Smart token: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳ ಮುಂದೆ ಟೋಕನ್ ಪಡೆಯಲು ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ: ಏಕೆ ಗೊತ್ತೇ..??

ಮೈಸೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕ್ಯೂನಲ್ಲಿ ನಿಲ್ಲುವುದೇ ರೋಗಿಗಳಿಗೆ ಕಷ್ಟದ ಕೆಲಸ. ಈ ಸಮಸ್ಯೆಗೆ ಮೈಸೂರಿನ ಜಿಲ್ಲಾಸ್ಪತ್ರೆ ಸ್ಮಾರ್ಟ್ ಉಪಾಯ ಹುಡುಕಿದೆ. ಇದರಿಂದ ಪ್ರತಿನಿತ್ಯ ನೂರಾರು ಹಳ್ಳಿಗಳಿಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇದು ಅನುಕೂಲವಾಗಲಿದೆ. ಇದರಿಂದ ಆಸ್ಪತ್ರೆ ಸಿಬ್ಬಂದಿಗಳು ಪ್ರತಿದಿನ ಒಬ್ಬೊಬ್ಬ ರೋಗಿಗೂ ಅವರ ಸಂಪೂರ್ಣ ವಿಳಾಸವನ್ನು ದಾಖಲಿಸಿಕೊಂಡು. ಅವರಿಗೆ ಟೋಕನ್ ನೀಡುವ ವ್ಯವಸ್ಥೆಯಿಂದ ಮುಕ್ತಿ ದೊರಕಿದೆ. ಇದು ಫಾಸ್ಟ್ ಟ್ರ್ಯಾಕ್ ಒಪಿಡಿ ವ್ಯವಸ್ಥೆ ಆಗಿದೆ.

ಸರ್ಕಾರಿ

ಮುಂಬೈ ಮೂಲದ ಡ್ರಿಫ್​ಕೇಸ್ ಸಂಸ್ಥೆಯು ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ, ಕ್ಯೂಆರ್ ಕೋಡ್ ಸ್ಕ್ಯಾನ್ ಆಧಾರಿತ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯಡಿ, ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಸ್ಕ್ಯಾನರ್ ಮೂಲಕ ಆಸ್ಪತ್ರೆಯ ಮುಂಭಾಗ ಇರುವ ಕ್ಯೂಆರ್ ಕೋಡ್​ಅನ್ನು ಸ್ಕ್ಯಾನ್ ಮಾಡಿದರೆ, ರೋಗಿಯ ಹೆಸರು, ವಿಳಾಸ, ವಯಸ್ಸು ಎಲ್ಲವೂ ದಾಖಲಾಗುತ್ತದೆ. ಬಳಿಕ ಮೊಬೈಲ್​ಗೆ ಒಟಿಪಿ ಬರಲಿದ್ದು, ಅದನ್ನು ಆಸ್ಪತ್ರೆಯ ಒಪಿಡಿ ಕೌಂಟರ್​ನಲ್ಲಿ ಹೇಳಿದರೆ ವೈದ್ಯರ ಭೇಟಿಗೆ ಟೋಕನ್ ಸಿಗಲಿದೆ. ಹೀಗೆ ಸ್ಕ್ಯಾನ್ ಮಾಡುವ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್​ಗೆ ಲಿಂಕ್ ಆಗಿರಬೇಕು.

ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಮರನಾಥ್ ಮಾತನಾಡಿ, ರೋಗಿಗಳು ಫಾಸ್ಟ್ ಟ್ರ್ಯಾಕ್ ಒಪಿಡಿ ವ್ಯವಸ್ಥೆ ಮೂಲಕ ಟೋಕನ್​ ಪಡೆದ ಬಳಿಕ ಹಾಲ್​ನಲ್ಲಿ ಅಳವಡಿಸಿರುವ ಟಿವಿಯಲ್ಲಿ ಇವರ ಟೋಕನ್ ನಂಬರ್ ಬಂದ ನಂತರ ವೈದ್ಯರ ಬಳಿ ಪರೀಕ್ಷೆಗೆ ಹೋಗಬಹುದು. ಈ ಫಾಸ್ಟ್ ಟ್ರ್ಯಾಕ್ ಟೋಕನ್ ವ್ಯವಸ್ಥೆಯಿಂದ ರೋಗಿಗಳು ಕ್ಯೂನಲ್ಲಿ ನಿಲ್ಲುವುದು ತಪ್ಪುತ್ತದೆ. ಆನಂತರ ಟೋಕನ್ ಬರೆಯುವ ಸ್ಥಳದಲ್ಲಿ ಹೋಗಿ ತನ್ನ ಸಂಪೂರ್ಣ ಮಾಹಿತಿ ದಾಖಲಿಸುವ ಸಮಯ ಉಳಿಯಲಿದೆ. ರೋಗಿಗಳಿಗೆ ಸುಲಭವಾಗಿ ಟೋಕನ್ ಸಿಕ್ಕಿ ತಮ್ಮ ಸರತಿ ಬಂದಾಗ ನೇರವಾಗಿ ವೈದ್ಯರ ಬಳಿ ತೆರಳಬಹುದಾಗಿದೆ. ಈ ವ್ಯವಸ್ಥೆ ರೋಗಿಗಳಿಗೆ ಅನುಕೂಲವಾಗಿದೆ. ಜೊತೆಗೆ ಈ ಆ್ಯಪ್​ನಲ್ಲಿ ಸಂಪೂರ್ಣ ಮಾಹಿತಿ ಶೇಖರಣೆಯಾಗುತ್ತದೆ. ಜೊತೆಗೆ ಮುಂದೆ ಮತ್ತೇ ಪರೀಕ್ಷೆಗೆ ಬರುವಾಗ ಚೀಟಿಗಳನ್ನು ತರುವುದು ತಪ್ಪುತ್ತದೆ. ಇದರ ಜೊತೆಗೆ ವೈದ್ಯರಿಗೆ ದಾಖಲಾತಿಗಳನ್ನು ಆ್ಯಪ್​ನಲ್ಲಿ ಇಟ್ಟುಕೊಳ್ಳುವುದರಿಂದ ಚಿಕಿತ್ಸೆಗೂ ಸಹ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಡ್ರಿಫ್​ಕೇಸ್ ಕಂಪನಿಯ ಸಿಬ್ಬಂದಿ ಭರತ್ ರಾಜ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಚಿಕಿತ್ಸೆಗೆ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ಮುಂಬೈ ಮೂಲದ ಡ್ರಿಫ್​ಕೇಸ್ ಕಂಪನಿ, ಹೊಸ ಸ್ಮಾರ್ಟ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದನ್ನು ಆಧಾರ್ ಕಾರ್ಡ್ ಬೇಸ್ ಮೇಲೆ ಸಿದ್ಧಪಡಿಸುವುದರಿಂದ ಟೋಕನ್ ನಂಬರ್ ಹೇಳಿದರೆ ಒಪಿಡಿಯಲ್ಲಿ ಸಂಪೂರ್ಣ ವಿವರಗಳು ದಾಖಲಾಗುತ್ತವೆ. ಇದರಿಂದ ಬೇಗನೇ ಟೋಕನ್ ಪಡೆದರೆ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದರು.

ಇನ್ನು ಕ್ಯೂಆರ್ ಕೋಡ್ ಯಾವ ರೀತಿ ಬಳಸಬೇಕು ಎಂಬ ಬಗ್ಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಮಾಹಿತಿಯನ್ನು ಸಹಾಯವಾಣಿ ಡೆಸ್ಕ್​ನಲ್ಲಿ ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲೂ ಇನ್ಮುಂದೆ ಟೋಕನ್ ಪಡೆಯಲು ಕಾಯದೇ, ಟೋಕನ್​ಗಾಗಿ ಸಹಾಯಕರಿಗೆ ಲಂಚ ನೀಡದೇ ನೇರವಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಈ ವ್ಯವಸ್ಥೆ ಸಹಾಯಕವಾಗಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *