ಹೈದರಾಬಾದ್: ತೆಲಂಗಾಣ ಬಸ್ ಅಪಘಾತದಲ್ಲಿ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಮೂವರು ಹೆಣ್ಣುಮಕ್ಕಳು ಮಸಣ ಸೇರಿದ್ದಾರೆ. ಪೋಷಕರ ಆಕ್ರಂದ ಮುಗಿಲುಮುಟ್ಟಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬುವವರ ಮೂವರು ಹೆಣ್ಣುಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಲ್ಲರೂ ಕಾಲೇಜು ವಿದ್ಯಾರ್ಥಿಗಳು.
ಇತ್ತೀಚೆಗೆ ಕುಟುಂಬವು ತಮ್ಮ ಹಿರಿಯ ಮಗಳು ಅನುಷಾಳ ಮದುವೆಯನ್ನು ಆಚರಿಸಿತ್ತು. ವಾರಾಂತ್ಯದಲ್ಲಿ, ಹೈದರಾಬಾದ್‌ನಲ್ಲಿ ಓದುತ್ತಿದ್ದ ಹುಡುಗಿಯರು ತಂದೂರಿನಲ್ಲಿ ಮತ್ತೊಂದು ಮದುವೆಗೆಂದು ಬಂದಿದ್ದರು.
ನಾನು ಬರಬೇಡಿ ಎಂದೇ ಹೇಳಿದ್ದೆ ಆದರೆ ಅವರ ತಾಯಿಯ ಒತ್ತಾಯಕ್ಕೆ ಅವರು ಬಂದಿದ್ದರು. ಭಾನುವಾರ ಹೋಗಬೇಡಿ ಸೋಮವಾರ ಬೆಳಗಿನ ಜಾವ ಬೇಗ ಹೊರಟುಬಿಡಿ ಎಂದು ಎಷ್ಟೇ ಕೇಳಿಕೊಂಡರು ಉಳಿಯಲು ಮಕ್ಕಳು ಸಿದ್ಧರಿರಲಿಲ್ಲ.
ರೈಲು ಸಿಕ್ಕಿಲ್ಲವೆಂದು ಬಸ್ಸಿಗೆ ಬಿಡಲು ಬಂದಾಗ ಎಲ್ಯಾರೋ ಬಸ್ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು ಆದರೆ ಅದನ್ನೂ ನಾನು ಕಿವಿಗೆ ಹಾಕಿಕೊಂಡಿರಲಿಲ್ಲ. ಜಲ್ಲಿ ತುಂಬಿದ ಟ್ರಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟ್ರಕ್ ಬಸ್ ಮೇಲೆ ಮಗುಚಿ ಬಿದ್ದಿತ್ತು.
ಇದರಲ್ಲಿ 33 ವರ್ಷದ ಸಾಲಿಹಾ ಬೇಗಂ ಕುಟುಂಬದ ಕತೆ ಕೂಡಾ ಇದೆ. ಸಾಲಿಹಾ ತನ್ನ ಮೂರು ತಿಂಗಳ ಮಗುವಿನೊಂದಿಗೆ ತನ್ನ ಅಜ್ಜಿಯನ್ನು ಭೇಟಿಯಾಗಲು ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದರು. ಜಲ್ಲಿ ರಾಶಿಯೊಳಗೆ ಇಬ್ಬರ ದೇಹವೂ ಪತ್ತೆಯಾಗಿದೆ. ತಾಯಿ ಮಗುವನ್ನು ಅಪ್ಪಿಕೊಂಡೇ ಇದ್ದರು.ಮತ್ತೊಬ್ಬರು ಎನ್ ಹನುಮಂತು, ಅವರು ಹೈದರಾಬಾದ್ಗೆ ಹೋಗುವ ರೈಲು ತಪ್ಪಿ ಬಸ್ ಹತ್ತಿದ್ದರು. ಅವರು 10 ವರ್ಷದ ಮಗನನ್ನು ಅಗಲಿದ್ದಾರೆ.
For More Updates Join our WhatsApp Group :
