ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ವರ್ಕ್ಫ್ ಬೋರ್ಡ್ ವಿವಾದ ತೀವ್ರವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಸರಣಿ ಆರೋಪ ಎಸಗಿದ್ದರು. ಇದೀಗ ಈ ಕುರಿತಂತೆ ದಾಖಲೆ ಬಿಡುಗಡೆಗೊಳಿಸಿರುವ ಕೈ ಪಡೆ, ಅಂದಿನ ನೋಟಿಸ್ ಮುಂದಿಟ್ಟು ಕಮಲಕ್ಕೆ ತಿರುಗೇಟು ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಟೀಕಿಸಿರುವ ಸಚಿವ ಎಂ.ಬಿ. ಪಾಟೀಲ, ಬಿಜೆಪಿಯ ನಾಟಕ ಮಂಡಳಿಯಲ್ಲಿ ಭಿನ್ನಮತದ ಚಿತ್ತಾರ! ನಾ ಮುಂದು, ತಾ ಮುಂದು ಎಂದು ತಮ್ಮ ಪ್ರತಿಷ್ಠೆಯ ಅಸ್ತಿತ್ವಕ್ಕಾಗಿ ಸದಾ ಸುಳ್ಳಿನಕಂತೆ ಕಟ್ಟುವ, ಜನರ ಭಾವನೆಗಳೊಂದಿಗೆ ಆಟವಾಡುವ ಇವರು, ನಮ್ಮ ರೈತರಿಗೆ ಕಳುಹಿಸಿರುವ ನೋಟಿಸುಗಳಿಗೆ ಉತ್ತರಿಸಲಿ ಎಂದು ತಿರುಗೇಟು ನೀಡಿದ್ದಾರೆ.
ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವುವಿಜಯೇಂದ್ರ ಅವರ ಸತ್ಯಶೋಧನಾ ಸಮಿತಿ
ರಾಜ್ಯ ಬಿಜೆಪಿ ರಚಿಸಿರುವ ಸತ್ಯಶೋಧನಾ ಸಮಿತಿಯಲ್ಲಿ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ ಹಾಗೂ ವಿಜಯಪುರದ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳರ ಹೆಸರು ನಿನ್ನೆಯವರೆವಿಗೂ ಇರಲಿಲ್ಲ. ಇಂದು ದಿಢೀರನೆ ಅವರ ಹೆಸರು ಸೇರ್ಪಡೆಯಾಗಿದೆ. ಹಿರಿಯ ನಾಯಕರೆಂದು ಬಿಜೆಪಿಯಲ್ಲಿ ಗುರುತಿಸಲಾಗಿರುವ ಈ ಇಬ್ಬರು ನಾಯಕರು ಅತ್ತೂ ಕರೆದು, ಈ ಕಮಿಟಿಯಲ್ಲಿ ಸೇರುವ ಸ್ಥಿತಿಗೆ ಬಂದು ತಲುಪಿರುವುದು ಬಿಜೆಪಿಯ ದುಃಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಲೇವಡಿ ಮಾಡಿದರು.
ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು
ಸಮಸ್ಯೆಯೇ ಇಲ್ಲದ ವಕ್ಫ್ ಕುರಿತು ಸುಳ್ಳು ಹುಟ್ಟುಹಾಕುತ್ತಿರುವ ಈ ನಾಯಕರು ತಮ್ಮ ಮಧ್ಯದಲ್ಲಿ ಸತ್ಯವಾಗಿರುವ ಸಮಸ್ಯೆಗಳನ್ನು ಮೊದಲು ಬಗೆ ಹರಿಸಿಕೊಳ್ಳಲಿ. ಬಿಜೆಪಿ ಅವಧಿಯಲ್ಲಿ ರೈತರಿಗೆ ಕಳುಹಿಸಿರುವ ಮತ್ತಷ್ಟು ನೋಟಿಸುಗಳು, ಸತ್ಯಶೋಧನಾ ಸಮಿತಿಯ ಉತ್ತರಕ್ಕಾಗಿ ಎಂದರು. 2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು.
ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ? ಎಂದು ಪ್ರಶ್ನಿಸಿದರು.
ವಿಜಯೇಂದ್ರ ಅವರ ಸತ್ಯಶೋಧನಾ ಸಮಿತಿ
ರಾಜ್ಯದ ಅಭಿವೃದ್ಧಿ ಬಿಟ್ಟು ಹಿಜಾಬ್, ಹಲಾಲ್, ಉರಿ ಗೌಡ, ನಂಜೇಗೌಡ ಎಂದು ಆಡಳಿತ ನಡೆಸಿದ ನಾಟಕ ಮಂಡಳಿಯ ಮುಂದುವರೆದ ಭಾಗ ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ. ಸುಳ್ಳು ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರೆಚುವ ಇವರ ಕುತಂತ್ರ ಇಲ್ಲಿ ನಡೆಯುವುದಿಲ್ಲ. ವಿಜಯೇಂದ್ರ ಅವರ ಸತ್ಯಶೋಧನಾ ಸಮಿತಿ (ಅತ್ತು-ಗೋಗರೆದು ರಚನೆಗೊಂಡ ಪರಿಷ್ಕೃತ ಸತ್ಯಶೋಧನಾ ಸಮಿತಿ) ಅವರ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕಳುಹಿಸಿದ ನೋಟೀಸುಗಳಿಗೆ ಉತ್ತರ ಕೊಡಲಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ.