ಬೆಂಗಳೂರು : ಪಿಎಸ್ಐ ಪರೀಕ್ಷೆ ಮತ್ತೆ ಮುಂದೂಡಿಕೆ ವಿಚಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 28 ರಂದು ಯುಪಿಎಸ್ಸಿ ಮತ್ತೊಂದು ಪರೀಕ್ಷೆ ಇದೆ ಹೀಗಾಗಿ ಅಕ್ಟೋಬರ್ 3 ಕ್ಕೆ ಪರೀಕ್ಷೆಯನ್ನ ಮುಂದೂಡಲಾಗಿದೆ. ಕೆಇಎ ಯವರು ದಿನಾಂಕವನ್ನ ನಿಗಧಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತ್ತಿಕುವ ಕೆಲಸ ಮಾಡಿದ್ದೇವೆ. ತುಂಬಾ ಸೀಜ್ ಮಾಡಿ ಒಂದು ಹತೋಟಿಗೆ ತಂದಿದ್ದೇವೆ. ನಮಗೆ ಆತಂಕ ಇರೋದು ಮೆಡಿಕಲ್ಗಳ ಮೇಲೆ. ಕೆಲವು ಮೆಡಿಕಲ್ಗಳಲ್ಲಿ ಸಿಂಥೆಟಿಕ್ ಡ್ರಗ್ ಮಾರಾಟ ಮಾಡಲಾಗುತ್ತೆ ಅದರ ನಿಯಂತ್ರಣದ ಬಗ್ಗೆ ಇಂದು ಸಿಎಂ ಸಭೆ ಕರೆದಿದ್ದಾರೆ. ಅದನ್ನು ಕೂಡ ಯಾವ ರೀತಿ ರೆಗ್ಯೂಲೇಟ್ ಮಾಡಬೇಕು ಅಂತ ಚಿಂತನೆ ನಡೆಸಿದ್ದೇವೆ. ಕಾನೂನು ಬೇರೆ ಮಾಡಬೇಕಾಗುತ್ತದೆ, ಮೆಡಿಸಿನ್ ಬಗ್ಗೆ ಇರೋದ್ರಿಂದ ಚಿಂತನೆ ಆಗಬೇಕು ಗಾಂಜಾ,ಡ್ರಗ್ ಕಂಟ್ರೋಲ್ ಮಾಡಿದ್ದೇವೆ ಎಂದು ಹೇಳಿದರು.
ಪಾಲೆಸ್ತಿನ್ ಧ್ವಜ ಹಾರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಮೂರು ಜಿಲ್ಲೆಯಲ್ಲಿ ಬಂಧನ ಮಾಡಿದ್ದೇವೆ. ಯಾರು ಪ್ರಚೋಧನೆ ನೀಡಿದ್ರು ಅನ್ನೋದು ತನಿಖೆ ಮಾಡ್ತೇವೆ. ಚಿಕ್ಕ ಚಿಕ್ಕ ಮಕ್ಕಳಿಗೆ ಯಾರು ಪ್ರಚೋಧನೆ ಮಾಡಿದ್ದಾರೆ. ಅನ್ನೋದು ತನಿಖೆ ಮಾಡ್ತೇವೆ ಎಂದರು.
ನಾಗಮಂಗಲ ಗಲಭೆಗೆ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ರಾಜಕೀಯಕ್ಕಾಗಿ ಅವರು ಆರೋಪ ಮಾಡುತ್ತಿದ್ದಾರೆ. ಮುಲಾಜಿಲ್ಲದೇ ಕ್ರಮ ತೆಗೆದುಕೊಂಡಿದ್ದೇವೆ ಬಿಜೆಪಿಯವರು ದಿನಕ್ಕೆ ಒಂದೊಂದೂ ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಸಣ್ಣಪುಟ್ಟ ಘಟನೆ ಆಗಿದೆ ಅಂತ ನಾನು ಹೇಳಿದ್ದೇನೆ ಅವರು ರಾಜಕೀಯಕ್ಕೆ ಹೇಳಿಕೆಗಳನ್ನ ಟ್ವಿಸ್ಟ್ ಮಾಡ್ತಾರೆ ಎಂದು ಆರೋಪಿಸಿದ್ದಾರೆ.
ಮುನಿರತ್ನ ಏಕಾಏಕಿ ಬಂಧನ ಮಾಡಲಾಗಿದೆ ಎಂಬ ಆರೋಪಕ್ಕೆ ಉತ್ತರ ನೀಡಿದ ಗೃಹಸಚಿವರು, ಮುನಿರತ್ನ ಏಕಾಏಕಿ ಬಂಧನ ಆಗಿಲ್ಲ. ಚನ್ನಾರೆಡ್ಡಿ ಮೇಲೆ ಕ್ರಮ ಆಗಿಲ್ಲ ಅನ್ನೋ ಆರೋಪ ಮಾಡುತ್ತಿದ್ದಾರೆ. ಚನ್ನಾರೆಡ್ಡಿ ಮೇಲೂ ಕ್ರಮ ಆಗುತ್ತೆ. ಏಕಾಏಕಿ ಬಂಧನ ಆಗಿಲ್ಲ ಮುನಿರತ್ನ ಮೇಲೆ ದೂರು ದಾಖಲಾಗಿದೆ ಆ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ. ವಾಯ್ಸ್ ರೆಕಾರ್ಡ್ ಕೂಡ ಪಡೆದಿದ್ದಾರೆ ಪ್ರೂವ್ ಆದ್ರೆ ಅವರಿಗೆ ಶಿಕ್ಷೆ ಆಗುತ್ತೆ ಎಂದರು. ನಾಗಮಂಗಲದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಅನ್ನೋ ಆರೋಪ ಸುಳ್ಳು ಈ ವಿಚಾರ ನಮ್ಮಗಮನಕ್ಕೆಇಲ್ಲಅವರಿಗೆ ತಪ್ಪು ಮಾಹಿತಿ ಇದೆ ಅನ್ನಿಸುತ್ತೆ ಅಂತಹ ವಿಚಾರ ಇದ್ರೆ ಕ್ರಮ ಆಗುತ್ತೆ ಎಂದು ಹೇಳಿದರು.