ಸೂಟ್ ಕೇಸ್ ಬಾಂಬ್ ಸೃಷ್ಟಿಸಿದ ಆತಂಕ…!

ಸೂಟ್ ಕೇಸ್ ಬಾಂಬ್ ಸೃಷ್ಟಿಸಿದ ಆತಂಕ...!

ಕೋಲಾರ: ಇವತ್ತು ಬೆಳ್ಳಂಬೆಳಿಗ್ಗೆಯೇ ಅದೊಂದು ಸೂಟ್ ಕೇಸ್ ಇಡೀ ನಗರವನ್ನು ಬೆಚ್ಚಿ ಬೀಳಿಸಿತ್ತು, ಬೀಪ್ ಬೀಪ್ ಎನ್ನುವ ಅದೊಂದು ಶಬ್ದ ಹಲವು ರೀತಿಯ ಅನುಮಾನಗಳಿಗೆ, ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು, ಸ್ಥಳಕ್ಕೆ ಬಂದ ಪೊಲೀಸರು ಸರಾಸರಿ ಐದುವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಸೂಟ್ ಕೇಸ್ ಸೃಷ್ಟಿಸಿದ್ದ ಆತಂಕ ನಿವಾರಣೆಯಾಗಿದೆ..

ರಸ್ತೆ ಬದಿಯಲ್ಲಿ ಬಿದ್ದಿರುವ ಸೂಟ್ ಕೇಸ್, ಆತಂಕದಿಂದ ನೋಡುತ್ತಿರುವ ನೂರಾರು ಜನರು, ಮತ್ತೊಂದೆಡೆ ಬಾಂಬ್ ನಿಷ್ಕ್ರಿಯ ತಜ್ನರಿಂದ ನಡೆಸುತ್ತಿರುವ ಸೂಟ್ ಕೇಸ್ ಕಾರ್ಯಾಚರಣೆ,ಈ ಎಲ್ಲಾ ದೃಷ್ಯಗಳು ಕಂಡು ಬಂದಿದ್ದು ಕೋಲಾರ ನಗರದ ಹೊರವಲಯ ಟಮಕ ದಲ್ಲಿ. ಹೌದು ಇವತ್ತು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೋಲಾರ ನಗರದ ಹೊರವಲಯ ಟಮಕ ಕೈಗಾರಿಕಾ ಪ್ರದೇಶ ರಾಷ್ಟ್ರೀಯಾ ಹೆದ್ದಾರಿ-75 ರ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಬೆಳ್ಳಂಬೆಳಿಗ್ಗೆ ಸೂಟ್ ಕೇಸ್ವೊಂದು ಜಿಲ್ಲೆಯ ಜನರ ನಿದ್ದೆ ಗೆಡಿಸಿತ್ತು. ಅದರಲ್ಲಿ ಬಾಂಬ್ ಅಥವಾ ಇತರೆ ಯಾವುದೋ ಸ್ಟೋಟಕ ಇರುವ ಆತಂಕ ಮೂಡಿಸಿದೆ, ವಿಷಯ ತಿಳಿದ ಸ್ಥಳೀಯರೊಬ್ಬರು ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ರು, ಈವೇಳೆ ಸ್ಥಳಕ್ಕ ಎಂದ ಪೊಲೀಸರು ನೋಡಲಾಗಿ ಸೂಟ್ ಕೇಸ್ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವ ರೀಯಲ್ಲಿತ್ತು, ಸೂಟ್ ಕೇಸ್ ನಲ್ಲಿ ಬೀಪ್ ಸೌಂಡ್ ಬರುತ್ತಿತ್ತು, ಅನ್ನೋ ಕಾರಣಕ್ಕೆ ಅದು ನೋಡುಗರಲ್ಲಿ ಆತಂಕಕ್ಕೂ ಕಾರಣವಾಗಿತ್ತು ಈ ವೇಳೆ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಶ್ವಾನ ದಳ, ಅಗ್ನಿಶಾಮಕ ದಳ ಹಾಗೂ ಎಸ್ಪಿ ನಿಖಿಲ್ ಪರಿಶೀಲನೆ ನಡೆಸಿದ್ರು ಈವೇಳೆ ಸೂಟ್ ಕೇಸ್ನಲ್ಲಿ ಏನಾದರೂ ಇರುವ ಅನುಮಾನ ಇತ್ತು ಈವೇಳೆ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯನ್ನು ಬಂದ್ ಮಾಡಿಸಿದ ಪೊಲೀಸರು ಜನರ ಸಂಚಾರಕ್ಕೆ ನಿರ್ಭಂದ ಹಾಕಿದ್ರು, ಜೊತೆಗೆ ಮುಂಜಾಗ್ರತಾ ಕ್ರಮವಾಗಿ ರಸ್ತೆ ಪಕ್ಕದಲ್ಲೇ ಇದ್ದ ಟಮಕ ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ಎಸ್ಪಿ ನಿಖಿಲ್ ಅವರಿಗೆ ಹಿರಿಯ ಅದಿಕಾರಿಗಳು ಬೆಂಗಳೂರು ಬಾಂಬ್ ನಿಷ್ಕ್ರಿಯ ದಳದ ತಜ್ನರನ್ನು ಕರೆಸಿಕೊಳ್ಳುವಂತೆ ನೀಡಿದ ಸೂಚನೆ ಮೇರೆಗೆ ಬಾಂಬ್ ನಿಷ್ಕ್ರಿಯ ತಜ್ನರು ಬರುವಂತೆ ಸೂಚನೆ ನೀಡಲಾಯಿತು, ಬೆಂಗಳೂರಿನಿಂದ ಬರಲು ಒಂದುವರೆ ಗಂಟೆ ಸಮಯ ಬೇಕಾಗಿತ್ತು, ಅಷ್ಟೊತ್ತಿಗಾಗಲೇ ಸೂಟ್ಕೇಸ್ ನಲ್ಲಿ ಬಾಂಬ್ ಇದೆಯಂತೆ ಅನ್ನೋ ಸುದ್ದಿ ಕೋಲಾರ ಜಿಲ್ಲೆಯಾಧ್ಯಂತ ಹರಡಿತ್ತು, ವಿಷಯ ತಿಳಿದು ಆತಂಕ ಹಾಗೂ ಕುತೂಹಲದಿಂದ ಸಾಕಷ್ಟು ಜನರು ಜಮಾಯಿಸಿದ್ದರು, ಈವೇಳೆ ಪೊಲೀಸರು ಸೇರಿದ್ದ ಜನರನ್ನು ಚದುರಿಸಿದರು.

ಸುಮಾರು 12 ಗಂಟೆ ಸುಮಾರಿಗೆ ಬೆಂಗಳೂರಿ ಬಾಂಬ್ ನಿಷ್ಕ್ರಿಯ ದಳದ ಇನ್ಪೆಕ್ಟರ್ ಸೇರಿದಂತೆ ಸುಮಾರು ಐದು ಜನ ಬಾಂಬ್ ನಿಷ್ಕ್ರಿಯ ದಳದ ತಜ್ನರು ಸ್ಥಳಕ್ಕೆ ಬಂದು, ಬಾಂಬ್ ರಕ್ಷಾ ಕವಚ ಧರಿಸಿ ನಂತರ ತಮ್ಮಲ್ಲಿದ್ದ ಮೆಟಲ್ ಡಿಟೆಕ್ಟರ್, ಸ್ಕಾನರ್ ಸೇರಿದಂತೆ ವಿವಿದ ಉಪಕರಣಗಳನ್ನು ಬಳಿಸಿ ಮೊದಲು ಸೂಟ್ ಕೇಸ್ನಲ್ಲಿ ಏನಿದೆ ಅನ್ನೋದನ್ನು ಪರಿಶೀಲನೆ ನಡೆಸಿದ್ರು ನಂತರ, ಸೂಟ್ ಕೇಸ್ನಲ್ಲಿ ಯಾವುದೇ ಆತಂಕಕಾರಿ ವಸ್ತುಗಳು ಇಲ್ಲಾ ಅನ್ನೋದನ್ನು ಖಚಿತ ಪಡಿಸಿಕೊಂಡ ನಂತರ ಎಸ್ಪಿ ನಿಖಿಲ್ ಅವರ ಸೂಚನೆ ಮೇರೆಗೆ  ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಜನರನ್ನು ಚದುರಿಸಿ ನಂತರ ಸೂಟ್ಕೇಸ್ ನ್ನು ಸಣ್ಣದಾದ ಡಿಟೋನೇಟರ್ ಬಳಸಿಕೊಂಡು ಬ್ಲಾಸ್ಟ್ ಮಾಡಲಾಯಿತು. ಈ ವೇಳೆ ಬ್ಲಾಸ್ಟ್ ಆದ ಸೂಟ್ ಕೇಸ್ನ ಅವಶೇಷಗಳನ್ನು ಪರಿಶೀಲನೆ ನಡೆಸಿ ಸೂಟ್ಕೇಸ್ ನಲ್ಲಿ ಯಾವುದಾದರೂ ಸ್ಟೋಟಕ ಅಂಶ ಇದೆಯಾ ಅನ್ನೋದನ್ನು ಪರಿಶೀಲಿಸಿದರು, ಈವೇಳೆ ಅದು ಕ್ರೌನ್ ಅನ್ನೋ ಕಂಪನಿಯ ಸೂಟ್ ಕೇಸ್ ಆಗಿದ್ದು ಇದು ಸ್ಮಾರ್ಟ್ ಸೂಟ್ ಕೇಸ್ ಇದ ಸೇಪ್ಟಿಗಾಗಿ ಅದಕ್ಕೆ ಸೆನ್ಸಾರ್ ಅಳವಡಿಸಿ ಸೂಟ್ ಕೇಸ್ ತೆರೆಯಲು ನೀಡಲಾಗುವ ಪಾಸ್ವರ್ಡ್ ತಪ್ಪು ಹಾಕಿದಾಗ ಅದು ಅಲರ್ಟ್ ಮಾಡುತ್ತದೆ ಇದೊಂದು ಬೆಲೆ ಬಾಳುವ ಸೂಟ್ ಕೇಸ್ ಅನ್ನೋದು ಕೋಲಾರ ಎಸ್ಪಿ ಖಚಿತ ಪಡಿಸಿ ಜಿಲ್ಲೆಯ ಜನರಲ್ಲಿ ಇದ್ದ ಆತಂಕವನ್ನು ದೂರ ಮಾಡಿದ್ರು. ಒಟ್ಟಾರೆ ಇವತ್ತು ಕೋಲಾರದಲ್ಲಿ ಬೆಳ್ಳಂಬೆಳಿಗ್ಗೆ ಆತಂಕ ಸೃಷ್ಟಿ ಮಾಡಿ, ಅನುಮಾನಾಸ್ಪದ ಸೌಂಡ್ ಮಾಡುವ ಮೂಲಕ ಪತ್ತೆಯಾಗಿದ್ದ ಸೂಟ್ ಕೇಸ್ ನ್ನು ಬ್ಲಾಸ್ಟ್ ಮಾಡುವ ಮೂಲಕ ಜನರಲ್ಲಿ ಇದ್ದ ಆತಂಕವನ್ನು ದೂರ ಮಾಡಲಾಗಿದೆ. ಯಾವುದೇ ಅನಾಹುತ ಆಗಲಿಲ್ಲ ಆದರೂ ಜನರಿಗೆ ಎಚ್ಚರಿಕೆಯಿಂದ ಇರಬೇಕು ಅನ್ನೋದಕ್ಕೆ ಇದೊಂದು ಪಾಠವಾಗಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *