04.09.2024 : ದೇಶದ ಮಹತ್ವದ ತನಿಖಾ ಸಂಸ್ಥೆಯಾದ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ 6,903 ಭ್ರಷ್ಟಾಚಾರದ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿರುವ ಸಂಗತಿಯನ್ನುಕೇAದ್ರಜಾಗೃತಆಯೋಗದ (ಸೆಂಟ್ರಲ್ ವಿಜಿಲೆನ್ಸ್ ಕಮೀಷನ್-ಸಿವಿಸಿ) ವಾರ್ಷಿಕ ವರದಿ ಬಹಿರಂಗಪಡಿಸಿ `ನ್ಯಾಯವಿಳಂಬ ನ್ಯಾಯ ನಿರಾಕರಣೆಗೆ ಸಮ’ ಎಂಬ ಜನಪ್ರಿಯ ಮಾತಿಗೆ ಪುಷ್ಟಿ ನೀಡಿದೆ.
ಕೇಂದ್ರದಲ್ಲಿಅಧಿಕಾರ ಹಿಡಿದ ಪಕ್ಷಗಳು ರಾಜಕೀಯ ವಿರೋಧಿಗಳನ್ನು ಹಣಿಯಲು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವರದಿಯಾಗುವಎಲ್ಲ ಬಗೆಯ ಪ್ರಕರಣಗಳನ್ನೂ ಸಿಬಿಐಗೆ ಒಪ್ಪಿಸಲುಒತ್ತಾಯಿಸುವುದು ವಾಡಿಕೆಯಕ್ರಮವಾದರೂಅಲ್ಲಿತನಿಖೆಯಾದ ಪ್ರಕರಣಗಳು ತಾರ್ಕಿಕಅಂತ್ಯಕAಡು ಸಂತ್ರಸ್ತರಿಗೆ ಬೇಗ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಮೂಡುತ್ತಿಲ್ಲಎಂಬುದಕ್ಕೆ ವಾರ್ಷಿಕ ವರದಿಯ ಅಂಕಿ ಅಂಶಗಳು ಸಾಕ್ಷಿ ಒದಗಿಸಿವೆ.
2023ರ ಡಿಸೆಂಬರ್ 31ರವರೆಗಿನ ಮಾಹಿತಿಯಂತೆ ಸಿಬಿಐ ತನಿಖೆ ಮಾಡಿದ 361 ಪ್ರಕರಣಗಳು ಇಪ್ಪತ್ತು ವರ್ಷಗಳಿಗೂ ಹೆಚ್ಚಿನ ಕಾಲದಿಂದ ವಿಚಾರಣೆಗೆ ಬಾಕಿ ಉಳಿದಿವೆ. ಹತ್ತು ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ವಿಚಾರಣೆ ನಿರೀಕ್ಷೆಯಲ್ಲಿರುವ ಪ್ರಕರಣಗಳ ಸಂಖ್ಯೆ 2,461.ದೇಶದಅತ್ಯಂತ ಪ್ರತಿಷ್ಠಿತವಾದತನಿಖಾ ಸಂಸ್ಥೆ ದಾಖಲಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವುದಕ್ಕೆ ಇಷ್ಟರಮಟ್ಟಿನ ವಿಳಂಬವಾಗುತ್ತಿರುವುದು ಕಳವಳ ಮೂಡಿಸಿದ ವಿಷಯವೆಂದು ಸಿವಿಸಿ ವರದಿ ಅಭಿಪ್ರಾಯಪಟ್ಟಿದೆ.
ಸಿಬಿಐ ದಾಖಲು ಮಾಡಿಕೊಂಡ 658 ಭ್ರಷ್ಟಾಚಾರದ ಪ್ರಕರಣಗಳಲ್ಲಿ ತನಿಖೆಯನ್ನುಆರಂಭಿಸುವುದಕ್ಕೆ ಸಾಧ್ಯವಾಗಿಲ್ಲ. ಇವುಗಳಲ್ಲಿ 48 ಪ್ರಕರಣಗಳು ಐದು ವರ್ಷಗಳಿಂದ ಉಳಿದುಕೊಂಡಿವೆ. ಪ್ರಕರಣ ದಾಖಲಿಸಿಕೊಂಡ ಒಂದು ವರ್ಷದ ಒಳಗೆ ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯದಲ್ಲಿಆರೋಪ ಪಟ್ಟಿ ಸಲ್ಲಿಸಬೇಕೆಂಬ ನಿರೀಕ್ಷೆಈಡೇರುತ್ತಿಲ್ಲ. ಅನೇಕ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದಿಂದಅನುಮತಿ ಪಡೆಯುವುದು ವಿಳಂಬವಾಗಿ ವಿಚಾರಣೆಆರಂಭವಾಗಿಲ್ಲ. ತನಿಖೆಗೂ ಹತ್ತಾರುತಾಂತ್ರಿಕ ಸಮಸ್ಯೆಗಳು ಎದುರಾಗಿವೆ.
ದೀಪದ ಬುಡದಲ್ಲಿಯೇಕತ್ತಲುಇರುವಂತೆ ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧವೂ ಭ್ರಷ್ಟಾಚಾರದ 82 ಪ್ರಕರಣಗಳು 2023ರ ಡಿಸೆಂಬರಅAತ್ಯದ ವರೆಗೆದಾಖಲಾಗಿವೆ. ಇವರಲ್ಲಿ 54 ಪ್ರಕರಣಗಳು ಗ್ರೂಪ್ ಎ ಅಧಿಕಾರಿಗಳ ವಿರುದ್ಧ ಇವೆ. ಗ್ರೂಪ್ ಬಿ ಮತ್ತುಗ್ರೂಪ್ ಸಿ ಅಧಿಕಾರಿಗಳ ವಿರುದ್ಧ 28 ಪ್ರಕರಣಗಳು ತನಿಖೆಗೆ ಬಾಕಿ ಉಳಿದಿವೆ. ಇವುಗಳಲ್ಲಿ 25 ಪ್ರಕರಣಗಳು ನಾಲ್ಕು ವರ್ಷಗಳಿಗೂ ಹೆಚ್ಚಿನ ಕಾಲದಿಂದತನಿಖೆಯ ಹಂತದಲ್ಲಿವೆ. ಅವನ್ನು ಪೂರ್ಣಗೊಳಿಸಲು ಆಗಿಲ್ಲ. ಸಿಬಿಐ ಸಂಸ್ಥೆಗೆ ಮಂಜೂರು ಮಾಡಿರುವ 7295 ಹುದ್ದೆಗಳಲ್ಲಿ 1610 ಹುದ್ದೆಗಳು ಖಾಲಿ ಇರುವುದನ್ನು ಸಿವಿಸಿ ವರದಿ ಗುರುತಿಸಿದೆ. ಅಗತ್ಯ ಸಿಬ್ಬಂದಿಯ ಕೊರತೆಯೂತನಿಖೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕೆಕಾರಣಎಂಬುದನ್ನು ವರದಿ ಹೇಳಿದೆ.
ಸಿಬಿಐ ಕೇಂದ್ರ ಸರ್ಕಾರದಅಧೀನದಲ್ಲಿದ್ದರೂ ಸ್ವಾಯತ್ತ ಸಂಸ್ಥೆಯಾಗಿಕರ‍್ಯನಿರ್ವಹಿಸಬೇಕಾದತನಿಖಾ ಸಂಸ್ಥೆ. ಅದನ್ನು ಕೇAದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ವಿರೋಧಿಗಳನ್ನು ನಿಗ್ರಹಿಸಲು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕಾಲಕಾಲಕ್ಕೆ ಕೇಳಿ ಬರುತ್ತಿದ್ದರೂಅದನ್ನು ಅಲ್ಲಗಳೆಯುವ ಪ್ರಯತ್ನಗಳೂ ಆಗುತ್ತಿಲ್ಲ. ಸಿಬಿಐ ಅಧಿಕಾರಿಗಳೂ ಪೊಲೀಸ್ ಸೇವೆಯ ಸಿಬ್ಬಂದಿಯೇ ಆಗಿರುವುದರಿಂದ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೂ ಅವರಿಗೂ ಮೂಲದಲ್ಲಿ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ. ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿಗಳೂ ನಿಯೋಜನೆಯ ಮೇಲೆ ಸಿಬಿಐ ಸೇವೆಗೆ ಸೇರುವುದುಅಪರೂಪವಲ್ಲ. ಕರ್ನಾಟಕದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದ ಐಪಿಎಸ್ ಅಧಿಕಾರಿಗಳು ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನಿದರ್ಶನಗಳಿವೆ.
ಕರ್ನಾಟಕದ ಅನೇಕ ಪ್ರಕರಣಗಳು ವಿರೋಧಪಕ್ಷಗಳ ಒತ್ತಾಯಕ್ಕೆ ಸಿಬಿಐಗೆ ತನಿಖೆಗೆಒಪ್ಪಿಸಲಾಗಿದ್ದು ಅವುಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ರಾಜ್ಯದ ಪೊಲೀಸರು ನಡೆಸಿದರೆ ಬರುತ್ತಿದ್ದ ಫಲಿತಾಂಶವೇ ಬಂದಿರುವುದನ್ನು ಗಮನಿಸಬೇಕು. ವಿರೋಧ ಪಕ್ಷದಒತ್ತಾಯದಿಂದ ಸಿಬಿಐಗೆ ಒಪ್ಪಿಸಲಾಗಿದ್ದ ಪರೇಶ್ ಮೇಸ್ತ ಸಾವಿನ ಪ್ರಕರಣ, ಪೊಲೀಸ್‌ಅಧಿಕಾರಿಯೊಬ್ಬರಆತ್ಮಹತ್ಯೆಯ ಪ್ರಕರಣದಲ್ಲಿ ಸಚಿವರೊಬ್ಬರ ಪಾತ್ರ ಇದೆ ಎಂದು ಆರೋಪಿಸಲಾದ ಈಚಿನ ಎರಡು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದ ವಿರೋಧ ಪಕ್ಷ ನಿರೀಕ್ಷೆ ಮಾಡಿದ್ದತೀರ್ಪು ಹೊರಬರಲಿಲ್ಲ. ಸಿಬಿಐ ಬಳಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಯಶಸ್ವಿಯಾಗಲಿಲ್ಲ. ತನಿಖಾ ಸಂಸ್ಥೆಗಳ ಸ್ವಾಯತ್ತತೆಗೆ ಭಂಗ ಬಾರದರೀತಿಯಲ್ಲಿ ಅವು ಕರ‍್ಯನಿರ್ವಹಿಸುವುದಕ್ಕೆ ಅವಕಾಶ ನೀಡುವುದು ಅವುಗಳ ವಿಶ್ವಾಸಾರ್ಹತೆಯನ್ನು ಉಳಿಸುತ್ತದೆ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಭ್ರಷ್ಟಾಚಾರಕ್ಕೆ ಸಂಬAಧಿಸಿ ತನಿಖೆ ಪೂರ್ಣಗೊಂಡ ಪ್ರಕರಣಗಳ ತ್ವರಿತ ವಿಚಾರಣೆಗೆ ಸರ್ಕಾರ ವಿಶೇಷ ನ್ಯಾಯಾಲಯಗಳನ್ನು ಆರಂಭಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಅಗತ್ಯ.