ಶಿರಾ || ಶಿರಾ ನಗರಸಭೆಯಲ್ಲಿ ಸಭಾ ನಡಾವಳಿ ಮರೆತು ಚರ್ಚೆ : ಸದಸ್ಯರ ವಾದ-ವಿವಾದ ಕಂಡು ಹೊರ ನಡೆದ ಶಾಸಕ ಟಿಬಿಜೆ

ಶಿರಾ || ಶಿರಾ ನಗರಸಭೆಯಲ್ಲಿ ಸಭಾ ನಡಾವಳಿ ಮರೆತು ಚರ್ಚೆ : ಸದಸ್ಯರ ವಾದ-ವಿವಾದ ಕಂಡು ಹೊರ ನಡೆದ ಶಾಸಕ ಟಿಬಿಜೆ

ಶಿರಾ: ಯಾವುದೇ ಒಂದು ಸಭೆಯ ಸದಸ್ಯರ ನಡುವಿನ ಚರ್ಚೆಗಳಿಂದ ಆ ಸಭೆಯು ಯಶಸ್ಸು ಕಾಣಲು ಸಾಧ್ಯ. ಸಭೆಯ ಮೂಲ ನಡಾವಳಿಯ ವಿಷಯಗಳೇ ದಿಕ್ಕು ತಪ್ಪಿ ನಡೆದಾಗ ಆ ಸಭೆಯು ಗೊಂದಲದ ಗೂಡಾಗಿ ವಾಗ್ಯುದ್ದಗಳಿಗೂ ಕಾರಣವಾಗುವುದು ಸಹಜ.

ಅಂತಹುದೊಂದು ಪ್ರಸಂಗ ಇಲ್ಲಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ನಡೆಯಿತು. ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಅವರಿದ್ಧ ಇಲ್ಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಆರಂಭಗೊAಡಾಗ ಆರಂಭದ ಮೊದಲಲ್ಲಿಯೇ ಸಭೆಯ ನಡಾವಳಿಗಳನ್ನು ಉಲ್ಲಂಘಿಸಿದ ಚರ್ಚೆ ನಡೆಯಿತು.

ಸದಸ್ಯರಾದ ಆಂಜಿನಪ್ಪ ಅವರು ಸಭೆಯ ನಡಾವಳಿಯಲ್ಲಿದ್ದ ವಿಷಯ ಪ್ರಸ್ತಾಪಿಸುವುದರ ಜೊತೆಗೆ ಭ್ರಷ್ಟಾಚಾರದ ವಿಷಯಗಳಿಗೆ ಶಾಸಕರ ಕುಮ್ಮಕ್ಕಿದೆ ಅನ್ನುವ ಆರೋಪ ಮಾಡಿದಾಗ, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಅಧ್ಯಕ್ಷ ಜೀಶಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷಿö್ಮÃಕಾಂತ್, ಎಸ್.ಎಸ್.ಅಜೆಯ್ಕುಮಾರ್, ಶಿವಶಂಕರ್, ಮೊಹಮದ್ ಬುರಾನ್, ಮೊಹಮದ್ ರಫಿ, ಸುಶೀಲಾ ವಿರೂಪಾಕ್ಷ ಸೇರಿದಂತೆ ಅನೇಕ ಸದಸ್ಯರು ಶಾಸಕರ ಮೇಲಿನ ಆರೋಪಕ್ಕೆ ಪ್ರತ್ಯಾರೋಪ ಮಾಡಿದಾಗ ಸಭೆಯಲ್ಲಿ ಗದ್ದಲ ಉಂಟಾಯಿತು.

ಸಭೆಯ ಆರಂಭದಿAದಲೂ ಸಭಾ ನಡಾವಳಿಕೆಯ ಉಲ್ಲಂಘಟನೆ ಆದಾಗ ಸಭೆಯಲ್ಲಿ ಕೂರದ ಶಾಸಕ ಟಿ.ಬಿ.ಜಯಚಂದ್ರ ಅವರು ಬೆಳಗಾವಿಯಲ್ಲಿ ನಡೆಯುವ ಸಮಾರಂಭದ ನೆಪವೊಡ್ಡಿ ಕೊನೆಗೂ ಸಭೆಯಿಂದ ನಿರ್ಗಮಿಸಿಯೇ ಬಿಟ್ಟರು.

ಶಾಸಕರ ಅನುಪಸ್ಥಿತಿಯಲ್ಲೂ ಸಭೆಯು ಮುಂದುವರೆದಾಗ ಆಯುಕ್ತರು ಎಲ್ಲಾ ಸದಸ್ಯರನ್ನು ಒಂದೇ ರೀತಿ ಕಾಣಬೇಕು. ನಮ್ಮ ಫೋನ್ ಕೂಡ ಎತ್ತುವುದಿಲ್ಲ ಎಂದು ಸದಸ್ಯ ಆಂಜಿನಪ್ಪ ಆರೋಪಿಸಿದರು. ನಮ್ಮ ವಾರ್ಡಿನಲ್ಲಿ ನಗರಸಭೆಯ ಕಾಮಗಾರಿಗಳು ನಡೆದಾಗ ಸದಸ್ಯರ ಗಮನಕ್ಕೆ ತರಬೇಕು ಅನ್ನುವ ವ್ಯವಧಾನವೂ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಲ್ಲವೆಂದು ಸದಸ್ಯೆ ಪೂಜಾ ಆರೋಪಿಸಿದರು.

ನನಗೆ ಎಲ್ಲಾ ಸದಸ್ಯರೂ ಒಂದೆ, ಆಕಸ್ಮಿಕವಾಗಿ ನಾನು ಮೇಲಧಿಕಾರಿಗಳ ಸಭೆಯಲ್ಲಿದ್ದಾಗ ಫೋನ್ ರಿಸೀವ್ ಮಾಡಿಲ್ಲವೆಂದು ಸಮರ್ಥಿಸಿಕೊಂಡರೂ, ಕೆಲ ಸದಸ್ಯರು ಅವರ ವಿರುದ್ಧ ಆರೋಪಗಳ ಸುರಿಮಳೆಗರೆದರು.

ರಾಜಕೀಯ ಮಾಡಲು ಬಂದಿರುವವರು ನಾವು, ನೀವಲ್ಲ. ಅಧಿಕಾರಿಗಳು ಕುರ್ಚಿಯಲ್ಲಿ ಕೂತು ರಾಜಕೀಯ ಮಾಡಬೇಡಿ. ಎಲ್ಲಾ ಸದಸ್ಯರನ್ನೂ ಒಂದೇ ರೀತಿಯಲ್ಲಿ ಕಾಣಬೇಕು ಎಂದು ಸದಸ್ಯ ಎಸ್.ಎಲ್.ರಂಗನಾಥ್ ಸಲಹೆ ನೀಡಿದರು.

ನಗರದ ಸ.ನಂ. 5-6 ರ ನಿವೇಶನಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡ ಪ್ರದೇಶಗಳಾಗಿದ್ದು ಅವುಗಳನ್ನು ಇ-ಸ್ವತ್ತು ಮಾಡಲು ಬರುವುದಿಲ್ಲ, ಆದರೂ ಮಾಡಲಾಗುತ್ತಿದೆ ಎಂದಾಗ ಆ ನಿವೇಶನಗಳು ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಡುತ್ತವೆಯಾದ್ದರಿಂದ ಇ-ಸ್ವತ್ತು ಮಾಡಲಾಗಿದೆ ಎಂದರು.

ಅಲ್ಪಸAಖ್ಯಾತರ ಯೋಜನೆಯಡಿ ಅಲ್ಪಸಂಖ್ಯಾತರ ವಾರ್ಡ್ಗಳಿಗೆ ಹೆಚ್ಚು ಅನುದಾನ ನೀಡಲಾಗಿದ್ದು ಉಳಿದ ಸಾಮಾನ್ಯ ವರ್ಗಗಳ ಅನುದಾನದಲ್ಲಿ ಬೇರೆ ವಾರ್ಡ್ಗಳಿಗೂ ಅನುದಾನ ಹೆಚ್ಚು ಕೊಡಿ ಎಂದು ಸದಸ್ಯರಾದ ಆರ್.ರಾಮು, ಸ್ವಾತಿ ಮಂಜೇಶ್ ಸಲಹೆ ನೀಡಿದರು.

ಎಲ್ಲ ವಾರ್ಡ್ಗಳ ಬಗ್ಗೆಯೂ ನಮಗೆ ಗೌರವವಿದೆ. ಆ ವಾರ್ಡ್ಗಳ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ಅಧ್ಯಕ್ಷ ಜೀಶಾನ್ ಮೊಹಮೂದ್ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ , ಆಯುಕ್ತ ರುದ್ರೇಶ್, ಎಇಇ ಕೆಂಚಪ್ಪ ಸೇರಿದಂತೆ ಹಲವು ಪ್ರಮುಖರು ಇದ್ದರು.

Leave a Reply

Your email address will not be published. Required fields are marked *