ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ.

ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ.

ಪೇರಳೆ ಹಣ್ಣಿನಂತೆ ಅದರ ಎಲೆಯು ಸಹ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಎಲೆ ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು, ಪ್ರೊಟೀನ್, ವಿಟಮಿನ್ ಸಿ, ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಸಿಯಂ, ರಂಜಕ, ಪೊಟ್ಯಾಸಿಯಂ, ಕ್ವೆರ್ಸೆಟಿನ್, ಫ್ಲೇವನಾಯ್ಡ್ ಸೇರಿದಂತೆ ಹಲವು ಜೀವಸತ್ವ, ಖನಿಜ ಮತ್ತು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಜೊತೆಗೆ ಈ ಎಲೆ ಸಾಕಷ್ಟು ಔಷಧೀಯ ಗುಣಗಳನ್ನು ಸಹ ಹೊಂದಿದೆ. ಇದೇ ಕಾರಣಕ್ಕೆ ಪೇರಳೆ ಎಲೆಯನ್ನು ಜಗಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡೋದು. ಇದು ಮಾತ್ರವಲ್ಲದೆ ಪೇರಳೆ ಎಲೆಯ ಚಹಾ ಮಾಡಿ ಕುಡಿಯುವುದು ಕೂಡ ತುಂಬಾನೇ ಪ್ರಯೋಜನಕಾರಿ. ಇದು ಚರ್ಮವನ್ನು ಆರೋಗ್ಯಕವಾಗಿಸುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುವವರೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿದ್ದರೆ ಈ ಪೇರಳೆ ಎಲೆ ಸಹ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ ಬನ್ನಿ.

ಪೇರಳೆ ಎಲೆ ಚಹಾವನ್ನು ಮನೆಯಲ್ಲಿ ಹೇಗೆ ತಯಾರಿಸುವುದು:

4-5 ಪೇರಳೆ ಎಲೆಗಳನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ನೀರು ಕುದಿಯುತ್ತಿರುವಾಗ ತೊಳೆದಿಟ್ಟ ಪೇರಳೆ ಎಲೆಗಳನ್ನು ಸೇರಿಸಿ, ಬಳಿಕ ಕಡಿಮೆ ಉರಿಯಲ್ಲಿ ಅದನ್ನು 10 ರಿಂದ 12 ನಿಮಿಷಗಳ ಕಾಲ ಕುದಿಸಿ. ನಂತರ ಒಂದು ಕಪ್ಗೆ ಈ ನೀರನ್ನು ಸೋಸಿದರೆ ಪೇರಳೆ ಟೀ ಸಿದ್ಧ. ನೀವು ಬೇಕಾದರೆ ಇದಕ್ಕೆ  ಜೇನುತುಪ್ಪ ಅಥವಾ ನಿಂಬೆ ರಸ ಸೇರಿಸಬಹುದು.

ಪೇರಳೆ ಎಲೆ ಚಹಾದ ಆರೋಗ್ಯ ಪ್ರಯೋಜನ:

•          ಪೇರಳೆ ಎಲೆಗಳು ವಿಟಮಿನ್ ಎ ಯ ಪ್ರಬಲ, ನೈಸರ್ಗಿಕ ಮೂಲವಾಗಿದ್ದು, ಇದು ದೃಷ್ಟಿ ಸುಧಾರಿಸಲು,  ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

•          ಪೇರಳೆ ಎಲೆ ಚಹಾವು ಹೊಟ್ಟೆಗೆ ನೈಸರ್ಗಿಕ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಲೆಗಳು ಟ್ಯಾನಿನ್ಗಳು ಮತ್ತು ಫ್ಲೇವನಾಯ್ಡ್ಗಳನ್ನು ಹೊಂದಿದೆ. ಇದರ ಚಹಾ ಕುಡಿಯುವುದರಿಂದ  ಹೊಟ್ಟೆಯ ಉರಿಯೂತ, ಹೊಟ್ಟೆ ಭಾರ, ಗ್ಯಾಸ್ , ಆಮ್ಲೀಯತೆ ಅಥವಾ ಉಬ್ಬುವಿಕೆಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

•          ಪೇರಳೆ ಎಲೆಗಳ ಸಾರವು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಅಲ್ಲದೆ ಈ ಚಹಾ  ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಈ ಚಹಾ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್  ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.

•          ಪೇರಳೆ ಎಲೆ ಚಹಾವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಚಹಾವು ಪ್ರಿಡಿಯಾಬಿಟಿಸ್ ಮತ್ತು ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

•          ಪೇರಳೆ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಹೃದಯ ಸಂಬಂಧಿತ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *