ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ರ ಪ್ರೊಬೇಷನರಿ ಆಫೀಸರ್ (PO) ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಮುಖ್ಯ ಪರೀಕ್ಷೆ ಸೆಪ್ಟೆಂಬರ್ 13, 2025 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.ಆಗಸ್ಟ್ 2, 4 ಮತ್ತು 5ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಯಲ್ಲಿ ಹಾಜರಾಗುವ ಅವಕಾಶವಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 541 ಪಿಒ ಹುದ್ದೆಗಳು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 500 ನಿಯಮಿತ ಮತ್ತು 41 ಬ್ಯಾಕ್ಲಾಗ್ ಹುದ್ದೆಗಳಿವೆ.
ಪ್ರವೇಶ ಪತ್ರ ಮಾಹಿತಿ
* ಪಿಒ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷೆಗೆ 7 ದಿನಗಳ ಮುಂಚೆ sbi.co.inವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
* ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಡೌನ್ಲೋಡ್ ಮಾಡಿಕೊಳ್ಳಬೇಕು.
* ಹಾಲ್ ಟಿಕೆಟ್ ಇಲ್ಲದೆ ಪರೀಕ್ಷಾ ಹಾಲ್ಗೆ ಪ್ರವೇಶ ಇಲ್ಲ.
* ಹಾಲ್ ಟಿಕೆಟ್ ಜೊತೆಗೆ ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಮತದಾರರ ಚೀಟಿ ಹೀಗೆ ಫೋಟೋ ಹೊಂದಿರುವ ಗುರುತಿನ ಚೀಟಿ ಕಡ್ಡಾಯ.
**ಹಾಲ್ ಟಿಕೆಟ್ ಡೌನ್ಲೋಡ್ ವಿಧಾನ:
1. sbi.co.in ಗೆ ಭೇಟಿ ನೀಡಿ
2. Career ವಿಭಾಗ ಕ್ಲಿಕ್ ಮಾಡಿ
3. “PO Mains Admit Card 2025” ಲಿಂಕ್ ಆಯ್ಕೆಮಾಡಿ
4. ನೋಂದಣಿ ಸಂಖ್ಯೆ/ಜನ್ಮ ದಿನಾಂಕ ನಮೂದಿಸಿ
5. ಹಾಲ್ ಟಿಕೆಟ್ ಪರಿಶೀಲಿಸಿ, ಮುದ್ರಿಸಿ
ಪರೀಕ್ಷಾ ಮಾದರಿ
* ಮುಖ್ಯ ಪರೀಕ್ಷೆಯಲ್ಲಿ 4 ವಿಭಾಗಗಳು:
1. Reasoning & Computer Aptitude
2. English Language
3. Data Analysis & Interpretation
4. General/Economy/Banking Awareness
ವಸ್ತುನಿಷ್ಠ ಪರೀಕ್ಷೆ – 200 ಅಂಕಗಳು ವಿವರಣಾತ್ಮಕ ಪರೀಕ್ಷೆ– 50 ಅಂಕಗಳು (ಕಂಪ್ಯೂಟರ್‌ನಲ್ಲಿ ಉತ್ತರ ಟೈಪ್ ಮಾಡಬೇಕು) ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ.
For More Updates Join our WhatsApp Group :