ಉತ್ತರ ಪ್ರದೇಶ : ಇತ್ತೀಚೆಗೆ ಹೆಂಡತಿ ಮತ್ತು ಪ್ರೆಯಸಿಯರು ತಮ್ಮ ಗಂಡನನ್ನು ಕೊಲೆ ಮಾಡುವ ಪ್ರಕರಣ ಹೆಚ್ಚಾಗಿದೆ. ಹೊಸ ಹೊಸ ವಿಧದಲ್ಲಿ ಕೊಲೆ ನಡೆದು ಶವವನ್ನು ಹೂತುಹಾಕುತ್ತಿರುವ ಘಟನೆಗಳು ಸಮಾಜದ ಸ್ವಾಸ್ಥ್ಯದ ಬಗ್ಗೆ ಆತಂಕ ಮೂಡಿಸಿವೆ. ಉತ್ತರ ಪ್ರದೇಶದ ಲಲಿತಪುರದಲ್ಲಿ ಮಾಜಿ ಪ್ರೇಯಸಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ನಂತರ ಪೊಲೀಸರ ಬಳಿ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿ ರಾಣಿಯ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಅವಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ನಂತರ ಪೊಲೀಸರು ಮಹಿಳೆಯ ಕೈಯಲ್ಲಿ ‘ಆರ್-ಜಗದೀಶ್’ ಎಂದು ಬರೆದಿರುವುದನ್ನು ನೋಡಿದರು, ಅದು ಯುವತಿಯನ್ನು ಗುರುತಿಸಲು ಸಹಾಯ ಮಾಡಿತು.

ಇದರ ನಡುವೆ ಮಾಜಿ ಲಿವ್ ಇನ್ ರಿಲೇಷನ್ ಸಂಗಾತಿಗೆ ವಿಷ ಹಾಕಿ ಕೊಂದಿರುವ ಯುವಕನೊಬ್ಬ ‘ಅವಳು ಸಾಯಲು ಬಯಸಿದ್ದಳು, ಅದಕ್ಕೆ ನಾನೇ ಅವಳನ್ನು ಕೊಂದೆ’ ಎಂದು ಹೇಳುವ ಮೂಲಕ ಪೊಲೀಸರಿಗೇ ಶಾಕ್ ನೀಡಿದ್ದಾನೆ.ಉತ್ತರ ಪ್ರದೇಶದ ಲಲಿತಪುರದಲ್ಲಿ ಈ ಘಟನೆ ನಡೆದಿದೆ.