ಸುಮಾರು 131 ದಿನಗಳ ಬಳಿಕ ಜೈಲಿನಿಂದ ದರ್ಶನ್ ಹೊರ ಬಂದಿರುವ ಬಗ್ಗೆ ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜೈಲಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಯಾಗಿದ್ದಾರೆ. ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರಿನ ಕಡೆ ಪಯಣ ಬೆಳೆಸಿದ ದಾರಿಯಲ್ಲೆಲ್ಲ ದರ್ಶನ್ ಫ್ಯಾನ್ಸ್ ಸೆಲೆಬ್ರೆಷನ್ ಮಾಡುತ್ತಿದ್ದಾರೆ ಮತ್ತು ದರ್ಶನ್ ಕಾರನ್ನು ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳಲ್ಲಿ ಎಷ್ಟು ಖುಷಿ ಇದೆಯೋ ಅಷ್ಟೇ ಖುಷಿ ಅವರ ಕುಟುಂಬದಲ್ಲೂ ಮನೆ ಮಾಡಿದೆ. ದರ್ಶನ್ಗೆ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ಕೂಡ ದೇವರ ದರ್ಶನ ಮಾಡಿ ಬಂದಿದ್ದಾರೆ. ಇದೇ ಖುಷಿಯಲ್ಲಿ ಪುತ್ರ ವಿನೀಶ್ ಕೂಡ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿನೀಶ್ ತೂಗುದೀಪ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಬಳಿಕ ಮತ್ತೆ ಎಂದು ತಂದೆಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದಕ್ಕೆ ಹೋಗಿರಲಿಲ್ಲ. ಅದು ಬಿಟ್ಟರೆ, ಇಂದೇ ಖುಷಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿನೀಶ್ ತೂಗುದೀಪ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಎಮೋಜಿಯೊಂದನ್ನು ಹಂಚಿಕೊಂಡಿದ್ದಾರೆ. ಕಿರೀಟವನ್ನು ಹೋಲುವ ಈ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಅಪ್ಪನ ಆಗಮನದಿಂದ ಸಂತಸದಲ್ಲಿ ಕಿಂಗ್ ಫೀಲಿಂಗ್ನಲ್ಲಿದ್ದಾರೆ ಅಂತ ಗೆಸ್ ಮಾಡಬಹುದು. ತಂದೆ ಜೈಲಿನಿಂದ ಹೊರ ಬಂದ ಖುಷಿಯಲ್ಲಿ ಪುತ್ರನಿದ್ದು, ಅವರ ಅಭಿಮಾನಿಗಳು ಕೂಡ ಈ ಇನ್ಸ್ಟೋರಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ದರ್ಶನ್ ಬಿಡುಗಡೆಯಾಗಿರುವ ಖುಷಿ ಅಭಿಮಾನಿಗಳಲ್ಲಿ ಅಷ್ಟೆ ಅಲ್ಲದೆ ಅವರ ಕುಟುಂಬದಲ್ಲೂ ಮನೆ ಮಾಡಿದೆ.
