ಹಿರಿಯ ನಾಗರಿಕರ ದಿನ || ಶೇಷಾಯುಷ್ಯವನ್ನು ಘನತೆಯಿಂದ ಕಳೆಯಲು ಬೇಕು ಈ ಸೂತ್ರಗಳು

ಹಿರಿಯ ನಾಗರಿಕರ ದಿನ || ಶೇಷಾಯುಷ್ಯವನ್ನು ಘನತೆಯಿಂದ ಕಳೆಯಲು ಬೇಕು ಈ ಸೂತ್ರಗಳು

ಬರಹ : – ಜಿ.ಕೆ. ಕುಲಕರ್ಣಿ,ದಾವಣಗೆರೆ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಈ ವರ್ಷದ ಘೋಷಣೆ ಘನತೆಯಿಂದ ವಯಸ್ಸನ್ನು ಕಳೆಯೋಣ’.ಅಂದರೆ ಹಿರಿಯ ನಾಗರಿಕರು ಘನತೆಯಿಂದ ತಮ್ಮ ಶೇಷಾಯುಷ್ಯವನ್ನು ಕಳೆಯುವುದು ಬಹು ಮುಖ್ಯ. ಘನತೆಯಿಂದ ಕಳೆಯಬೇಕಾದರೆ ಈ ವಯಸ್ಸಿನಲ್ಲಿ ಅವರಿಗೆ ಒಳ್ಳೆಯ ಆರೋಗ್ಯ ,ಆರ್ಥಿಕ ಬೆಂಬಲ ಮತ್ತು ಮನೆಯವರ ಮತ್ತು ಸಮಾಜದ .ಆರೈಕೆ ಬಹು ಮುಖ್ಯ .ಈ ನಿಟ್ಟಿನಲ್ಲಿ ಹಿರಿಯ ನಾಗರಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲ ಮೂಲಭೂತ ಸೂತ್ರಗಳನ್ನು ಜೀವನದಲ್ಲಿ ಅನುಸರಿಸುವದು ಬಹು ಮುಖ್ಯ, ಆ ಸೂತ್ರಗಳು ಇಂತಿವೆ .

 ■ ದೈಹಿಕವಾಗಿ ಎಲ್ಲ ಹಿರಿಯರು ಸಕ್ರಿಯವಾಗಿರಲು ಪ್ರಯತ್ನಿಸಬೇಕು .ಕೇವಲ ಒಂದೆಡೆ ಕುಳಿತುಕೊಳ್ಳುವುದಾಗಲಿ, ಮಲಗುವುದಾಗಲಿ ಮಾಡಬಾರದು .

 ■ ನಡಿಗೆ ತುಂಬಾ ಒಳ್ಳೆಯದಾದ ವ್ಯಾಯಾಮ .ಹೆಚ್ಚಿನ ವ್ಯಾಯಾಮ ಮಾಡಬೇಕಾದಲ್ಲಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ ..

 ■ ಆಹಾರ ಸೇವನೆಯಲ್ಲಿ ಸಮತೋಲ ವಿರಲಿ .ಸಮತೋಲ ಆಹಾರ ಸೇವಿಸಿರಿ .

 ■ಬೊಜ್ಜು ಸಂಗ್ರಹ ಸಾಧ್ಯತೆ ಇದ್ದವರು ,ಆಹಾರ ಮತ್ತು ವ್ಯಾಯಾಮದಿಂದ ಅದನ್ನು ದೂರವಿಡಲು ಪ್ರಯತ್ನಿಸಬೇಕು .

 ■ಯಾವುದೇ ಮಾತ್ರೆ ಇಲ್ಲದೆ ಒಳ್ಳೆಯ ನಿದ್ರೆ ಮಾಡುವುದು ತುಂಬಾ ಒಳ್ಳೆಯದು. ಹಗಲು ಹೊತ್ತಿನಲ್ಲಿ ದೈಹಿಕ ಶ್ರಮವಿದ್ದರೆ ರಾತ್ರಿ  ನಿದ್ರೆ ಬರುತ್ತದೆ

 ■ವೈಯಕ್ತಿಕ ಸ್ವಚ್ಛತೆಯ ಬಗೆಗೆ ಗಮನವಿರಲಿ .ಪ್ರತಿದಿನವೂ ತಪ್ಪದೇ ಸ್ನಾನ ಮಾಡಲಿ .ಸ್ನಾನ ಮಾಡುವಾಗ ಅಗಲವಾಗಿರುವ ಸ್ಟೂಲ್ ಮೇಲೆ ಕುಳಿತುಕೊಂಡು ಸ್ನಾನ ಮಾಡಲಿ .ಅತಿಯಾದ ಸೋಪು ಉಪಯೋಗಿಸುವುದು ಬೇಡ .ಚರ್ಮ ಒಣ ಆಗುತ್ತದೆ .

 ■ಸರಿಯಾದ ರೀತಿಯಲ್ಲಿ ಆಹಾರ ದೈಹಿಕ ಶ್ರಮ ,ಸ್ವಚ್ಛತೆಯ ಅಭ್ಯಾಸಗಳನ್ನು ಅನುಸರಿಸಿದರೆ ಮಲಬದ್ಧತೆ ಯಾಗುವುದಿಲ್ಲ .ಪಾಶ್ಚಿಮಾತ್ಯ ಕಮೋಡ್ ಉಪಯೋಗಿಸುವುದು ಒಳ್ಳೆಯ .

 ■ಏಕತಾನತೆಯಿಂದ ದೂರವಿರಿ .ಆದ್ದರಿಂದ ಸ್ನೇಹಿತರು ಬಂಧು ಬಳಗ ನೆರೆಹೊರೆಯವರೊಂದಿಗೆ ಸಂಬಂಧವಿಟ್ಟು ಕೊಳ್ಳುವುದು ಒಳ್ಳೆಯದು .

 ■ಅರ್ಥೈಟಿಸ್, ಬಿಪಿ ,ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವವರು ವೈದ್ಯರ ಮಾರ್ಗದರ್ಶನದಲ್ಲಿ ಔಷಧ ಉಪಚಾರಗಳಿಂದ ಉಪಯುಕ್ತ ಜೀವನ ನಡೆಸಬಹುದು .

 ■ವಯಸ್ಸಾದವರಲ್ಲಿ ಸಾಮಾನ್ಯವಾಗಿ ಮೂತ್ರನಾಳದ ಸೋಂಕು ಕಂಡು ಬರಬಹುದು. ಅದನ್ನು ತಡೆಯುವುದಕ್ಕಾಗಿ ಹೆಚ್ಚು ನೀರನ್ನು ,ದ್ರವ ಪದಾರ್ಥವನ್ನು ಕುಡಿಯಿರಿ .ಸಾಯಂಕಾಲದ ನಂತರ ದ್ರವ ಪದಾರ್ಥಗಳನ್ನು ಕಡಿಮೆ ಮಾಡಿ   ಸರಿಯಾದ ಮುಂಜಾಗ್ರತ ಕ್ರಮಗಳನ್ನು ಕೈಕೊಂಡರೆ ವೈಯಕ್ತಿಕ ಅಪಘಾತಗಳನ್ನು ತಪ್ಪಿಸಿಕೊಳ್ಳಬಹುದು.

Leave a Reply

Your email address will not be published. Required fields are marked *