Snake Day || ಹಾವು ಕಚ್ಚಿದ್ರೆ ಈ ಭಾಗಕ್ಕೆ ಕಚ್ಚುತ್ತಂತೆ : ಇಲ್ಲಿಗೆ ಮಾತ್ರ ಟಾರ್ಗೆಟ್​ ಮಾಡುತ್ತವೆ ಯಾಕೆ..?

ಅಬ್ಬಬ್ಬಾ… ಹೂ ಹಿಡಿದಷ್ಟು ಸಲೀಸಾಲಿ Cobra ಹಿಡಿದ ವ್ಯಕ್ತಿ..!

ಏರಿಯಾದಲ್ಲಿ ಯಾರದ್ದೋ ಮನೆಯ ಕಾಂಪೌಂಡಿನ ಮುಂದೆ ಹಾವು ಕಾಣಿಸಿಕೊಂಡಿದೆ ಅಂತ ಸುದ್ದಿ ಕೇಳಿದರೆನೆ ನಮ್ಮಲ್ಲಿ ಬಹುತೇಕರಿಗೆ ನಂತರ ಆ ಹಾವು ಯಾವ ಕಡೆಗೆ ಹೋಯಿತು ಅನ್ನೋದರ ಬಗ್ಗೆ ತುಂಬಾನೇ ಚಿಂತೆಯಾಗಿರುತ್ತದೆ. ಹಾವು ಅನ್ನೋ ಪದವನ್ನ ಎಂತವರೆ ಕೇಳಿದರೂ ಸಹ ಒಂದು ಕ್ಷಣ ಬೆಚ್ಚಿ ಬೀಳುವುದು ಗ್ಯಾರಂಟಿ.

ಹಾವುಗಳು ನಮ್ಮ ಗ್ರಹದಲ್ಲಿ ಇರುವ ಅತ್ಯಂತ ಕುಖ್ಯಾತ ಜೀವಿಗಳಾಗಿವೆ. ನಮ್ಮಲ್ಲಿ ಅನೇಕ ಜಾತಿಯ ಹಾವುಗಳಿವೆ ಮತ್ತು ಅವುಗಳನ್ನು ನಾವು ವಿಭಿನ್ನ ಗಾತ್ರಗಳಲ್ಲಿಯೂ ಸಹ ನೋಡಬಹುದು. ಕೆಲವು ಹಾವುಗಳು ವಿಷಪೂರಿತವಾಗಿರುತ್ತವೆ ಮತ್ತು ಹೆಚ್ಚು ಅಪಾಯಕಾರಿಯೂ ಸಹ ಆಗಿರುತ್ತವೆ. ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಬದುಕುಳಿದಿರುವುದಕ್ಕಿಂತ ಸತ್ತ ಘಟನೆಗಳು ಹೆಚ್ಚು. ಅಷ್ಟರ ಮಟ್ಟಿಗೆ ಹಾವಿನ ವಿಷ ಒಬ್ಬ ವ್ಯಕ್ತಿಯ ಜೀವ ತೆಗೆಯುತ್ತದೆ.

ಹಾವು ಎದುರಿಗೆ ಕಂಡ ತಕ್ಷಣ ಜನರು ಭಯಭೀತರಾಗುತ್ತಾರೆ, ಹಾವು ಕಚ್ಚಿದವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಆ ವ್ಯಕ್ತಿಯ ಸಾವು ಶೇ.80 ಖಚಿತ ಎಂದೇ ಅರ್ಥ. ಹಾಗಾಗಿ ಈ ಅಪಾಯಕಾರಿ ಪ್ರಾಣಿಯ ಬಳಿ ಹೋಗಲು ಯಾರು ಕೂಡ ಪ್ರಯತ್ನ ಕೂಡ ಮಾಡುವುದಿಲ್ಲ.

ಹಾವು ಕಡಿತದಿಂದ ಅನೇಕ ಮಂದಿ ಸಾವನ್ನಪ್ಪಿರುವ ಘಟನೆಗಳನ್ನು ನೀವು ಕೇಳಿರಬಹುದು. ಆದರೆ ಹಾವುಗಳು ಯಾವಾಗಲೂ ಎಲ್ಲಿ ಕಚ್ಚುತ್ತದೆ ಮತ್ತು ಹೆಚ್ಚಾಗಿ ಏಕೆ ಈ ಭಾಗಕ್ಕೆ ಮಾತ್ರ ಕಚ್ಚುತ್ತವೆ ಎಂದು ನಿಮಗೆ ಗೊತ್ತಾ? ಹಾಗಾದ್ರೆ ಈ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿಯೋಣ ಬನ್ನಿ.

ಪ್ರಪಂಚದಾದ್ಯಂತ ಸಾವಿರಾರು ಜಾತಿಯ ಹಾವುಗಳಿವೆ. ಅವುಗಳ ಗಾತ್ರ, ಬಣ್ಣ ಮತ್ತು ಜೀವನಶೈಲಿ ಪರಸ್ಪರ ಭಿನ್ನವಾಗಿರುತ್ತದೆ. ಹಾವುಗಳು ವಿಷಕಾರಿ ಜೀವಿಗಳು. ಆದರೆ ಎಲ್ಲಾ ಹಾವುಗಳು ವಿಷಕಾರಿಯಲ್ಲ. ಕೆಲವು ಹಾವುಗಳು ವಿಷರಹಿತವಾದವು ಇರುತ್ತದೆ.

ಪ್ರಪಂಚದಲ್ಲಿ ಸುಮಾರು 2,700 ಜಾತಿಯ ಹಾವುಗಳಿದ್ದರೂ, ಅವುಗಳಲ್ಲಿ ಕೇವಲ 10 ಪ್ರತಿಶತದಷ್ಟು ಮಾತ್ರ ವಿಷಕಾರಿಯಾಗಿದೆ. ನಮ್ಮ ಭಾರತ ದೇಶದಲ್ಲಿ ಸುಮಾರು 367 ಜಾತಿಯ ಹಾವುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಶೇಕಡಾ 10 ರಷ್ಟು ಮಾತ್ರ ವಿಷಕಾರಿ ಹಾವುಗಳಾಗಿವೆ. ವಾಸ್ತವವಾಗಿ ಹೆಚ್ಚಾಗಿ ಹಾವುಗಳು ವಿಷಕಾರಿಯಲ್ಲ. ಹಾವುಗಳು ಮನುಷ್ಯರಿಂದ ದೂರವಿರಲು ಬಯಸುತ್ತವೆ.

ಹಾವುಗಳು ಮನುಷ್ಯರನ್ನು ಕಚ್ಚಿದಾಗ, ಅವು ಹೆಚ್ಚಾಗಿ ಕೈ, ಕಾಲು ಮತ್ತು ಕಣಕಾಲುಗಳ ಮೇಲೆ ದಾಳಿ ಮಾಡುತ್ತವೆ. ಇದಕ್ಕೆ ಕೆಲ ಕಾರಣಗಳಿವೆ. ಏಕೆಂದರೆ ಹಾವುಗಳು ಅವುಗಳನ್ನು ಟಾರ್ಗೆಟ್ ಮಾಡಿಕೊಳ್ಳುವುದು ತುಂಬಾ ಸುಲಭ. ಹಾಗಾಗಿ ಹಾವುಗಳು ಆ ಭಾಗಗಳ ಮೇಲೆ ದಾಳಿ ಮಾಡಲು ಆದ್ಯತೆ ನೀಡುತ್ತವೆ.

Leave a Reply

Your email address will not be published. Required fields are marked *