ಶಿವಮೊಗ್ಗ : ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಏನಂತೆ, ಬ್ಯಾಂಕ್ನಲ್ಲಿ ದುಡ್ಡಿದು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಎಲ್ಲವೂ ಸಾಧ್ಯ. ಹೌದು, ಅಂಗಡಿಗಳು, ಬೇಕರಿಗಳಲ್ಲಿ ಯುಪಿಐ ಪಾವತಿ ಹೆಚ್ಚಾಗಿದ್ದು, ಹೀಗಾಗಿ ಹೆಚ್ಚಿನವರು ಯುಪಿಐ ಮೂಲಕವೇ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆಯೂ ಲಕ್ಷಾನುಗಟ್ಟಲೆ ಯುಪಿಐ ಮೂಲಕ ವಹಿವಾಟು ಮಾಡುವ ಅಂಗಡಿ ಮಾಲೀಕರಿಗೆ, ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ಪಾವತಿಸಲು ನೋಟೀಸ್ ನೀಡಿದೆ. ಈ ಹಿನ್ನಲೆಯಲ್ಲಿ ಇಲ್ಲೊಂದು ಪೋಸ್ಟರ್ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಣ್ಣದಾದ ಚಹಾ ಅಂಗಡಿಯೊಂದರ ಗೋಡೆಯ ಮೇಲೆ ವಿಶೇಷವಾದ ಪೋಸ್ಟರ್ವೊಂದು ಗಮನ ಸೆಳೆದಿದೆ. ಇದರಲ್ಲಿ ಯಾವ ಪೇನು ಇರುವುದಿಲ್ಲ. ದುಡ್ಡು ಕೊಟ್ಟು ತಕೊಳ್ಳಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.

ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಹೆಚ್ಚಿನವರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇನ್ನಿತ್ತರ ಆಪ್ಲಿಕೇಶನ್ಗಳನ್ನು ಹಣ ಪಾವತಿಗಾಗಿ ಅವಲಂಬಿಸಿಕೊಂಡಿದ್ದಾರೆ. ಹೀಗಿರುವಾಗ ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ಮೂಲಕ ವಹಿವಾಟು ಮಾಡುವ ಸಣ್ಣ ವ್ಯಾಪಾರಸ್ಥರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಚಹಾ ಅಂಗಡಿಯೊಂದರ ಗೋಡೆಯ ಮೇಲೆ ಅಂಟಿಸಲಾದ ಪೋಸ್ಟರ್ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪೋಸ್ಟರ್ನಲ್ಲಿ ಏನಿದೆ ಗೊತ್ತಾ?
@krs party ಹೆಸರಿನ ಎಕ್ಸ್ ಖಾತೆಯಲ್ಲಿ ಚಹಾ ಅಂಗಡಿಯೊಂದರ ಗೋಡೆಯ ಮೇಲಿನ ಪೋಸ್ಟರ್ ಶೇರ್ ಮಾಡಿಕೊಳ್ಳಲಾಗಿದೆ. ಸಾಗರ ನಗರ ಭಾಗದ ಕ್ಯಾಂಟೀನ್ನಲ್ಲಿ ಕಂಡು ಬಂದ ಪ್ರತಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟರ್ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ, ಭಾರತ್ ಪೇ ಯಾವ ಪೇನು ಇರುವುದಿಲ್ಲ. ದುಡ್ಡುಕೊಡು ಬೋಂಡಾ ತಿನ್ನು, ದುಡ್ಡುಕೊಡು ಟೀ ಕುಡಿ, ದುಡ್ಡುಕೊಡು ಏನಾರ ತಗ, ಸಾಲ ಇಲ್ಲ. ಕ್ಯಾಶ್ ವ್ಯವಹಾರ ಮಾತ್ರ ಏರುತ್ತದೆ ಎಂದು ಗ್ರಾಹಕರಿಗೆ ಕಟ್ಟುನಿಟ್ಟಾಗಿ ತಿಳಿಸುವ ಮೂಲಕ ಇಲ್ಲಿ ಬರೆದುಕೊಂಡಿರುವುದನ್ನು ಕಾಣಬಹುದು.