ಬೆಂಗಳೂರು: ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟ SCSP/ TSP ಮರುತುಂಬಿಸಲು ಸರ್ಕಾರ ಒತ್ತಾಯಿಸಿ ಬಹುಜನ ಮಹಾಸಭಾವತಿಂದ ಪ್ರತಿಭಟನೆ
ಭಾರತದೇಶದಲ್ಲಿ ಶತ ಶತಮಾನಗಳಿಂದ ಈ ನೆಲದ ಮೂಲ ನಿವಾಸಿಗಳಾದ ಪರಿಶಿಷ್ಟ ಜನಾಂಗದ ನಾವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವಮತ್ತುಪ್ರಗತಿ ಪರಚಿಂತಕರಾದ ನಮ್ಮನ್ನು ಎಲ್ಲಾ ರೀತಿಯ ಕುತಂತ್ರಗಳಿಂದ ವಂಚಿಸಿ ನಮ್ಮ ಆಸ್ತಿಗಳನ್ನು ಕೊಳ್ಳೆ ಹೊಡೆದು ಗುಲಾಮರನ್ನಾಗಿ ಮಾಡಿ ಪ್ರಾಣಿಗಳಿಗಿಂತಲು ಕೀಳಾಗಿ ನಡೆಸಿಕೊಂಡು ಬರುತ್ತಿದ್ದರು. ಆ ಸಂದರ್ಭದಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ರವರು ಸ್ವತಃ ಅವರ ಜೀವನದಲ್ಲಿ ಅನುಭವಿಸಿದ ಕಷ್ಟ ನೋವುಗಳಿಂದ ತನ್ನ ಜನರ ಮುಂದಿನ ಪೀಳಿಗೆಯು ಮುಂದಿನ ದಿನಗಳಲ್ಲಿ ಎಲ್ಲರಂತೆ ಸರಿಸಮಾನರಾಗಿ ಸಮ ಬಾಳು ಸಮ ಪಾಲು ಹೊಂದಬೇಕೆಂಬ ಆಶಯದೊಂದಿಗೆ ಸರ್ವ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಬಂದವರೆ, ಡಾ|ಬಿ.ಆರ್.ಅಂಬೇಡ್ಕರ್. ಆದ್ದರಿಂದ ಅವರಿಗೆ ಸಂವಿಧಾನರಚನೆ ಮಾಡಲು ಅವಕಾಶ ದೊರೆಯಿತು. ಆ ಸಂದರ್ಭದಲ್ಲಿ ಈ ದೇಶದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಪಟ್ಟ ನಮ್ಮ ಜನರ ಜೀವನವನ್ನು ಮನದಲ್ಲಿಟ್ಟುಕೊಂಡು ಸಂವಿಧಾನ ರಚನೆ ಮಾಡುವಾಗ ಶೋಷಿತ ಜನರ ಕಲ್ಯಾಣ ಅಭಿವೃದ್ಧಿಗಾಗಿ ದೇಶದ ಪ್ರತಿಯೊಂದು ಯೋಜನೆಯಲ್ಲಿ ಶೇಕಡ 22% ಮೀಸಲಿಡಬೇಕೆಂದು ಸಂವಿಧಾನದಲ್ಲಿ ಜಾರಿ ಮಾಡಿ ಅಂಕಿ ಅಂಶಗಳ ಅನುಗುಣವಾಗಿ ಪ್ರತಿಯೊಂದು ಉದ್ಯಮಗಳಿಂದ ಶೇಕಡ ಮೊತ್ತವನ್ನು ನೀಡಲು ಸ್ಪಷ್ಟವಾಗಿ ತಿಳಿಸಿದ್ದಾರೆ ಕಾರಣ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬಹುಜನರು ಇವರೆ ಆದ್ದರಿಂದ ಈ ಜನರಿಗೆ ಯಾವುದೇ ಯೋಜನೆಗಳು ತಲುಪುವ ಕೆಲಸವಾಗಬೇಕಾಗಿತ್ತು. ಇಷ್ಟೆಲ್ಲ ದುಡಿದುಕೊಂಡು ಬರುವ ಪರಿಶಿಷ್ಟ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಮನುವಾದಿ ಅಧಿಕಾರಿ ಕುತಂತ್ರಗಳಿಂದ ದೊರಕಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಆಡಳಿತ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 2023ನೇ ಸಾಲಿನಲ್ಲಿ ನಡೆದ ಚುನಾವಣೆ ಪ್ರಣಾಳಿಕೆಯಲ್ಲಿ ಐದು ಉಚಿತ ಗ್ಯಾರಂಟಿಗಳ ಭರವಸೆ ನೀಡಿತನಗೆ ಹತ್ತೊಂಬತ್ತು ಬಜೆಟ್ ಗಳನ್ನು ಮಂಡಿಸಿದ ಅನುಭವ ಇದೆ ಆದ್ದರಿಂದ ಯೋಜನೆಗೆ ಬೇಕಾದ ಹಣದ ಸಂಪನ್ಮೂಲಗಳನ್ನು ಒದಗಿಸಲು ಬಲ್ಲ ಮೂಲಗಳಗಳಿಂದ ಸಾಧ್ಯ ಮತ್ತು ನುಡಿದಂತೆ ನಡೆಯುತ್ತೇವೆ ಎಂಬುವುದಾಗಿ ಹೇಳುತ್ತಾ ಪರಿಶಿಷ್ಟ ಜನಾಂಗದವರಿಗೆ ಸಾಂವಿಧಾನಿಕವಾಗಿ ಮೀಸಲಿಟ್ಟ SCSP/TSP ನಿಧಿಯಿಂದ ಇಪ್ಪತ್ತಾರು ಸಾವಿರಕೋಟಿ ಹಣವನ್ನು ಸರ್ವಜನಾಂಗದ ಪಲಾನಿಭವಿಗಳಿರುವ ಐದು ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹಜೋತಿ, ಅನ್ನಭಾಗ್ಯ, ಯುವನಿಧಿ, ಶಕ್ತಿಯೋಜನೆಗಳಿಗೆ ದುರ್ಭಳಕೆ ಮಾಡಿಕೊಂಡು ವಂಚಿಸಿದ್ದಾರೆ ಆದ್ದರಿಂದ ಹಿಂದಒಕ್ಕೂಟ ಮತ್ತುಕೆಲ ದಲಿತ ಸಂಘಟನೆಗಳು ಅನ್ಯಾಯದ ವಿರುದ್ಧ ಕಾಂಗ್ರೆಸ್ ಹಠಾವೊ ದಲಿತ್ ಬಚಾವೊ ಸಿದ್ದರಾಮಯ್ಯ ಹಠಾವೊ ದಲಿತ್ ಬಚಾವೊ, ಎಂಬ ಪ್ರತಿಭಟನೆಯನ್ನು ಹಮ್ಮಿಕೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದರೆ ಭಾರತದ ಕಟ್ಟಕಡೆಯ ಪ್ರಜೆಯು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿರುವುದರಿಂದ ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ತಿದುಕೊಳ್ಳಬೇಕೆಂಬ ಒತ್ತಾಯಯೊಂದಿಗೆ.
ಕಾಂಗ್ರೆಸ್ ಮುಖ್ಯಮಂತ್ರಿಸಿದ್ದರಾಮಯ್ಯ ಸರ್ಕಾರ ಹೋಗಿ ಮುಂದಿನ ಯಾವ ಸರ್ಕಾರ ಬಂದರು ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ? ಕಳೆದ ಬಿಜೆಪಿ ಬೊಮ್ಮಾಯಿ ಸರ್ಕಾರವು ಹತ್ತೊಂಬತ್ತು ಸಾವಿರ ಕೋಟಿ SCSP/TSP ಹಣವನ್ನು ರುಪಯೋಗಪಡಿಸಿಕೊಂಡಿದ್ದರಿಂದ ದಲಿತ ಸಮುದಾಯಗಳಿಗೆ ಈ ಪಕ್ಷಗಳಿಂದ ಸತತವಾಗಿ ಅನ್ಯಾಯವಾಗುತ್ತಿರುವುದು ಆದರೆ ಯಾವುದೇ ಸರ್ಕಾರವು ತನ್ನ ವೈಯುಕ್ತಿಕ ಲಾಭಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಸ್ವಾತಂತ್ರ್ಯ ಬಂದು 78 ವರ್ಷಗಳು ಆದರು
ಜನತೆಯ ಜೀವನ ಮಟ್ಟ ಸುಧಾರಿಸಿಲ್ಲ ಮತ್ತು ಅಹಿಂದ ಪರ ಎಂದು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ಕೂಡಲೇ ತೆಗೆದ ಹಣವನ್ನು ಮರುತುಂಬಿಸುವ ಕೆಲಸ ಮಾಡಿ ಸರಿಪಡಿಸಬೇಕೆಂದು ಒತ್ತಾಯಿಸಿ. ದಿನಾಂಕ:20-09-2024ರಂದು 11 ಗಂಟೆಗೆ ಬಹುಜನ ಮಹಾಸಭಾ ಮತ್ತು ಡಾ|ಬಿ.ಆರ್.ಅಂಬೇಡ್ಕರ್ ಚಿಂತಕರ ಒಕ್ಕೂಟ, ಸಮಾನ ಮನಸ್ಕ ಸಂಘಟನೆಗಳೊಂದಿಗೆ ಪ್ರತಿಭಟನೆ ಹೋರಾಟವನ್ನು ಹಮ್ಮಿಕೊಂಡಿದ್ದು, ನಾವು ಗಮನಿಸಿದಂತೆ ವಕ್ಸ್ ರ್ಬೋಗೆ ಸೇರಿದ ಆಸ್ತಿಗಳನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಮುದಾಯಾದ ವಿರುದ್ಧ ಆದ ಅನ್ಯಾಯಕ್ಕೆ ಕಾನೂನು ಹೋರಾಟಕ್ಕಾಗಿ (8) ಎಂಟು ಲಕ್ಷ ಅರ್ಜಿಗಳನ್ನು ಹಾಕಿದ್ದಾರೆ. ಅದೇರೀತಿಯಾಗಿ ವಿರೋದ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಸರ್ಕಾರಕ್ಕೆ ನಿಮಗೆ ತಾಕತ್ತಿದ್ದರೆ ನಮ್ಮ ಒಕ್ಕಲಿಗ ನಿಗಮದ ಹಣವನ್ನು ಮುಟ್ಟಿ ನೋಡೊಣ ಎಂಬುವುದಾಗಿ ಚಾಲೆಂಜ್ ಮಾಡುತ್ತಾರೆ. ಆದರೆ ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ರವರ ಶ್ರೀರಕ್ಷೆ ಇರುವನಮ್ಮ ಸಮುದಾಯ, ಸಾವಿರಾರು ಸಂಘಟನೆಗಳು ಯಾವುದೇ ರೀತಿಯ ಪ್ರತಿರೋಧವನ್ನು ತೋರಿಸದೆ ಸುಮ್ಮನೆ ಇರಲು ಹೇಗೆ ತಾನೆ ಸಾಧ್ಯ ಈ ಅನ್ಯಾಯಕ್ಕೆ ಒಳಗಾದ ಎಲ್ಲಾ ಸಮುದಾಯಗಳು ನಮ್ಮೊಂದಿಗೆಕೈ ಜೋಡಿಸಿ ಬೆಂಬಲಿಸಲು ಬನ್ನಿ ಬಂಧುಗಳೇ ನಾವೆಲ್ಲಒಂದಾಗೋಣ ಹೋರಾಟಕ್ಕೆ ಮುಂದೊಗೋಣ
ಹಣಕಾಸು ಸಚಿವರಿಗೆ, SCSP/TSPನಿಧಿಯಿಂದ ದುರ್ಭಳಿಕೆಯಾದ ಹಣದ ಮೊತ್ತ ಇಪ್ರಾತಾರು ಸಾವಿರಕೋಟಿ ಮೊತ್ತವನ್ನು ಮರು ತುಂಬಿಸುವಂತೆ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಲ್ಲಿ ಇತರೇ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಉಪಯೋಗಿಸದಂತೆ ಒತ್ತಾಯಿಸುಯತ್ತೇವೆ.
2. ಶಿಕ್ಷಣ ಸಚಿವರಿಗೆ, RTE ಕಾಯ್ದೆಯ ಮೂಲಕ ಪ್ರತಿಷ್ಠಿತ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗಿದ್ದ ಅವಕಾಶವನ್ನು ಒಂದು ಕಿಲೋ ಮೀಟರ್ ಪರಿದಿಯಲ್ಲಿ ಸರ್ಕಾರಿ ಶಾಲೆಗಳಿದ್ದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯನ್ನು ನಿರಾಕರಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಅವಧಿಯ ಸರ್ಕಾರದ ಆದೇಶವನ್ನು ರದ್ದು ಪಡಿಸುವಂತೆ ಮತ್ತು ಮೂಲ ಕಾಯ್ದೆಯ ಅನುಷ್ಠಾನದಂತೆ 10ನೇ ತರಗತಿವರೆಗೂ ವಿಸ್ತರಿಸುವಂತೆ ಒತ್ತಾಯ ಮತ್ತು ವಿದ್ಯಾರ್ಥಿ ದಾಖಲಾತಿಗಳಲ್ಲಿ ಹಾಗೂ ಸಿಬಂದ್ದಿ ನೇಮಕಾತಿಗಳಲ್ಲಿ ರೋಸ್ಟರ್ ಪದ್ಧತಿ ಕಡ್ಡಾಯ ಜಾರಿಗಾಗಿ ಒತ್ತಾಯ.
3. ಕಂದಾಯ ಸಚಿವರಿಗೆ, ಆದಾಯ ಪ್ರಮಾಣ ಪತ್ರವು ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಪಡೆಯುವುದು ಸ್ವಾಭಾವಿಕ ಆದರೆ ಇತ್ತೀಚಿನ ದಿನಗಳಲ್ಲಿ ಒಂದೇ ಕುಟುಂಬದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿದ್ದರೆ ಸಹಾ ಪ್ರತಿಯೊಬ್ಬರಿಗೂ ಪ್ರತ್ಯೇಕ ಆದಾಯ ಪ್ರಮಾಣ ಪತ್ರವು ಕಡ್ಡಾಯಗೊಳಿಸಿರುತ್ತಾರೆ. ಆದರೆ ಆಧಾರ್ ಕಾರ್ಡ್ ನಲ್ಲಿ ಮತ್ತು ಶಾಲೆಯ ದಾಖಲೆಗಳಲ್ಲಿ ಪೋಷಕರ ಹೆಸರನ್ನು ನಮೂದಿಸಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಆದಾಯ ಪ್ರಮಾಣ ಪತ್ರ ಕೆಳುವುದು ಯಾವ ನ್ಯಾಯ ಮತ್ತು ಬಿಪಿಎಲ್ ಪಡಿತರಚೀಟಿ ಹೊಂದಿರುವ ಫಲಾನುಭವಿ ಕುಟುಂಬದ ಸದಸ್ಯರು ಈ ಆಧಾರದ ಮೇಲೆ ಆದಾಯ ಪ್ರಮಾಣ ಪತ್ರಕ್ಕೆ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಲಕ್ಷಗಳಲ್ಲಿ ಆದಾಯ ಪ್ರಮಾಣ ಪತ್ರ ನೀಡುತ್ತಾರೆ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಇಪ್ಪತ್ತು ಮೂವತ್ತು ವರ್ಷಗಳ ಬಣ್ಣದ ವರ್ಗಾವಣೆ ಪತ್ರವನ್ನು ಕೇಳುತ್ತಾರೆ ಇದು ಸಾದ್ಯವೇ? ಆದರೆ ದಲ್ಲಾಳಿಗಳ ಮೂಲಕ ಸದರಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದಾಗ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ನಿಗಧಿತ ಅವಧಿಗೆ ಮುಂಚೆ ಒಂದು ವಾರದಲ್ಲಿ ಕಡಿಮೆ ಮೊತ್ತದಆದಾಯ ಪ್ರಮಾಣ ಪತ್ರ ಮತ್ತುಜಾತಿ ಪ್ರಮಾಣ ಪತ್ರ ನೀಡುತ್ತಾರೆ ಈ ಬ್ರಷ್ಟಚಾರ ತಡೆಯುವಂತೆ ಒತ್ತಾಯ.
4. ಸಮಾಜ ಕಲ್ಯಾಣ ಸಚಿವರಿಗೆ, ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸದೃಡ ಮತ್ತು ನವೀಕರಣ ಮಾಡುವಂತೆ ಮತ್ತು ಮೆರಿಟ್ ವಿದ್ಯಾರ್ಥಿಗಳಿಗೆ ಬಹುಮಾನದೆ ಮೊತ್ತ, ಇತರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಉನ್ನತ ವ್ಯಾಸಾಂಗಕ್ಕಾಗಿ ಅಧ್ಯಯನ ವೇತನ, ಮತ್ತು ಪ್ರಬುದ್ಧ ಯೋಜನೆಗಳನ್ನು ಸರಿಯಾದರೀತಿಯಲ್ಲಿ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಒತ್ತಾಯಿಸಿ.
5. ನಗರಾಭಿವೃದ್ಧಿ ಸಚಿವರಿಗೆ, ಸರ್ಕಾರದಿಂದ ಪರಿಶಿಷ್ಟ ಜನಾಂಗಕ್ಕೆ ನೀಡಿದ್ದ ಉಚಿತ ನಿವೇಶನಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇರುವುದನ್ನು ಕಂಡು ಅನೇಕ ಬಲಾಡ್ಯ ಭೂಗಳ್ಳರು ವಾಸವಿದ್ದ ಮನೆಗಳನ್ನು ಆಮಿಷ ಮತ್ತು ಜೀವ ಬೆದರಿಕೆಗಳಿಂದ ಪಟುಂಬಗಳನ್ನು ಓಡಿಸಿ ಸ್ವಾಧೀನಪಡಿಸಿಕೊಂಡು ಅನ್ಯಾಯ ಮಾಡಿರುತ್ತಾರೆ. ಆದ್ದರಿಂದ ಸದರಿ ನಿವೇಶಗಳನ್ನು PTCL ಕಾಯ್ದೆ ವ್ಯಾಪ್ತಿಗೆ ತರುವಂತೆ
ಕಾನೂನು ಸಂಸದೀಯ ವ್ಯವಹಾರಗಳ ಸಚಿವರಿಗೆ ಮೊದಲೆಲ್ಲ ಸರ್ಕಾು ಸವಲತೆಗಳು ಸಂಬಂಧಿಸಚಿವರಿಗೆಖೆ ಅಧಿಕಾರಿಗಳ ಮೂಲಕ ಜನರಿಗೆಂತಲುಪುದೆ ಆದರೆ ಯಡಿಯೂರಪ್ಪ ನವರು ಮುಖ್ಯಂತ್ರಿಗಳಾದಿಸಿದ್ದ ಇಲಾಖೆವರದಿ ಜಾರಿಗೆ ಸರ್ಕಾರಿ ಪ್ರವಾಹುವುಗಳನರಿಗೆ ತಲುಪಬೇಕಾಗಿದ್ದರೆ ಸಂತರ ಪ್ರತಿನಿಧಿಗಳ ಶಿಪಾರಸ್ಸು ಅವಶ್ಯ ಎಂದ ನಂತರ ನಿಜವಾದ ಕಲಾನುಭವಿಗಳಿಗೆ ತಲುಪದೆ ರಾಜಕಾರಣಿ ಸ್ಥಳಿಯ ಪರರ ಪಾಲಾಗುತ್ತದೆ. ಆದ ಕಾರಣ ಪಕ್ಷದ ಕಾರ್ಯಕರ್ತರಿಗೆ ವೈಚಲಯ ಆದ್ಯತೆ ಎಂಬುವುದಾಗಿ ತಿಳಿದು ತಾನು ಒಲ್ಮಾನರ ಪ್ರತಿನಿಧಿ ಎಂಬುವುದನ್ನು ಮರೆಯುತ್ತಾರೆ ಆದ್ದರಿಂದ ಈ ವ್ಯವಸ್ತೆಯನ್ನು ಒತ್ತಾಯ,
8 ಗೃಹ ಸಚಿವರಿಗೆ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ 1989 ಜಾರಿ ಸಮಿತಿ ಮತ್ತು ಪೊಲೀಸ್ ಇಲಾಖೆಯವರು ನಡೆಸುವಂತ ದಲಿತರ ಕುಂದು ಕೊರತೆ ಸಭೆಗಳು ನಾಮಕವಸ್ಥೆಯಲ್ಲಿ ನಡೆಯುತ್ತಿದ್ದು ಸಭೆಯ ನಡಾವಳಿಗಳು ಮತ್ತು ಅಖೈರುಗೊಳಿಸಿದ ವಿಷಯಗಳು ಮತ್ತು ದೂರು ದಾಖಲಿತ ಸಂಬನಂ ಇಲಾಖೆಗಳ ಪತ್ರ ವ್ಯವಹಾರಗಳ ದಾಖಲೆಗಳನ್ನು ಸಭೆಗಳಲ್ಲಿ ಮಂಡಿಸದೆ ಅನ್ಯಾಯ ಮಾಡುತ್ತಿದ್ದು ಕೆಲವು ಪ್ರದೀಶಗಳ ಸ್ಥಳೀಯ ಠಾಣೆಗಳಲ್ಲಿ ಮೇಲ್ವರ್ಗದ ಜನಗಳ ಪರೋಕ್ಷ ಒತ್ತಡಗಳಿಂದ ನಡೆಯುತ್ತಿದೆ ಇದರಿಂದ ವಲಕರಿಗೆ ಅನ್ಯಾಯ ಹಾಗೂ ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಮಾದಕ ಪದಾರ್ಥಗಳು ದೊರಕುತ್ತಿದ್ದು ವ್ಯಸನಗಳಿಗೆ ದಾಸರಾದಂತಹ ಯುವ ಸಮೂಹ ಸಮಾಜಘಾತುಕ ಪಾಣಿ ಬೆದರಿಕೆ. ಬೆದರಿಕೆ, ಲೈಂಗಿಕ ದೌರ್ಜನದಂತಹ ಅಪರಾಧಗಳಲ್ಲಿ ಬಾಗಿಯಾಗುತ್ತಿದ್ದು ಪೊಲೀಸ್ ಇಲಾಖೆಯು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸೂಕ್ತ ಕ್ರಮಕ್ಕೆ ఒత్తాయి. ಕೃತ್ಯಗಳಾದಕಳ್ಳತನ ಸುಲಿಗೆ,
8. ಕಾರ್ಮಿಕ ಸಚಿವರಿಗೆ, ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ನಿಧಿಗಾಗಿ ಸಂಗ್ರಹಿಸಿದ ಸೆಸ್ ಹಣವು ಸಾವಿರಾರು ಕೋಟಿಗಳಷ್ಟು ಇದೆ. ಈ ನಿಧಿಗಳಿಂದ ಸದರಿ ಪಲಾನುಭವಿಗಳಿಗೆ ಅನೇಕ ರೀತಿಯ ಸೌಲತ್ತುಗಳು ದೊರೆಯುತ್ತಿದ್ದು ಸರಿಯಷ್ಟೆ ಮತ್ತು ಇದೇನಿಧಿಯಲ್ಲಿ ಪಲಾನುಭವಿ ಕುಟುಂಬಗಳ ವಿದ್ಯಾರ್ಥಿಗಳಿಗೆ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಇತ್ತೀಚಿಗೆ ಸಮಾಜ ಕಲ್ಯಾಣ ಇಲಾಖೆಗಳಿಂದ ಬರುವ ವಿದ್ಯಾರ್ಥಿ ವೇತನೆಗಳೊಂದಿಗೆ ವಿಲಿನಗೊಳಿಸಿದೆ ಆದ್ದರಿಂದಒಂದೇ ವಿದ್ಯಾರ್ಥಿ ವೇತನ ಎಂಬುವುದಾಗಿ ಹೇಳುತ್ತಾರೆ ಆದರೆ ಕಾರ್ಮಿಕ ಶ್ರಮದ ಫಲವಾಗಿ ಬಿಲ್ಕರ್ಗಳ ಬಳಿ ಸಂಗ್ರಹಿಸುವ ಸೆಸ್ನ ಕಲ್ಯಾಣ ಮಂಡಳಿಯ ನಿಧಿಯೆ ಬೇರೆ ಮತ್ತುಕೇಂದ್ರ, ರಾಜ್ಯ ಸರ್ಕಾರಗಳ ಅನುಧಾನಿತ ನಿಧಿಯೆ ಬೇರೆ ಆದ್ದರಿಂದ ಎರಡು ವಿದ್ಯಾರ್ಥಿ ವೇತನಗಳನ್ನು ಪ್ರತ್ಯೇಕವಾಗಿ ನೀಡಬೇಕಾಗಿಮತ್ತು ಲೇಬರ್ ಕಾರ್ಡ್ ನೀಡುವಲ್ಲಿಆಗಿರುವ ಅವ್ಯವಹಾರವನ್ನು ಸರಿಪಡಿಸಲುಒತ್ತಾಯ
9. ಕುಟುಂಬ ಕಲ್ಯಾಣ ಆರೋಗ್ಯ ಸಚಿವರಿಗೆ, ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಪ್ರಾಪ್ತ ಗರ್ಬಿಣಿಯರಿಗೆ ಬ್ರೂಣ ಹತ್ಯೆ ಮತ್ತು ಹೆರಿಗೆಗಳು ನಡೆಯುತ್ತಿದ್ದು ಈ ವಿಷಯವಾಗಿ ಕಠಿಣ ಕಾನೂನುಗಳಿದ್ದರು ಹೇಗೆ ನಡೆಯಲು ಸಾದ್ಯ ಆಧಾರ್ ಕಾರ್ಡ್ನಲ್ಲಿ ವಯಸ್ಸು ನಮೂದಿಸಿದರು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಮರೆಮಾಚಿ ಈ ಹೀನ ಕೆಲಸದಲ್ಲಿ ತೊಡಗಿದ್ದಾರೆ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಣದ ಆಮೀಷಕ್ಕೆ ಒಳಗಾಗುತ್ತಾರೆ ಮತ್ತು ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ CT & MRI SCANNING ಯಂತ್ರಗಳು ಲಭ್ಯವಿದ್ದು ಕಾಲಮಿತಿ ಅವಧಿಗೆ ನಮ್ಮ ಸಂಖ್ಯೆಗೆ ಅನುಗುಣವಾಗಿ ಬನ್ನಿ ತಕ್ಷಣವೆ ಬೇಕಾಗಿದ್ದಲ್ಲಿ ಹೊರಗಡೆ ಮಾಡಿಸಿಕೊಂಡು ಬನ್ನಿ ಎಂಬುವುದಾಗಿ ಕೆಲವು ಆಸ್ಪತ್ರೆಗಳಲ್ಲಿ ಇವರೇ ಯಂತ್ರಗಳಲ್ಲಿ ತಾಂತ್ರೀಕ ದೊಷ ಉಂಟಾಗುವಂತೆ ಮಾಡುತ್ತಾರೆ ಇದರಿಂದ ರೋಗಿಗಳಿಗೆ ರೋಗ ನಿರ್ದಾರಕ ಚಿಕತ್ಸೆಗೆ ತೊಂದರೆಯಾಗುತ್ತಿದೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮನ್ಯ ಕಾಯಿಲೆ ಥೈರಾಯಿಡ್ ರಕ್ತ ಪರೀಕ್ಷೆ ಮಾಡುವುದಿಲ್ಲ ಔಷಧಿಗಳು ನಮ್ಮಲ್ಲಿ ಇಲ್ಲ ಎಂಬುವುದಾಗಿ ಹೇಳುತ್ತಾರೆ. ಆಸ್ಪತ್ರೆಯ ಶೌಚಾಲಯಗಳನ್ನು ಉಪಯೋಗಿಸದ್ದಲ್ಲಿ ಅಲ್ಲಿಂದಲೆ ಅನೇಕ ಸಾಂಕ್ರಾಮಿಕ ರೋಗಗಳು ಬರುವಂತಹ ಅಸ್ವಚ್ಛತೆಯ ಕಾರ್ಖಾನೆಯಾಗಿದೆ. ಇನ್ನು ವಾಹನಗಳ ಪಾರ್ಕಿಂಗ್ ವಿಷಯದಲ್ಲಿ ನೋಡುವುದಾದರೆ ಹೊರ ರೋಗಿಗಳ ಚಿಕಿತ್ಸೆ ಚೀಟಿಗಾಗಿ ಐದುರೂಪಾಯಿ ಇರುವಾಗ ಪಾರ್ಕಿಂಗ್ ಶುಲ್ಕದ ಸ್ಟ್ಯಾಬ್ ಗಂಟೆಗಳ ಆಧಾರದಲ್ಲಿ ಸ್ಪೀಡೋಮೀಟರ್ ರೀತಿಯಲ್ಲಿ ದಿನ ಒಂದಕ್ಕೆ ನೂರಾರು ರೂಪಾಯಿಗಳು ಆಗುತ್ತದೆ ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಸರಿಪಡಿಸಲು ಒತ್ತಾಯ.
10.ವಸತಿ ಸಚಿವರಿಗೆ,ಕರ್ನಾಟಕ ಗೃಹ ಮಂಡಳಿಗೆ ಸೇರಿದ ಅನೇಕವಸತಿಬಹು ಮಹಡಿ ಕಟ್ಟಡಗಳು ಅವಧಿ ಮೀರಿ ಶಿಥಿಲಾವಸ್ಥೆಗೊಂಡಿದೆ ಇದನ್ನು ಸದೃಢಗೊಳಿಸಡಲು ಮತ್ತು ತಾತ್ಕಲಿಕ ಸ್ಥಳಾಂತರಿಸಲು ಹೊಸ ಕಟ್ಟಡಗಳನ್ನು ನಿರ್ಮಿಸಲು ನಮ್ಮ ಸಂಘಟನೆ ಮೂಲಕ ಅನೇಕ ಬಾರಿ ಮನವಿ ಸಲ್ಲಿಸಿದ್ದು. ಇದನ್ನು ಪರಿಗಣಿಸಿ ಕಟ್ಟಡವನ್ನು ಸದೃಡಗೊಳಿಸಲು ಕಾಮನರ ಸಂಘ ಹಣೆ ಮಂಜೂರಾಗಿದ್ದು ಸರಿಯಷ್ಟೇ ಸ್ಥಳೀಯ ಜನಪ್ರತಿನಿಧಿಗಳ ಬೇನಾಮಿ ಗುತ್ತಿಗೆದಾರರ ಹಣ ಪಡಿಾಮಗಾರಿಗೆ ಳನ್ನು ಗಾಲ ನಡೆಸಿದ್ದಾರೆ. ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇದುವವರೆಗೆು ಹಕ್ಕು ಪತ್ರಗಳ ನಡೆದುಕುವ ಕಾಮು ಕೊಳಚೆ ನಿರ್ಮೂಲನ ಮಂಡಳಿಗೆ ಸೇರಿದ ಸಮುದಾಯ ಭವನಗಳು ದೇವಸ್ಥನ ಮತ್ತು ನೀಡಿರುವುದಿಲ್ಲ ಗಳಾಗಿ ಮಾರ್ಪಟ್ಟಿದ್ದು,
ಬಹಳಷ್ಟು ಕಡೆ ಒಬ್ಬ ವ್ಯಕ್ತಿಯ ಆಧೀನದಲ್ಲಿದೆ ಇವುಗಳನ್ನು ಹಿಂಪಡೆದು ಸಾರ್ವಜನಿಕ ಉಪಯೋಗಗಳಿಗೆ ನೀಡುವಂತೆ. ಉದಾಹರಣೆ ಚಿಕ್ಕಪೇಟೆ ವಿಧಾನಸಭಾಕ್ಷೇತ್ರದ ಬಿಬಿಎಂಪಿ ವಾರ್ಡ್ ನಂ.153 ತಿಲಕ್ ನಗರ BTB ಏರಿಯ ಗೃಹ ಮಂಡಳಿ ವಸತಿ ಸಂಕೀರ್ಣದ ಮನೆಗಳನ್ನು ಸದೃಡಗೊಳಿಸಲು ಕೋಟ್ಯಾಂತರ ಹಣವನ್ನು ಮಂಜೂರು ಮಾಡಿಸಿಕೊಂಡು ದುರುಪಯೋಗಪಡಿಸಿಕೊಂಡಿರುವ ಗುತ್ತಿಗೆದಾರರು ಮತ್ತು ಶಾಮೀಲಾಗಿರುವ ಬಿಬಿಎಂಪಿ ಇಂಜನೀಯರಿಂಗ್ ವಿಭಾಗದ ಅಧಿಕಾರಿಗಳ ದೂರು ನೀಡಲಾಗಿದ್ದು ಇದುವರೆಗೂ ಯಾವದೇ ಕ್ರಮವನ್ನು ಕೈಗೊಂಡಿರುವುದಿಲ್ಲ, ಇವರ ವಿರುದ್ಧ ಸೂಕ್ತ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಒತ್ತಾಯ.
11. ಮುಖ್ಯಮಂತ್ರಿಗಳಿಗೆ,ನಿವೃತ್ತ ನ್ಯಾಯಮುರ್ತಿ ಮಾನ್ಯ ಕಾಂತ್ ರಾಜು ಸಮಿತಿ ನಡೆಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಜಾತಿ ಸಮೀಕ್ಷೆ ವರದಿಯನ್ನು ಸಚಿವ ಸಂಪುಟ ಮೇಲ್ವರ್ಗದ ಸಹದ್ಯೋಗಿಗಳ ಒತಡಕ್ಕೆ ಮಣಿದು ತಡೆಯಿಡಿದಿರುವುದನ್ನು ಕೂಡಲೇ ಬಿಡುಗಡೆ ಮಾಡಿ ಸಾಮಾಜಿಕ ನ್ಯಾಯಕ್ಕಾಗಿಯತವತ್ತಾಗಿ ವರದಿಯನ್ನು ಅನುಷ್ಠಾನಗೊಳಿಸಿ ಜಾರಿ ಮಾಡಲು ಒತ್ತಾಯ. ಖಾಸಗಿ ವಲಯದಲ್ಲಿ ಮೀಸಲಾತಿ ನೇತಿಯ ರಾಜ್ಯ ಸಂಪುಟ ಸಭೆಯ ನಿರ್ಣಯವನ್ನು ಅನುಷ್ಠಾನಗೊಳಿಸದೆ ಬಂಡವಾಳ ಒತ್ತಡಕ್ಕೆ ಮಣಿದು ತಡೆಯಿಡಿರುವುದನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯ.”
12. ನಗರಾಭಿವೃದ್ಧಿ ಸಚಿವರಿಗೆ, ರಾಜಕಾಲುವೆಯ ಒತ್ತುವರಿಗಳನ್ನು ತೆರವುಗೊಳಿಸಿ ಜನರಿಗೆ ಮಳೆಯಿಂದ ಆಗುವ ವಿವಿಧರೀತಿಯ ಅನಾವುತಗಳನ್ನು ತಪ್ಪಿಸುವುಂತೆ ಮತ್ತು ಶ್ರೀಮಂತರು ಹಾಗೂ ಅವರ ಸಂಸ್ಥೆಗಳಿಂದ ಆದರಾಜಕಲುವೆ ಒತ್ತುವರಿಗಳನ್ನು ತೆರವುಗೊಳಿಸಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ, ಉದಾಹರಣೆ GM SOFTWARE ಕಂಪನಿ ಕೆನರಾ ಬ್ಯಾಂಕ್ ಅಪಾರ್ಟಮೆಂಟ್ BES ವಿದ್ಯಾಸಂಸ್ಥೆಯ ಕ್ಯಾಂಪಸ್ ಇನ್ನು ಮುಂತಾದವು
ಬಿಬಿಎಂಪಿ ವೈದ್ಯಕೀಯ ಸಹಾಯ ನಿಧಿ ಕೋರಿಕೆಅರ್ಜಿಗಳು 2020 ರಿಂದಇದುವರೆಗೂ 2024 ಎಲೆ ಇರುವುದರಿಂದ ಸಂತ್ರಸ್ಥ ಫಲಾನುಭವಿಗಳಿಗೆ ತೊಂದರೆಯಾಗಿದ್ದು ಕೂಡಲೇ ಬಿಬಿಎಂಪಿ ಮುಖ್ಯ ಆಯುಕ್ತರು ಮಂಜೂರು ಮಾಡುವಂತೆ ಇತ್ತಾಯ.
ಪರಿಶಿಷ್ಟ ಜಾತಿ ವರ್ಗ ಹಿಂದುಳಿದ ಅಲ್ಪಸಂಖ್ಯಾತರ ಒಂಟಿ ಮನೆ ನಿಧಿಯ 5 ಲಕ್ಷ ಮೊತ್ತವನ್ನು ಕೂಡಲೇ ಮಂಜೂರು ಮಾಡಿ ಕಾರ್ಯ ಆದೇಶ ಪತ್ರ ನೀಡುವಂತೆ ಒತ್ತಾಯ. ಪ್ರತಿಭಟನೆಯಲ್ಲಿ ಬಹುಜನ ಮಹಾಸಭಾ ರಾಜ್ಯಾಧ್ಯಕ್ಷ ಆರ್ ಶೇಖರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕರ್ತರು ಸಾರ್ವಜನಿಕರು ಬಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ