ರಿಯಾಲಿಟಿ ಶೋನ ವಿಜೇತ ಕಾರ್ತಿಕ್ ಮಹೇಶ್ ಅವರು ಸದ್ಯ ಸ್ಯಾಂಡಲ್ವುಡ್ನಲ್ಲಿ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮರಸ’ ಮತ್ತು ‘ರಿಚಿ ರಿಚ್’ ಸಿನಿಮಾಗಳ ಜೊತೆಗೆ, ಅವರು ಹೊಸ ಚಿತ್ರದ ಚರ್ಚೆಯಲ್ಲಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡುವುದು ಅವರ ಗುರಿ.

ಕಾರ್ತಿಕ್ ಮಹೇಶ್ ಅವರು ಸದ್ಯ ‘ರಾಮರಸ’ ಹಾಗೂ ‘ರಿಚಿ ರಿಚ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಕೆಲವು ಚಿತ್ರಗಳು ಚರ್ಚೆಯಲ್ಲಿ ಇವೆ. ‘ಗೀತಾ’ ಹಾಗೂ ‘ಹೊಯ್ಸಳ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಎನ್ ಅವರು ಈಗ ‘ಆಲ್ಫಾ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಹೊಸ ಪ್ರತಿಭೆಯ ಎಂಟ್ರಿ ಆಗಲಿದೆ. ಈ ಚಿತ್ರದಲ್ಲಿ ಕಾರ್ತಿಕ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಇದಲ್ಲದೆ ಕಾರ್ತಿಕ್ ಮಹೇಶ್ ಅವರು ಹೊಸ ಸಿನಿಮಾ ಒಂದರ ಮಾತುಕತೆ ನಡೆಸುತ್ತಿದ್ದಾರೆ. ಈ ಸಿನಿಮಾದ ಕಥೆ ವಿದೇಶದಲ್ಲಿ ಸಾಗಲಿದೆ. ಇದು ಫೈನಲ್ ಆದರೆ, ಕಾರ್ತಿಕ್ ಅವರು ವಿದೇಶಕ್ಕೆ ಹಾರಲಿದ್ದಾರೆ. ಅಲ್ಲಿ ಕೆಲವು ದಿನಗಳ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ. ಎಲ್ಲವೂ ಫೈನಲ್ ಆದ ಬಳಿಕ ಯಾವ ದೇಶ, ಎಷ್ಟು ದಿನ ಶೂಟ್, ಕಥೆ ಬಗ್ಗೆ ಮಾಹಿತಿ ಸಿಗಲಿದೆ. ಕಾರ್ತಿಕ್ ಅವರು ವೆಬ್ ಸೀರಿಸ್ ಮಾಡುವ ಆಲೋಚನೆಯಲ್ಲೂ ಇದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ.
