ಭಾರತ ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಆರ್ಬಿ ಅರ್ಹ ಅಭ್ಯರ್ಥಿಗಳಿಗೆ 2024ರ ಸಮ್ಮರ್ ಇಂಟರ್ನ್ಶಪ್ ನೀಡಲು ಅರ್ಜಿ ಆಹ್ವಾನಿಸಿದೆ. 2025 ರ ಏಪ್ರಿಲ್ ತಿಂಗಳಿನಿಂದ ಇದು ಆರಂಭವಾಗಲಿದ್ದು, ಈ ಇಂಟರ್ನ್ಶಿಪ್ ಗೆ ವಾಣಿಜ್ಯ, ಕಾನೂನು, ಅರ್ಥಶಾಸ್ತ್ರ, ಹಣಕಾಸು, ಬ್ಯಾಂಕಿಂಗ್ ಎಕನಾಮೆಟ್ರಿಕ್ಸ್, ಮ್ಯಾನೇಜ್ಮೆಂಟ್ ಸ್ಟಾಟಿಟಿಕ್ಸ್ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಿರುವವರಲ್ಲಿ ಅರ್ಹ ಅಭ್ಯರ್ಥಿಗಳಿಗೆ ಆರ್ ಬಿ ಐ ಕಚೇರಿಗಳಲ್ಲಿ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೋತೆಗೆ ಒಂದು ಇಂಟರ್ನ್ಶಿಪ್ ಗೆ ಒಟ್ಟು 125 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಇನ್ನು ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 20,000ರೂ. ಸ್ಟೈಪೆಂಡ್ ನೀಡಲಾಗುವುದು. ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇದೇ ಡಿಸೆಂಬರ್ 15ನೇ ತಾರೀಕಿನ ಒಳಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ: https://rbi.org.in/