ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ)ವು ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 14,582 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಭರ್ತಿ ನಡೆಸಲಾಗುತ್ತಿದೆ.

ವಯೋಮಿತಿ: ಕನಿಷ್ಠ 18 ಗರಿಷ್ಠ 30 ವರ್ಷ ಮೀರಿರಬಾರದು.
ವಿದ್ಯಾರ್ಹತೆ: ಪದವಿ ಹೊಂದಿರಬೇಕು. 12ನೇ ತರಗತಿಯಲ್ಲಿ ಗಣಿತ ಅಧ್ಯಯನ ಮಾಡಿರಬೇಕು.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 100 ರೂ ಅರ್ಜಿ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮೂಲಕ ಆಯ್ಕೆ
ಜೂನ್ 9ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಡೇಯ ದಿನ ಜುಲೈ 4. ಅರ್ಜಿ ಶುಲ್ಕ ಭರಿಸಲು ಕೊನೆಯ ದಿನ ಜುಲೈ 5. ಆನ್ಲೈನ್ ತಿದ್ದುಪಡಿಗೆ ಜುಲೈ 9ರಿಂದ 10ರವರೆಗೆ ಅವಕಾಶವಿದೆ. ಡಿಸೆಂಬರ್ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.gov.in ಭೇಟಿ ನೀಡಿ