Sandur Bypolls Result 2024 : ಸಂಡೂರಿನಲ್ಲಿ ಕಾಂಗ್ರೆಸ್ಗೆ ಭರ್ಜರಿ ಗೆಲುವು

Sandur Bypolls Result 2024 : ಸಂಡೂರಿನಲ್ಲಿ ಕಾಂಗ್ರೆಸ್ಗೆ ಭರ್ಜರಿ ಗೆಲುವು

ಸಂಡೂರಿನಲ್ಲಿ ಅಧರ್ಮ ಗೆಲುವು ಸಾಧಿಸಿದೆ; ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತು ಪ್ರತಿಕ್ರಿಯೆ

”ಸಂಡೂರು ಉಪಚುನಾವಣೆಯಲ್ಲಿ ಹಣಬಲ ಕೆಲಸ ಮಾಡಿದ್ದು, ಅಧರ್ಮ ಗೆಲುವು ಸಾಧಿಸಿದೆ. ಗೆಲ್ಲುವುದಾಗಿ ನಮ್ಮ ಪಕ್ಷದ ನಾಯಕರಿಗೆ ಮಾತುಕೊಟ್ಟಿದ್ದೆ. ಆದರೆ, ಆ ಮಾತು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸೋಲಿನ ಹೊಣೆ ನಾನೇ ಹೋರುತ್ತೇನೆ. ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಕೆಲಸ ಮಾಡಿದ್ದಾರೆ. ಮತದಾನ ಹಿಂದಿನ ದಿನ ಗ್ಯಾರಂಟಿ ಯೋಜನೆಯ ಹಣವನ್ನು ಜನರ ಖಾತೆಗೆ ಜಮಾಮಾಡಲಾಗಿದೆ. ಶಿವರಾಜ್ ತಂಗಡಗಿ ದರೋಜಿ ಭಾಗದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಪ್ರಚಾರಕ್ಕೂ ಹಣ ಕೊಟ್ಟು ಜನರನ್ನು ಸೇರಿಸಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಮುಸ್ಲಿಂ, ಕುರುಬ ಸಮುದಾಯದ ಮತಗಳು, ಅಂಕಿ-ಅಂಶಗಳ ಪ್ರಕಾರ ನಾನು ಸೋತರು ಗೆದ್ದಂತೆ. 2028ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ” ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತಿಳಿಸಿದ್ದಾರೆ.

Leave a Reply

Your email address will not be published. Required fields are marked *