಾಯಾಲಯ ತೀರ್ಪು ಅಪರಾಧಿಗಳು ಎಷ್ಟೇ ದೊಡ್ಡವರಾಗಿದ್ರೂ ಕಾನೂನಿಂದ ಪಾರಾಗಲಾರರು ಎಂಬ ಸಂದೇಶ ನೀಡಿದೆ ಎಂದು ಕಾಶೀನಾಥಯ್ಯ ಹೇಳಿದರು.