ಶಹಜಹಾನ್ಪುರ : ಅಧಿಕಾರವಹಿಸಿಕೊಂಡ ದಿನವೇ ಐಎಎಸ್ ಅಧಿಕಾರಿ ಯೊಬ್ಬರು ವಕೀಲರೆದುರು ಬಸ್ಕಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅವರು ಮಾಡಿದ ತಪ್ಪೇನು ಎಂದು ಪ್ರಶ್ನೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಎಸ್ಡಿಎಂ ಆಗಿ ಪೋಸ್ಟ್ ಮಾಡಲಾದ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ಅವರ ವಿಡಿಯೋ ಇದಾಗಿದೆ.
ರಿಂಕು ಸಿಂಗ್ ಅವರ ಪ್ರಕಾರ,ಮಂಗಳವಾರ ಪುವೈಯನ್ ತಹಸಿಲ್ನಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(SDM)ಆಗಿ ನೇಮಕಗೊಂಡ ಮೊದಲ ದಿನವಾಗಿತ್ತು. ತಪಾಸಣೆ ಸಮಯದಲ್ಲಿ ಆವರಣವು ತೀರಾ ಕೊಳಕಾಗಿತ್ತು. ಕೆಲವರು ತೆರೆದ ಸ್ಥಳದಲ್ಲೇ ಮೂತ್ರ ವಿಸರ್ಜಿಸುತ್ತಿದ್ದರು. ವಕೀಲರು ಆವರಣದಲ್ಲಿರುವ ಕೊಳಕು ಶೌಚಾಲಯ ಹಾಗೂ ಅಶುಚಿತ್ವದ ಕುರಿತು ಪ್ರತಿಭಟನೆ ನಡೆಸಿದರು. ರಿಂಕ್ ಸಿಂಗ್ ಕೂಡಾ ಈ ಧರಣಿಯಲ್ಲಿ ಪಾಲ್ಗೊಂಡು ಬಸ್ಕಿ ಹೊಡೆದಿದ್ದಾರೆ.
ರಾಹಿ ಅವರು ಈ ಹಿಂದೆ ಜನರಿಗೆ ಶೌಚಾಲಯ ಬಳಸುವಂತೆ ಸಲಹೆ ನೀಡಿದ್ದರು, ಆದರೆ ಕೆಲವರು ನಿರಾಕರಿಸಿ ತಹಸಿಲ್ ಆವರಣದಲ್ಲಿ ತೆರೆದ ಸ್ಥಳದಲ್ಲಿ ಮೂತ್ರ ವಿಸರ್ಜಿಸುವುದನ್ನು ಮುಂದುವರೆಸಿದ್ದರು. ತಾವು ಎಷ್ಟೇ ಹೇಳಿದರೂ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಬೇಸರದಿಂದ ಅವರಿಗೆ ಅವರೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ.