ದಾನಗಳಲ್ಲಿ ಮಹತ್ವ ದಾನ ರಕ್ತದಾನ. ರಕ್ತದಾನ ಮಾಡಿದ್ರೆ ಇದು ಕೇವಲ ಜೀವ ಅಪಾಯದಲ್ಲಿರುವವರ ಪ್ರಾಣ ಉಳಿಸುವುದು ಮಾತ್ರವಲ್ಲ, ರಕ್ತದಾನ ಮಾಡುವವರಿಗೂ ಒಳ್ಳೆಯದು. ದೇಹದಿಂದ ತಿಂಗಳಿಗೆ ಅಥವಾ ವರ್ಷಕ್ಕೆ ರಕ್ತ ಬದಲಾವಣೆ ಆಗಬೇಕು. ಹೀಗೆ ಮಾಡುವುದರಿಂದ ಹೊಸ ರಕ್ತದ ಉತ್ಪಾದನೆಗೆ ಅವಕಾಶ ನೀಡುತ್ತದೆ. ಇದರ ಜತೆಗೆ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಹೇಳಲಾಗಿದೆ. ರಕ್ತದಾನ ಮಾಡುವುದರಿಂದ ಅಪಾಯಕಾರಿ ಕಾಯಿಲೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ರಕ್ತದಾನ ಮಾಡುವುದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.

ರಕ್ತದಾನ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು: ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯ ಹೇಳಿರುವ ಪ್ರಕಾರ ರಕ್ತದಾನ ಮಾಡುತ್ತಿರುವ ಜನರಿಗೆ ಲ್ಯುಕೇಮಿಯಾದಂತಹ ರಕ್ತ ಸಂಬAಧಿತ ಕ್ಯಾನ್ಸರ್‌ಗಳು ಬರುವ ಅಪಾಯ ಕಡಿಮೆ. ರಕ್ತದಾನ ಮಾಡುವುದರಿಂದ ದೇಹವು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದರಿಂದಾಗಿ ಅಪಾಯಕಾರಿ ರೂಪಾಂತರಗಳ ಅಪಾಯ ಕಡಿಮೆಯಾಗುತ್ತದೆ.
ರಕ್ತದಾನ ಹೃದಯಕ್ಕೆ ಒಳ್ಳೆಯದು: ರಕ್ತದಾನ ಮಾಡುವುದರಿಂದ ರಕ್ತದ ದಪ್ಪ ಆಗುವುದಿಲ್ಲ. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಹೆಚ್ಚುವರಿ ಕಬ್ಬಿಣವು ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಹೃದ್ರೋಗಕ್ಕೆ ಕಾರಣವಾಗಬಹುದು.
ಮಧುಮೇಹ ಅಪಾಯ ಕಡಿಮೆ: ರಕ್ತದಾನ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆಯು ಹೆಚ್ಚಾಗಬಹುದು, ಇದು ಟೈಪ್ ೨ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಉಚಿತ ಆರೋಗ್ಯ ತಪಾಸಣೆ: ರಕ್ತದಾನ ಮಾಡುವ ಮೊದಲು ಆರೋಗ್ಯದ ಪರೀಕ್ಷೆ ಮಾಡುವುದು ಕಡ್ಡಾಯ. ರಕ್ತದೊತ್ತಡ, ಹಿಮೋಗ್ಲೋಬಿನ್, ನಾಡಿಮಿಡಿತ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ. ಆರೋಗ್ಯದಲ್ಲಿ ಏನಾದರೂ ಸಮಸ್ಯ ಇದ್ದರೆ ಇದರಿಂದ ಕಡಿಮೆ ಆಗುತ್ತದೆ.