ಕಲಬುರಗಿ: ಮೃತಪಟ್ಟ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿದ್ದು, ಮರುದಿನ ಬೆಳಗಾಗುವಷ್ಟರಲ್ಲಿ ಮಗುವಿನ ದೇಹ ಮರದಲ್ಲಿ ಪ್ರತ್ಯಕ್ಷವಾದ ಘಟನೆ ಬೀದರ್‌ನಲ್ಲಿ ನಡೆದಿದೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿತ್ತು. ತಡರಾತ್ರಿ ಮನೆಯವರು ಹಾಗೂ ಸಂಬಂಧಿಕರು ಸೇರಿ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದರು.
ಭಾನುವಾರ ಬೆಳ್ಳಂಬೆಳಗ್ಗೆ ಅವರು ಆಶ್ಚರ್ಯ ಕಾದಿತ್ತು. ಭಾನುವಾರ ಬೆಳಗ್ಗೆ ಮಗು ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಪ್ರತ್ಯಕ್ಷವಾಗಿದ್ದು ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಮಗುವಿನ ಮೃತದೇಹವನ್ನು ಕಪ್ಪು ಬಟ್ಟೆಯಲ್ಲಿ ಮರಕ್ಕೆ ಕಟ್ಟಿ ಜೋಳಿಗೆಯಲ್ಲಿ ನೇತು ಹಾಕಲಾಗಿತ್ತು. ಮಾಟ ಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಗುವಿನ ಶವವನ್ನು ತೆಗೆದುಕೊಂಡು ಹೋಗಿ ಮತ್ತೆ ಅದೇ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಬ್ಲ್ಯಾಕ್ ಮ್ಯಾಜಿಕ್ ಮಾಡುವವರು ಮಾಟ ಮಂತ್ರಕ್ಕಾಗಿ ದೇಹವನ್ನು ಹೊರತೆಗೆದಿರಬಹುದು ಎಂದು ಕೆಲವರು ಅನುಮಾನಿಸಿದರೆ, ಇನ್ನು ಕೆಲವರು ಮಗುವಿನ ದೇಹದಲ್ಲಿರುವ ಆಭರಣಗಳನ್ನು ಕದಿಯಲು ಕಳ್ಳರು ಮಗುವಿನ ದೇಹವನ್ನು ಹೊರತೆಗೆದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ದಫನ ಮಾಡಿದ ಮಗುವನ್ನು ಮತ್ತೆ ತೆಗೆದು ಪ್ರಯೋಗ ಬಳಸಿ ಈ ರೀತಿ ಮಾಡಲಾಗಿದೆ ಎಂಬುದು ಗ್ರಾಮಸ್ಥರು ಶಂಕಿಸಿದ್ದಾರೆ. ಮರಕ್ಕೆ ಕಟ್ಟಿದ್ದ ಮಗುವಿನ ಮೃತದೇಹವನ್ನು ಮತ್ತೆ ಅದೇ ಸ್ಥಳದಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.