‘ಸು ಫ್ರಮ್ ಸೋ’ ಚಿತ್ರದ ಯಶಸ್ಸಿಗೆ ಸಂಗೀತದ ಪಾತ್ರ ಅತ್ಯಂತ ಪ್ರಮುಖ. ಕಾಲೇಜು ವಿದ್ಯಾರ್ಥಿ ಸುಮೇಧ್ ಕೆ. ಅವರ ಸಂಗೀತ ಸಂಯೋಜನೆಯು ಚಿತ್ರಕ್ಕೆ ಹೊಸ ಆಯಾಮ ನೀಡಿದೆ. ರಾಜ್ ಬಿ. ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ಸುಮೇಧ್ ಅವರು ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.
ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಯಶಸ್ಸು ಕಾಣಲು ಸಿನಿಮಾದ ಹಾಡುಗಳು ಕೂಡ ಪ್ರಮುಖ ಕಾರಣ. ಎಲ್ಲಾ ಹಾಡುಗಳು ಸಾಕಷ್ಟು ಗಮನ ಸೆಳೆದಿವೆ. ಮೆಲೋಡಿ, ಭರ್ಜರಿ ಸ್ಟೆಪ್ ಹಾಕೋ ಸಾಂಗ್ಗಳು ಚಿತ್ರದಲ್ಲಿ ಇವೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಕೆ. ಅವರು. ಅವರಿನ್ನೂ ಕಾಲೇಜು ಓದುತ್ತಿದ್ದಾರೆ. ಅವರು ಚಿತ್ರದಲ್ಲಿ ಕೆಲಸ ಮಾಡಿದ ಅನುಭವನ್ನು ಬಿಚ್ಚಿಟ್ಟಿದ್ದಾರೆ.
ರಾಜ್ ಬಿ. ಶೆಟ್ಟಿ ಹಾಗೂ ತಂಡ ಹಾಡನ್ನು ಕಂಪೋಸ್ ಮಾಡಲು ಹೇಗೆ ಸಹಾಯ ಮಾಡಿತು ಎಂಬುದನ್ನು ಸುಮೇಧ್ ವಿವರಿಸಿದ್ದಾರೆ. ‘ಸಿನಿಮಾದ ಗೆಲುವು ತುಂಬಾನೆ ಖುಷಿ ಕೊಟ್ಟಿದೆ. ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಜನ ಸಾಂಗ್ಗೆ ರಿಯಾಕ್ಟ್ ಮಾಡಿದ್ದು ನೋಡಿದಾಗ ಖುಷಿ ಆಗುತ್ತದೆ. ರಾಜ್ ಹಾಗೂ ತಂಡಕ್ಕೆ ಸಿನಿಮಾದಲ್ಲಿ ಏನು ಬೇಕು ಎಂಬ ಕ್ಲ್ಯಾರಿಟಿ ಇತ್ತು. ಸಿಚ್ಯುವೇಶನ್ ಹೀಗೆ ಎಂದು ವಿವರಿಸುತ್ತಿದ್ದರು. ಕಥೆ ಎಲ್ಲೂ ಬ್ರೇಕ್ ಆಗಬಾರದು ಆ ರೀತಿಯಲ್ಲಿ ಮ್ಯೂಸಿಕ್ ಮಾಡಬೇಕು ಎಂದು ಹೇಳುತ್ತಿದ್ದರು. ಅದರ ಆಧಾರದ ಮೇಲೆ ನಾನು ಎಕ್ಸ್ಪ್ಲೋರ್ ಮಾಡಲು ಅವಕಾಶ ಇತ್ತು’ ಎಂದಿದ್ದಾರೆ ಅವರು.
‘ಡ್ಯಾಂಕ್ಸ್ ಆ್ಯಂಥಮ್ಗೆ ನಾನು ಹಲವು ವರ್ಷನ್ಗಳನ್ನು ಕಂಪೋಸ್ ಮಾಡಿದ್ದೆ. ಅದರಲ್ಲಿ ಈಗ ಬಳಕೆ ಆಗಿರುವ ಮ್ಯೂಸಿಕ್ನ ಫೈನಲ್ ಮಾಡಲಾಯಿತು. ಮೆಲೋಡಿ ಹಾಡುಗಳನ್ನು ಕಂಪೋಸ್ ಮಾಡುವಾಗಲೂ ರಾಜ್ ಅವರು ಸಿಚ್ಯುವೇಶನ್ ಎಕ್ಸ್ಪ್ಲೇನ್ ಮಾಡಿದ್ದರು. ಆ ರೀತಿಯಲ್ಲಿ ನಾನು ಮ್ಯೂಸಿಕ್ ಮಾಡಿದೆ’ ಎನ್ನುತ್ತಾರೆ ಅವರು. ಈ ಗೆಲುವಿನ ಬಳಿಕ ಸುಮೇಧ್ಗೆ ಹಲವು ಆಫರ್ಗಳು ಬರುತ್ತಿವೆಯಂತೆ. ‘ಈ ಗೆಲುವು ನನ್ನ ವೃತ್ತಿ ಜೀವನಕ್ಕೆ ಚಾಲೆಂಜ್ ಹಾಗೂ ಪಾಸಿಟಿವ್ ಎರಡೂ ಹೌದು. ಕಲಿಯೋಕೆ ಇನ್ನು ಸಾಕಷ್ಟಿದೆ. ನಾನು ನಿಧಾನವಾಗಿ ಸಿನಿಮಾಗಳನ್ನು ಒಪ್ಪಿ ಮ್ಯೂಸಿಕ್ ಮಾಡೋಣ ಎಂದುಕೊಂಡಿದ್ದೇನೆ. ಇನ್ನುಮುಂದೆ ಹೆಚ್ಚು ಜಾಗೃತೆ ಬೇಕು. ಸಾಕಷ್ಟು ಆಫರ್ಗಳು ಬರುತ್ತಿವೆ ಎನ್ನುತ್ತಾರೆ’ ಸುಮೇಧ್.