ಬೆಂಗಳೂರು: ಮಳೆಯಿಂದ ವಿವಿಧ ರಾಜ್ಯಗಳಿಗೆ ಟೊಮೇಟೊ ಎಕ್ಸಪೋರ್ಟ್ ಆಗ್ತಿಲ್ಲ. ದಿಢೀರ್ ಬೆಲೆ ಕುಸಿದಿದೆ. ಮಳೆಯಿಂದ ಹಣ್ಣುಗಳು ಹಾಳಾಗುತ್ತಿರುವ ಹಿನ್ನಲೆ ಖರೀದಿದಾರರು ಬರ್ತಿಲ್ಲ ಎಂದು ರೈತರೊಬ್ಬರು ಕಣ್ಣೀರು ಹಾಕಿದ್ದಾರೆ.
ರಾಜ್ಯದೆಲ್ಲೆಡೆ ವರುಣಾರ್ಭಟ ಜೋರಾಗಿದೆ ಈ ಬಿಟ್ಟೂಬಿಡದ ಜಿಟಿ ಜಿಟಿ ಮಳೆಯಿಂದ ಕೆಂಪು ಸುಂದರಿ ಟೊಮೇಟೊಗೆ (Tomato) ಕಂಟಕ ಎದುರಾಗಿದ್ದು ಟೊಮೇಟೊ ಬೆಲೆ ಕುಸಿದಿದೆ. ಮೂರು ದಿನಗಳ ಹಿಂದೆ 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ ಸಾವಿರ ರೂಪಾಯಿ ಇತ್ತು.
ಆದರೆ ಈಗ ದಿಢೀರ್ ಬೆಲೆ ಕುಸಿದಿದ್ದು 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ 250 ರೂಪಾಯಿಗೆ ಆಗಿದೆ. ಮಳೆಯಿಂದ ಟೊಮೇಟೊ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಾಟವಾಗದ ಕಾರಣ ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಲ್ಲಿ ಟೊಮೇಟೊ ಕೇಳುವವರೇ ಇಲ್ಲದಂತಾಗಿದೆ.