ಶಿವಮೊಗ್ಗ: ಪಾಕ್ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಿದ ಸೈನಿಕರಿಗೆ ಕೃತಜ್ಞತೆ ತಿಳಿಸುವ ವಿಜಯ ತಿರಂಗಾ ಯಾತ್ರೆಯನ್ನು ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಶಿವಮೊಗ್ಗದ ನಾಗರಿಕರ ವೇದಿಕೆ ಈ ಯಾತ್ರೆ ಆಯೋಜಿಸಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗಾಂಧಿ ಬಜಾರ್ ಮೂಲಕ, ಶಿವಪ್ಪ ನಾಯಕ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ ವೃತ್ತದ ವರೆಗೂ ವಿಜಯ ತಿರಂಗಾ ಯಾತ್ರೆ ನಡೆಸಲಾಯಿತು.

ಮಳೆಯಲ್ಲೂ ತಿರಂಗಾ ಯಾತ್ರೆ ಯಶಸ್ವಿ: ಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಪ್ರಾರಂಭವಾದ ತಿರಂಗಾ ಯಾತ್ರೆಯಲ್ಲಿ ಸುಮಾರು 700 ಮೀಟರ್ ಉದ್ದದ ಭಾರತದ ರಾಷ್ಟ್ರಧ್ವಜವನ್ನಿಟ್ಟುಕೊಂಡು ಸಾಗಲಾಯಿತು. ಯಾತ್ರೆ ಪ್ರಾರಂಭವಾಗುತ್ತಿದ್ದಂತಯೇ ವರುಣನ ಆಗಮನವಾಯಿತು. ಮಳೆ ಬಂದರೂ ಸಹ ಯಾತ್ರೆಯನ್ನು ನಿಲ್ಲಿಸದೇ ರಾಷ್ಟ್ರಧ್ವಜ ಹಿಡಿದುಕೊಂಡು ವಿದ್ಯಾರ್ಥಿಗಳು, ಶಿವಮೊಗ್ಗದ ನಾಗರಿಕರು ಸಾಗಿದ್ದು ವಿಶೇಷವಾಗಿತ್ತು. ಮಳೆಯಲ್ಲೂ ಸಹ ಸುಮಾರು ಒಂದು ಸಾವಿರ ಜನರು ರಾಷ್ಟ್ರಧ್ವಜ ಹಿಡಿದರು. ಯಾತ್ರೆಯ ಮೂಲಕ ಪ್ರತಿಯೊಬ್ಬ ಜನರಲ್ಲೂ ದೇಶ ಭಕ್ತಿ ಜಾಗೃತಗೊಳಿಸುವ ಕೆಲಸ ಮಾಡಲಾಯಿತು. ಯಾತ್ರೆಯಲ್ಲಿ ಮಾಜಿ ಸೈನಿಕರು, ರಾಷ್ಟ್ರಭಕ್ತರು, ದೇಶಪ್ರೇಮಿಗಳು ಸೇರಿದಂತೆ ಹಲವಾರು ಭಾಗಿದ್ದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಪುನೀತ್ ಕುಮಾರ್, ನಮ್ಮ ದೇಶದ ಸೈನಿಕರ ಶಕ್ತಿಯನ್ನು ನೆರೆದಿದ್ದವರಿಗೆ ಪುನರ್ ಮನನ ಮಾಡಿಕೊಟ್ಟರು. ಪಾಕ್ ಅಣು ಬಾಂಬ್ ಅನ್ನು ಯಾವಾಗ ಬೇಕಾದರೂ ಹಾಕಬಹುದೆಂದು ಗೊತ್ತಿದ್ದರೂ ಭಾರತೀಯ ಸೇನೆ ದಾಳಿ ಬಂದಿದೆ. ಪುಲ್ವಾಮಾ ದಾಳಿಯಲ್ಲೂ ಸಹ ಏರ್ ಸ್ಟ್ರೈಕ್ ಮಾಡಿ ನಮ್ಮ ಸೈನಿಕರು ವಾಪಸ್ ಆಗಿದ್ದರು. ಭಾರತವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ನಮ್ಮ ಸೇನೆ ಹೊಡೆದು ಹಾಕುವ ಕೆಲಸ ಮಾಡುತ್ತಿದೆ. ದೇಶದ ರಕ್ಷಣೆ ಮಾಡಲು ಶಸ್ತ್ರ ತಯಾರು ಮಾಡಿದ ವಿಜ್ಞಾನಿಗಳಿಗೆ ಅಭಿನಂದನೆ ಎಂದರು