ಬೆಂಗಳೂರು: ವಿಧಾನಸೌಧದ ಅವರಣದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಒಂದು ರಸ್ತೆಗುಂಡಿ ಮುಚ್ಚಲು ಯೋಗ್ಯತೆಯಿಲ್ಲದ ಸರ್ಕಾರ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶಗಳನ್ನು ಮಾಡಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಜರಿದರು.
ಈ ಸರ್ಕಾರದ ಸಾಧನೆ ಏನೂ ಇಲ್ಲ, ದೊಡ್ಡ ಸೊನ್ನೆ, ಆಡಳಿತವನ್ನು ಯಾವುದೇ ಸರ್ಕಾರ ನಡೆಸುತ್ತಿರಲಿ, ಅದು ರಾಜ್ಯ ಬೊಕ್ಕಸಕ್ಕೆ ಟ್ರಸ್ಟಿಯೇ ಹೊರತು ಮಾಲೀಕನಲ್ಲ, ಕಾಂಗ್ರೆಸ್ ಸರ್ಕಾರ ಬೇಕಾದರೆ ತನ್ನ ಪಕ್ಷದ ಕಚೇರಿಯಿಂದ ಸಾಧನಾ ಸಮಾವೇಶಗಳನ್ನು ಮಾಡಿಕೊಳ್ಳಲಿ, ಯಾರು ಬೇಡವೆನ್ನುತ್ತಾರೆ? ಆದರೆ ಜನರ ಹಣದಲ್ಲಿ ಮೆರೆಯೋದು ಖಂಡನೀಯ ಎಂದು ಸಿಟಿ ರವಿ ಹೇಳಿದರು.
For More Updates Join our WhatsApp Group :