ಬೆಂಗಳೂರು: ಇಂಡಿಗೋ ಏರ್ಲೈನ್ಸ್ ಆಗಾಗಾ ಪ್ರಯಾಣಿಕೆ ಅನುಕೂಲಕ್ಕೆ ವಿಶೇಷ ಸೇವೆಗಳನ್ನು ಒದಗಿಸುತ್ತಲೇ ಇರುತ್ತದೆ. ಇನ್ನೂ ಇದೀಗ ಬೇರೆ ಉದ್ದೇಶಕ್ಕೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ಸೇವೆ ನೀಡಲು ಮುಂದಾಗಿದೆ. ಹಾಗಾದರೆ ಕಾರಣ ಏನು ಹಾಗೂ ಈ ಸೇವೆ ಯಾವಾಗಿನಿಂದ ಆರಂಭವಾಗಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅಧಿವೇಶನದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರು, ಶಾಸಕರು, ವಿಪಕ್ಷ ನಾಯಕರು ಮತ್ತು ಸರ್ಕಾರದ ಅಧಿಕಾರಿ ವರ್ಗ ಬೆಳಗಾವಿಗೆ ಆಗಮಿದಲಿದೆ. ಆದ್ದರಿಂದ ಇವರಿಗೆಲ್ಲ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂಡಿಗೋ ಏರ್ಲೈನ್ಸ್ ವಿಮನಯಾನ ಸಂಸ್ಥೆಯು ವಿಶೇಷ ಸೇವೆ ಒದಗಿಸಲು ಮುಂದಾಗಿದೆ ಎಂದು ತಿಳಿದುವಂದಿದೆ. ಇನ್ನು ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದರು. ಈ ವಿಮಾನವು ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗಾವಿಯನ್ನು 7 ಗಂಟೆಗೆ ತಲುಪಲಿದೆ. ಮತ್ತೆ 7.30ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. ಈ ವಿಶೇಷ ವಿಮಾನದಲ್ಲು 189 ಆಸನಗಳಿವೆ. ಅಧಿವೇಶನ ಮುಕ್ತಾಯದ ಬಳಿಕ ಡಿಸೆಂಬರ್ 20ರಿಂದ ATR72 ವಿಮಾನ ಸೇವೆಗಳು ಎಂದಿನಂತೆ ಮುಂದುವರೆಯಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.