ಚನ್ನಬಸವ. ಎಂ ಕಿಟ್ಟದಾಳ್
ಭಾರತೀಯ ನಾರಿಯರು ತಮ್ಮ ಜಡೆಯನ್ನು ಹಾಕಿಕೊಳ್ಳುವ ವಿಧಾನಕ್ಕೂ, ತ್ರಿವೇಣಿ ಸಂಗಮಕ್ಕೂ ಬಹಳಷ್ಟು ನಂಟು ಇದೆ. ಮಹಿಳೆಯರು ಜಡೆಯನ್ನು ಹೆಣೆಯುವುದಕ್ಕೂ ಮುನ್ನ ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳುತ್ತಾರೆ. ಅದೇ ರೀತಿ ನಮ್ಮ ತ್ರಿವೇಣಿ ಸಂಗಮದಲ್ಲಿ ಹರಿಯುವ ನದಿಗಳು ಕೂಡ ಮೂರು ಅದುವೇ ಗಂಗಾ, ಯಮುನಾ, ಸರಸ್ವತಿ.
ನಾರಿಯರು ತಮ್ಮ ಜಡೆಯನ್ನು ಹೆಣೆಯುವಾಗ ಕೂದಲನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಭಾಗವನ್ನು ಗೌಪ್ಯವಾಗಿ ಇಟ್ಟು ಇನ್ನು ಉಳಿದ ಎರಡು ಭಾಗವನ್ನು ಒಂದರ ಮೇಲೊಂದು ಎಣೆಯುತ್ತ ಹೋಗುತ್ತಾರೆ. ನಮ್ಮ ಮೂರು ನದಿಗಳು ಕೂಡ ಹಾಗೆ ಬಿಳಿ ಬಣ್ಣದ ಗಂಗೆ, ಹಸಿರು ಬಣ್ಣದ ಯಮುನೇ ಮಾತ್ರ ನಮ್ಮ ಕಣ್ಣಿಗೆ ಗೋಚರಿಸುವಂತಹದ್ದು, ಗುಪ್ತಗಾಮಿನಿ ಸರಸ್ವತಿ ಮಾತ್ರ ಗೌಪ್ಯವಾಗಿ ಹರಿಯುತ್ತಾಳೆ. ಅದು ನಮ್ಮ ಹೆಣ್ಣುಮಕ್ಕಳ ಜಡೆಯಂತೆ ಗೋಚರವಾಗುವಂತಹದ್ದು.
ಭಾರತದಲ್ಲಿ ಮಹಿಳೆಯರಿಗೆ ಗೌರವನೀಯ ಸ್ಥಾನವನ್ನು ನೀಡಿದ್ದು ಹರಿಯುವ ನದಿಗಳಿಗೂ ಕೂಡ ನಾರಿಯರ ಹೆಸರನ್ನೆ ಇಟ್ಟಿರುವಂತಹದ್ದು, ಗಂಗಾ, ಯಮುನಾ, ಸರಸ್ವತಿ, ಕಾವೇರಿ, ನರ್ಮದ, ಹೇಮಾವತಿ, ನೇತ್ರಾವತಿ ಶರಾವತಿ, ಗೋದಾವರಿ, ತುಂಗಭದ್ರೆ ಹೀಗೆ ಹಲವಾರು ನದಿಗಳಿಗೆ ಮಹಿಳೆಯರ ಹೆಸರನ್ನಿಟ್ಟು ವೈಷ್ಟö್ಯತೆಯನ್ನು ಮೆರದಿರುವುದು ನಮ್ಮ ಭಾರತೀಯರು. ಪ್ರತಿಯೊಂದು ನದಿಗೂ ತನ್ನದೇಯಾದಂತಹ ಇತಿಹಾಸವಿದೆ, ದಂತಕಥೆಗಳವೆ ಎಲ್ಲಾದರಲ್ಲೂ ಕೂಡ ಮಹಿಳೆಯರ ಪಾತ್ರವಿದೆ.
ಕರ್ನಾಟಕದಲ್ಲಿ ಕೂಡ ಇದೇ ರೀತಿ ತ್ರಿವೇಣಿ ಸಂಗಮ ನಡೆಯುತ್ತದೆ. ಶ್ರೀರಂಗಪಟ್ಟಣದಲ್ಲಿ ಸೇರುವ ಮೂರು ನದಿಗಳು ಕೊಡ ನಾರಿಯರ ಜಡೆಯನ್ನೆ ಹೋಲುತ್ತದೆ. ತಲಕಾವೇರಿ, ಹೇಮಾವತಿ, ಕಪಿಲ ಅಥವಾ ಕಬಿನಿ ಹೊಂದುಗೂಡುವ ಸ್ಥಳ ಕೂಡ ಮಹಿಳೆಯರ ಜಡೆಯನ್ನೇ ಹೋಲುವಂತಹದ್ದು ಎರಡು ನದಿಗಳು ಗೋಚರವಾದರು ಮತ್ತೊಂದು ನದಿ ಗುಪ್ತಗಾಮಿನಿಯಾಗಿ ಹರಿಯುತ್ತದೆ.
ಪ್ರಯಾಗ್ರಾಜ್ನಲ್ಲಿ ನಡೆಯವ ವೇಣಿದಾನ
ಪುರಾತನದಿಂದಲೂ ಮಹಿಳೆಯರ ಜಡೆ ತ್ರಿವೇಣಿ ಸಂಗಮಕ್ಕೆ ಹೋಲುವಂತಹದ್ದು. ಪ್ರಯಾಗ್ ರಾಜ್ನಲ್ಲಿ ವೇಣಿದಾನ ಎಂಬ ಪದ್ದತಿ ಕೂಡ ನಡೆದುಬಂದಿದೆ. ಅದರಂತೆ ಮಹಿಳೆಯರು ತನ್ನ ಗಂಡನ ಬಲತೊಡೆಯ ಮೇಲೆ ಕೂತು ಗಂಡನ ಕೈಯಿಂದ ಜಡೆಯನ್ನು ಹೆಣೆಸಿಕೊಳ್ಳುತ್ತಾರೆ. ನಂತರ ಗಂಡ ತನ್ನ ಹೆಂಡತಿಯ ಜಡೆಯನ್ನು 1 ಅಥವಾ 2 ಇಂಚಿನಷ್ಟು ಕತ್ತರಿಸಿಕೊಂಡು ಗಂಗಾ, ಯಮುನೆ, ಸರಸ್ವತಿ ನದಿಗಳು ಕೂಡುವ ಜಾಗಕ್ಕೆ ತೆರಳಿ ಅಲ್ಲಿ ಕೂದನ್ನು ವಿಸರ್ಜಿಸಿ ನಂತರ ಅಲ್ಲಿನ ಪವಿತ್ರ ಸ್ನಾನವನ್ನು ಮುಗಿಸಬೇಕು. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ದತಿ ಈಗಲೂ ಕೂಡ ಅನುಸರಿಸುತ್ತಾ ಬಂದಿದ್ದಾರೆ.