ಮರಳು ಗಲಾಟೆ ಒಬ್ಬ ಸಾವು ಮತ್ತೊಬ್ಬ ಗಂಭೀರ

Sand riot one death and another serious

ನ್ಯಾಮತಿ : ನದಿ ಪಾತ್ರದ ಮರಳು ಸಂಗ್ರಹದ ವಿಚಾರಕ್ಕೆ ಸಂಬAಧಿಸಿದAತೆ ಇಂದು ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬ ವ್ಯಕ್ತಿ ಚಾಕುವಿನ ಇರಿತಕ್ಕೆ ಕೊನೆ ಉಸಿರೆಳೆದಿದ್ದು. ಮತ್ತೊಬ್ಬ ವ್ಯಕ್ತಿಗೆ ತೀವ್ರ ಹಾನಿಯಾಗಿರುವ ಘಟನೆ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

 ಮರಿಗೊಂಡನಹಳ್ಳಿ, ಕೋಟೆಹಾಳ್ ಗ್ರಾಮ ವ್ಯಾಪ್ತಿಯ ನದಿ ಪಾತ್ರದ ಮರಳಿನ ವಿಚಾರವಾಗಿ, ಮರಿಗೊಂಡನಹಳ್ಳಿ ಚೀಲೂರು ಕಡದಕಟ್ಟೆ ಗ್ರಾಮಸ್ಥರ ನಡುವೆ ನಡೆದ ಘಟನೆ ಇದಾಗಿದೆ.

 ಚೀಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾಗಿದ್ದ ಸತೀಶ್ ರವರು ಮರಳು ಸಂಗ್ರಹದ ವಿಚಾರವಾಗಿ ಸಂಬAಧಪಟ್ಟ ಗಣಿ & ಭೂ -ವಿಜ್ಞಾನ ಇಲಾಖೆಗೆ ದೂರು ನೀಡಿದ್ದರಿಂದ ಇಲಾಖೆಯ ಅಧಿಕಾರಿಗಳು ಇಂದು ಸ್ಥಳಕ್ಕೆ ಬಂದು ಮರಿಗೊಂಡನಹಳ್ಳಿ ಸರ್ಕಾರಿ ಶಾಲೆ ಬಳಿ ಸಂಗ್ರಹವಾಗಿದ್ದ ಮರಳನ್ನು ಪರಿಶೀಲಿಸಿ ಪರವಾನಗಿ ಪಡೆದು ಬಳಸುವಂತೆ ಸೂಚನೆ ನೀಡಿದ್ದರಿಂದ ಗ್ರಾಮಸ್ಥರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುತ್ತೀಯಾ ಎಂದು ದೂರುದಾರ ಸತೀಶ್ ಗೆ ತರಾಟೆಗೆ ತೆಗೆದುಕೊಂಡಿದ್ದರೆನ್ನವಾಗಿದೆ.

 ಈ ಸಂದರ್ಭದಲ್ಲಿ ಸತೀಶ್ ತನ್ನ ಮಗ ಅಭಿಷೇಕಗೆ ಕರೆ ಮಾಡಿದ್ದು. ಸ್ಥಳಕ್ಕೆ ಆಗಮಿಸಿದ ಅಭಿಷೇಕ್ ಸ್ಥಳದಲ್ಲಿದ್ದ ಮರಿಗೊಂಡನಹಳ್ಳಿ ಶಿವರಾಜ್ ಎಂಬ ವ್ಯಕ್ತಿಗೆ ಚಾಕುವಿನಿಂದ ಎದೆಗೆ ಇರಿದಿದ್ದು  ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳುವಾಗ ಶಿವರಾಜ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ, ಮತ್ತೊಬ್ಬ ಮರಿಗೊಂಡನಹಳ್ಳಿ ಗ್ರಾಮದ ಭರತ್ ಗೆ  ಚಾಕುವಿನಿಂದ   ಬೆನ್ನಿನ ಭಾಗಕ್ಕೆ ಇರಿದಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.  ಸ್ಥಳಕ್ಕೆ ಜಿಲ್ಲಾ ಎಸ್. ಪಿ. ಉಮಾ ಪ್ರಶಾಂತ್, ನ್ಯಾಮತಿ ಪಿ.ಐ. ರವಿ, ಹೊನ್ನಾಳಿ ಪಿ. ಐ. ಎಚ್.ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *