ಶಿಡ್ಲಘಟ್ಟ : ಕಳ್ಳರು ದೇವಸ್ಥಾನ, ಮನೆ ಬೀಗ ಮುರಿದು ಹುಂಡಿ, ಒಡವೆ,ಹಣ ಕಳ್ಳತನ ಮಾಡುವುದರ ಜೊತೆಯಲ್ಲಿ ಕುರಿ, ಆಕಳು, ಮೇಕೆ ಕಳ್ಳತನ ಮಾಡುತ್ತಿದ್ದ ಖದೀಮರು ಇದೀಗ ಒಂಟಿ ಮನೆಗಳ ಬಳಿ ಕೋಳಿಗಳ ಕಳ್ಳತನಕ್ಕೆ ಮುಂದಾಗಿದ್ದು, ತಾಲೂಕಿನ ಚಿಕ್ಕತೇಕಹಳ್ಳಿ ಗ್ರಾಮದ ಸರಸ್ವತಮ್ಮ ಹಾಗೂ ಪದ್ಮಮ್ಮ ಅವರು ಮನೆಗಳಲ್ಲಿ ಸಾಕಿದ್ದ 4-5 ಸಾವಿರ ರೂ. ಮೌಲ್ಯದ 10 ಕೋಳಿಗಳನ್ನು ರಾತ್ರೋರಾತ್ರಿ ದೋಚಿದ ಘಟನೆ ಸಂಭವಿಸಿದೆ.
ಇವರು ಗ್ರಾಮದ ಹೊರವಲಯದ ಪದ್ಮಮ್ಮ ಅವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ರಾತ್ರಿ ೮ ಗಂಟೆಯವರೆಗೆ ಇದ್ದು ನಂತರ ಊಟ ಮಾಡಲು ಮನೆಗೆ ಬಂದಾಗ ಲೈಟ್ ಗಳ ಸ್ವಿಚ್ ಆಫ್ ಮಾಡಿ ೪ ಕೋಳಿಗಳನ್ನ ಕದ್ದೊಯ್ದಿದ್ದಾರೆ. ನಂತರ ಊಟ ಮಾಡಿ ಮಲಗಲು ಬಂದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ಗ್ರಾಮದ ಸರಸ್ವತಮ್ಮ ಅವರು ಮನೆಯಲ್ಲಿ 10 ಗಂಟೆಗೆ ಮಲಗಿರುತ್ತಾರೆ, ಎಂದಿನOತೆ ಬೆಳಗಿನ ಜಾವ ಹಸುಗಳಲ್ಲಿ ಹಾಲು ಕರೆಯುವ ಸಲುವಾಗಿ ಎದ್ದು ಗಮನಿಸಿದಾಗ ಬೆಳಕಿಗೆ ಬಂದಿದೆ ಎನ್ನುತ್ತಾರೆ. ರಾತ್ರಿ ಎಲ್ಲರೂ ಮಲಗಿದ ನಂತರ ಬೀಗ ಮುರಿದು ಶಬ್ದ ಕೇಳಿಸದಂತೆ ಕೋಳಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಇದಕ್ಕೂ ಮುಂಚೆಯೂ ಒಮ್ಮೆ ಇದೇ ರೀತಿ ಕಳ್ಳತನವಾಗಿತ್ತು. ಆಗ ಬೀಟ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರು ರಾತ್ರಿ ಸಮಯದಲ್ಲಿ ಬಂದು ಓಡಾಡಿಕೊಂಡು ಹೋಗುತ್ತಿದ್ದರು. ಇತ್ತೀಚಿಗೆ ಬೀಟ್ ಪೊಲೀಸರು ಬರುವುದು ಕಡಿಮೆಯಾಗಿದೆ. ಕಳ್ಳರು ಈ ಸಮಯವನ್ನ ಸದ್ಬಳಕೆ ಮಾಡಿಕೊಂಡು ಕೋಳಿಗಳ ಕಳ್ಳತನ ಮಾಡಿರಬಹುದು ಎಂದು ಸಾರ್ವಜನಿಕರ ಮಾತಾಗಿದೆ.