Shivarajkumar ಅವರ  ಹೊಸ ಹೊಸ ಸಿನಿಮಾಗಳು ಘೋಷಣೆ ..!ಯಾವುವು ಗೊತ್ತಾ..?

Shivarajkumar ಅವರ  ಹೊಸ ಹೊಸ ಸಿನಿಮಾಗಳು ಘೋಷಣೆ ..!ಯಾವುವು ಗೊತ್ತಾ..?

ನಟ ಶಿವರಾಜ್ಕುಮಾರ್ ಅವರ ಜನ್ಮದಿನ. ನಟನ ಬರ್ತ್ಡೇ ದಿನಕ್ಕೆ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಶಿವರಾಜ್ಕುಮಾರ್ಗೆ ಈಗ 63 ವರ್ಷ ವಯಸ್ಸು. ಅವರು ಈಗಲೂ ಸಿನಿಮಾ ಕೃಷಿ ಮುಂದುವರಿಸಿದ್ದಾರೆ. ಅವರ ಕೈಯಲ್ಲಿ ಇರುವ ಸಿನಿಮಾಗಳ ಸಂಖ್ಯೆ ಕೇಳಿದರೆ ನೀವು ಅಚ್ಚರಿಗೆ ಒಳಗಾಗೋದು ಗ್ಯಾರಂಟಿ. ಈ ವಯಸ್ಸಲ್ಲೂ ಅವರು ಇಷ್ಟೊಂದು ಸಿನಿಮಾ ಮಾಡುತ್ತಿದ್ದಾರಾ ಎಂದು ನಿಮಗೆ ಅನ್ನಿಸದರೆ ಇರದು.

ಶಿವರಾಜ್ಕುಮಾರ್ ಮೊದಲ ಸಿನಿಮಾ ಆರಂಭಿಸಿದ್ದು 23ನೇ ವಯಸ್ಸಿಗೆ. ಈಗ ಅವರಿಗೆ 63 ವರ್ಷ. ಕಳೆದ, 40 ವರ್ಷಗಳಿಂದ ಅವರು ನಿರಂತರವಾಗಿ ಸಿನಿಮಾಗಳು ಮಾಡುತ್ತಾ ಬರುತ್ತಿದ್ದಾರೆ. ನೂರಾರು ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ಅನೇಕ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಬರ್ತ್ಡೇ ಸಮಯದಲ್ಲಿ ಅವರ ನಟನೆಯ ಹಲವು ಚಿತ್ರಗಳು ಅನೌನ್ಸ್ ಆಗಿವೆ.

ಸೀಕ್ವೆಲ್ ಧಮಾಕಾ..

ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಸೀಕ್ವೆಲ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂದರೂ ತಪ್ಪಾಗಲಾರದು. ‘ಮಫ್ತಿ’ ಚಿತ್ರದ ಪ್ರಿಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬಂತು. ಅವರು ಈಗ ‘ಜೈಲರ್ 2’ ಸಿನಿಮಾ ಮಾಡುತ್ತಿದ್ದಾರೆ. 2023ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ರಜನಿಕಾಂತ್ ನಟನೆಯ ಚಿತ್ರ ಇದು. ಇನ್ನು, ‘ಟಗರು’ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ. ಶಿವಣ್ಣನ ಬರ್ತ್ಡೇ ಪ್ರಯುಕ್ತ ‘ಟಗರು 2’ ಅನೌನ್ಸ್ ಆಗಿದೆ. ಟಗರು ಶಿವನ ಪಾತ್ರದಲ್ಲಿ ಅವರು ಮುಂದುವರಿಯುತ್ತಿದ್ದಾರೆ.

ಹೊಸ ಸಿನಿಮಾಗಳ ಅಬ್ಬರ..

ಶಿವರಾಜ್ಕುಮಾರ್ ಅವರು ‘45’ ಸಿನಿಮಾದಲ್ಲಿ ನಟಿಸಿಯಾಗಿದೆ. ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ‘ಉತ್ತರಕಾಂಡ’, ‘ಭೈರವನ ಕೊನೆಯ ಪಾಠ’, ಶಿವರಾಜ್ಕುಮಾರ್ 131ನೇ ಚಿತ್ರ, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹಾಗೂ ‘ಮಂಡ್ಯ ಬ್ರದರ್ಸ್’ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು, ‘ಆನಂದ್’ ಹೆಸರಿನ ಸಿನಿಮಾ ಕೂಡ ಅನೌನ್ಸ್ ಆಗಿದ್ದು, ಗೀತಾ ಶಿವರಾಜ್ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *