ಬೆಂಗಳೂರು: ಟಿಕೆ ಹಳ್ಳಿ ಬಳಿ ನಂಜಾಪುರ ಗ್ರಾಮದ ಬಳಿ ಇರುವ ಕಾವೇರಿ ಹಂತ 5ರ ಪ್ರಮುಖ ಪೈಪ್ಲೈನ್ನ ಸ್ಕೌರ್ ವಾಲ್ವ್ನಲ್ಲಿ ಇಂದು ಬೆಳಿಗ್ಗೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖವಾದ ಈ ವಾಲ್ವ್ ದೋಷದಿಂದಾಗಿ, ಹಂತ 5ರ ಮೂಲಕ ಸರಬರಾಜಾಗುವ ನೀರಿನಲ್ಲಿ ಕೆಲ ಹೊತ್ತು ವ್ಯತ್ಯಯ ಉಂಟಾಗಲಿದೆ. ಮಳೆಯ ನಡುವೆಯೂ ತಕ್ಷಣ ಕಾರ್ಯಾರಂಭ ಮಾಡಿದ ತಾಂತ್ರಿಕ ಸಿಬ್ಬಂದಿ, ಮಧ್ಯಾಹ್ನದೊಳಗೆ ಹೊಸ ವಾಲ್ವ್ ಅಳವಡಿಸುವ ಕೆಲಸವನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಶ್ರಮಿಸುತ್ತಿದ್ದಾರೆ.
ಜಲಮಂಡಳಿ ಈ ತಾತ್ಕಾಲಿಕ ಅಡಚಣೆಗೆ ವಿಷಾದ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸಹಕಾರವನ್ನು ಕೋರಿದೆ. ಸ್ಥಳದಲ್ಲೇ ತಾಂತ್ರಿಕ ತಂಡ ಕಾರ್ಯ ನಿರ್ವಹಿಸುತ್ತಿದ್ದು, ನೀರು ಸರಬರಾಜು ಶೀಘ್ರದಲ್ಲಿ ಪುನಃಸ್ಥಾಪನೆಯಾಗಲಿದೆ.