ಹೆತ್ತ ತಾಯಿಗೆ ಊಟ ಹಾಕದ ಮಗ : ಮಗನಿಗೆ ತಕ್ಕ ಪಾಠ ಕಲಿಸಿದ ಜಿಲ್ಲಾಧಿಕಾರಿ..!

ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳಬೇಕಾದ ಮಕ್ಕಳು, ಒಂದು ತೂತು ಅನ್ನವನ್ನು ನೀಡ್ತಿಲ್ಲ. ಆಸ್ತಿ ವಿವಾದದ ಕಾರಣಕ್ಕೋ, ನಮಗೇನು ಮಾಡಿದ್ದಾರೆ ಅಂತ ಕೆಲವರು ತಂದೆ-ತಾಯಿಯನ್ನು ದೂರ ಮಾಡ್ತಿದ್ದಾರೆ. ಇಂತಹದ್ದೆ ಘಟನೆಯೊಂದು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂ ವಿಧಾನಸಭಾ ಕ್ಷೇತ್ರದ ಎಸ್​​​​ಪಿಐ ಪ್ರದೇಶದಲ್ಲಿ ನಡೆದಿದ್ದು, ವಯೋವೃದ್ಧ ತಾಯಿಯನ್ನು ನೋಡಿಕೊಳ್ಳದ ಮಗ, ಆಕೆಯನ್ನ ಮನೆಯಿಂದ ಹೊರಗೆ ಕಳುಹಿಸಿದ್ದ. ಮಗನ ನಡೆಯಿಂದ ಬೇಸತ್ತ ಆಕೆ ನೇರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು, ತಾಯಿ ಕಷ್ಟವನ್ನು ನೋಡಿದ ಅಧಿಕಾರಿ, ಆಕೆಯ ಮಗನಿಗೆ ಶಾಕ್ ಕೊಡುವ ಆದೇಶಗಳನ್ನು ಜಾರಿ ಮಾಡಿದ್ದಾರೆ.

ಒಂದು ಹೊತ್ತು ಊಟ ಕೂಡ ನೀಡಿದ ಮಗನ ನಡೆಯಿಂದ ಬೇಸತ್ತ ತಾಯಿಯೊಬ್ಬರು ನೇರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಕಳೆದ ಕೆಲ ಸಮಯದಿಂದ ಮಗ ತನ್ನನ್ನು ನೋಡಿಕೊಳ್ಳುತ್ತಿಲ್ಲ. ಪ್ರತಿ ವಿಚಾರದಲ್ಲೂ ಜಗಳ ಮಾಡುತ್ತಾನೆ ಎಂದು ತಾಯಿ ಹೇಳಿದ್ದಾರೆ. ಮಗನ ಕೃತ್ಯಗಳಿಂದ ಬೇಸತ್ತ ಆಕೆ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ನೇರ ಜಿಲ್ಲಾಧಿಕಾರಿ ಶ್ರೀಹರ್ಷ ಅವರ ಗಮನಕ್ಕೆ ತೆಗೆದುಕೊಂಡು ಹೋಗಿ, ಮಗನ ಕೃತ್ಯಗಳನ್ನು ವಿವರಿಸಿದ್ದಾರೆ.

ಮಗ ಹುಟ್ಟಿದ ಅಂತ ಸಂತಸಪಡುವ ದಿನಗಳು ದೂರವಾಗಿದ್ದು, ಎಲ್ಲಿ ನೋಡಿದರೂ ತಂದೆ-ತಾಯಿಗಳು ವೃದ್ಧಾಪ್ಯದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಜಿಲ್ಲಾಧಿಕಾರಿಗಳ ಆ ತಾಯಿಯನ್ನು ನೋವನ್ನು ಅರ್ಥ ಮಾಡಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ದೂರಿನಲ್ಲಿ ತನ್ನ ಮಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ನಿತ್ಯವೂ ಕಿರುಕುಳ ಕೊಡ್ತಿದ್ದಾನೆ. ತನ್ನ ಗಂಡ ಕಟ್ಟಿಸಿದ ಮನೆಯಲ್ಲೇ ಇದ್ದುಕೊಂಡು ನನಗೆ ಸಮಸ್ಯೆ ಮಾಡ್ತಿದ್ದಾರೆ. ಆದ್ದರಿಂದ ಮಗನ ವಿರುದ್ಧ ಕ್ರಮಕೈಗೊಂಡು, ಮನೆಯಿಂದ ಖಾಲಿ ಮಾಡಿಸುವಂತೆ ಮನವಿ ಮಾಡಿದ್ದರಂತೆ.

ವೃದ್ಧೆಯ ಮನವಿಯಂತೆ ಜಿಲ್ಲಾಧಿಕಾರಿ ಶ್ರಿಹರ್ಷ ಅವರು ಹಿರಿಯ ನಾಗರಿಕರ ಕಾಯ್ದೆಯಡಿ ನ್ಯಾಯ ಕೊಡಿಸುವ ಕ್ರಮಕೈಗೊಂಡಿದ್ದಾರೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007ರ ಸೆಕ್ಷನ್ 23, ಸೆಕಷನ್ 21ಬಿ ಅನ್ವಯ ನೋಟಿಸ್ ಜಾರಿ ಮಾಡಿದ್ದಾರೆ. ವೃದ್ಧೆಯ ಭದ್ರತೆ ಹಾಗೂ ಯೋಗಕ್ಷೇಮಕ್ಕಾಗಿ ಆಕೆಯ ಮನೆಯನ್ನು 30 ದಿನಗಳಲ್ಲಿ ಖಾಲಿ ಮಾಡುವಂತೆ ಮಗನಿಗೆ ನೋಟಿಸ್ ನೀಡಿದ್ದು, ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡದ್ದಾರೆ. ಅಲ್ಲದೇ ಆದೇಶ ಅನ್ವಯವಾಗುವಂತೆ ಮಾಡಲು ಸಂಬಂಧಿಸಿದ ಪೊಲೀಸರಿಗೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *