ಹುಳಿಯಾರು ಪಟ್ಟಣವನ್ನು ತಾ. ಕೇಂದ್ರವನ್ನಾಗಿಸಲು ಕ್ರಮ : ಶಾಸಕ ಸುರೇಶ್ ಬಾಬು ಭರವಸೆ.

ಹುಳಿಯಾರು ಪಟ್ಟಣವನ್ನು ತಾ. ಕೇಂದ್ರವನ್ನಾಗಿಸಲು ಕ್ರಮ : ಶಾಸಕ ಸುರೇಶ್ ಬಾಬು ಭರವಸೆ.

ತಾಲೂಕು ಕೇಂದ್ರ ಘೋಷಣೆಗೆ ಕ್ರಮ: ಶಾಸಕ ಸುರೇಶ್ ಬಾಬು.

ಚಿಕ್ಕನಾಯಕನಹಳ್ಳಿ : ವಿಧಾನಸಭಾ ಕ್ಷೇತ್ರದಲ್ಲಿ 23ನೇ ವಾರಕ್ಕೆ ಕಾಲಿಟ್ಟಿರುವ ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಶಾಸಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತ ಪರಿಹಾರ ಒದಗಿಸಲಾಗುತ್ತಿದೆ. ಪಕ್ಷ–ಜಾತಿ ಭೇದವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಹುಳಿಯಾರು ಪಟ್ಟಣದಲ್ಲಿ ಸುಮಾರು 69 ಕೋಟಿ 92 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ಆಸ್ಪತ್ರೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಶಾಶ್ವತ ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ಕುಡಿಯುವ ನೀರಿನ ಸಮಗ್ರ ವ್ಯವಸ್ಥೆ ಕಲ್ಪಿಸಲು ವಿಶೇಷ ಯೋಜನೆ ರೂಪಿಸಲಾಗಿದೆ.

ಮನೆ ಇಲ್ಲದವರಿಗೆ ಸ್ಥಳ ಗುರುತಿಸಿ ನಿವೇಶನ ಹಂಚಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದ ಹುಳಿಯಾರು ಪಟ್ಟಣದ 16 ವಾರ್ಡುಗಳ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಯಾವುದೇ ತಾಲೂಕಿನಿಗಿಂತ ಕಡಿಮೆಯಿಲ್ಲದಂತೆ ಹುಳಿಯಾರನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಸುರೇಶ್ ಬಾಬು ತಿಳಿಸಿದ್ದಾರೆ.

ಇದಲ್ಲದೆ, ಹುಳಿಯಾರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ವಿಧಾನಸಭೆಯಲ್ಲಿ ಒತ್ತಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *