ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನಂತರ ಸತೀಶ್ ಜಾರಕಿಹೊಳಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಎಂಎಲ್ಸಿ ಯತೀಂದ್ರ ಹೇಳಿಕೆ ಕುರಿತು ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆ ಅಹಿಂದ ವರ್ಗದ ಸೈದ್ಧಾಂತಿಕ ನಾಯಕತ್ವದ ಬಗ್ಗೆಯೇ ಹೊರತು ಸಿಎಂ ಸ್ಥಾನದ ಬಗ್ಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾರಕಿಹೊಳಿ ಅಹಿಂದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಎಂ ಅಧಿಕಾರದ ಅವಧಿ ಪೂರ್ಣವಾಗಿದ್ದು, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು ಹೈಕಮಾಂಡ್ ಮತ್ತು ಸಿಎಲ್‌ಪಿ ಸಭೆಯ ಮೂಲಕ ನಡೆಯುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
For More Updates Join our WhatsApp Group :
