ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿಯ ಹಿರಿಯ ಶಾಸಕರು ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಒಂದು ತಂಡ ಭಾನುವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲಿದೆ ಎಂದು ಹೇಳಿದರು.
ನಾವು ಪಕ್ಷದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗೋದಿಲ್ಲ, ಜನಸಾಮಾನ್ಯರಂತೆ ಹೋಗುತ್ತೇವೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ನಿಲ್ಲುವು ಸ್ಪಷ್ಟವಾಗಿದೆ, ಸರ್ಕಾರ ರಚಿಸಿರುವ ಎಸ್ಐಟಿ ಆದಷ್ಟು ಬೇಗ ತನ್ನ ತನಿಖೆಯನ್ನು ಪೂರ್ತಿಗೊಳಿಸಬೇಕು, ಅದು ತನಿಖೆಯನ್ನು ವಿನಾಕಾರಣ ವಿಳಂಬಗೊಳಿಸುವಂತಿಲ್ಲ ಎಂದು ವಿಜಯೇಂದ್ರ ಹೇಳಿದರು.
For More Updates Join our WhatsApp Group :