ರೋರಿಂಗ್ ಸ್ಟಾರ್ ಶ್ರೀಮುರಳಿ ಮೂರು ವರ್ಷ ಕಾದಿದ್ದಕ್ಕೂ ಒಳ್ಳೆಯ ರಿಸಲ್ಟ್ ಸಿಕ್ಕಿದೆ. ಬೆಳಕಿನ ಹಬ್ಬ ದೀಪಾವಳಿಗೆ ಬೇರೆ ಭಾಷೆಯಲ್ಲೂ ಸಿನಿಮಾಗಳು ರಿಲೀಸ್ ಆಗಿದ್ದವು. ‘ಬಘೀರ’ ಕೂಡ ದೀಪಾವಳಿ ಹಬ್ಬದ ಹಿನ್ನಲೆ ರಿಲೀಸ್ ಆಗಿತ್ತು. ಎಲ್ಲ ಸಿನಿಮಾಗಳ ಮಧ್ಯ ‘ಬಘೀರ’ನದ್ದೆ ಹವಾ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ‘ಬಘೀರ’ ಸಿನಿಮಾಗೆ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪಾಸಿಟಿವ್ ರೆಸಲ್ಟ್ ಸಿಗುತ್ತಿದೆ. ನಾಲ್ಕು ದಿನಗಳ ರಜೆಯನ್ನು ಈ ಸಿನಿಮಾ ಸರಿಯಾಗಿ ಬಳಸಿಕೊಂಡಿದ್ದು, ಬಾಕ್ಸಾಫೀಸ್ನಲ್ಲಿ ಒಂದೊಳ್ಳೆ ಮೊತ್ತವನ್ನು ಕಲೆ ಹಾಕಿದೆ. ಶ್ರೀಮುರಳಿ ಅವರು ಭರಾಟೆ ಸಿನಿಮಾದ ನಂತರ ಈ ಸಿನಿಮಾದಲ್ಲಿ ನಟಿಸಿದ್ದು, ಸರಿಸುಮಾರು 4 ವರ್ಷದ ನಂತರ ಅವರ ಸಿನಿಮಾ ತೆರೆ ಕಂಡರೂ ಸಕ್ಸಸ್ ಕಂಡಿದೆ. 4ನೇ ದಿನವೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಇಂಡಸ್ಟ್ರೀ ಟ್ರ್ಯಾಕರ್ sacnilk ಪ್ರಕಾರ, 3.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿತರಕರ ವಲಯದಲ್ಲೂ 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿರುವ ಬಗ್ಗೆ ಲೆಕ್ಕ ಹಾಕಲಾಗಿದೆ. ಇನ್ನು ನಾಲ್ಕು ದಿನಗಳು ಕೂಡ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟು 4 ದಿನಗಳು ಅಂದ್ರೆ ಸಿನಿಮಾ ರಿಲಿಸ್ ಆದ ದಿನದಿಂದ ಇಲ್ಲಿಯವರೆಗೆ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಬಘೀರ’ 4 ದಿನಗಳ ಕಲೆಕ್ಷನ್ ಹೀಗಿದೆ : ಮೊದಲ ದಿನ 3.25 ಕೋಟಿ ರೂ., ಎರಡನೇ ದಿನ 3.30 ಕೋಟಿ ರೂ., ಮೂರನೇ ದಿನ 3.50 ಕೋಟಿ ರೂ., ನಾಲ್ಕನೇ ದಿನ 3.15 ಕೋಟಿ ರೂ. ಒಟ್ಟು 13.15 ಕೋಟಿ ರೂ.
Related Posts
60 ಲಕ್ಷ ‘BPL ಕಾರ್ಡ್’ ರದ್ದು ಮಾಡಲು ರಾಜ್ಯ ಸರ್ಕಾರ ಸಿದ್ದತೆ : ಆರ್ .ಅಶೋಕ್ ಹೊಸ ಬಾಂಬ್
ಬೆಂಗಳೂರು : 60 ಲಕ್ಷ ‘ಬಿಪಿಎಲ್ ಕಾರ್ಡ್’ ರದ್ದು ಮಾಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.…
ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟಿ ರಚಿತಾ ರಾಮ್
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರಿಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ನಟಿ 32ನೇ ವಸಂತಕ್ಕೆ ಕಾಲಿಡಲಿದ್ದಾರೆ.…
ಪರಿಶಿಷ್ಟ ಜಾತಿ ಯುವಜನರ ಸ್ವಾವಲಂಬನೆಗೆ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪರಿಶಿಷ್ಟ ಜಾತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರ ಸ್ವಾವಲಂಬನೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ…