ಬೆಂಗಳೂರು: ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದೆ. ಇದೀಗ ಬಾಲಕನ ಕಿಡ್ನ್ಯಾಪ್ ಮತ್ತು ಕೊಲೆಯ ಕಾರಣ ರಿವೀಲ್ ಆಗಿದೆ. ಪೊಲೀಸರ ತನಿಖೆ ವೇಳೆ ಆರೋಪಿ ಗುರುಮೂರ್ತಿಯ ಸೈಕೋ ಮನಸ್ಥಿತಿ ಗೊತ್ತಾಗಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಗೆ ಬಿಟ್ಟರೆ ಮನೆಯವರಿಗೆ ವಿಷಯ ತಿಳಿಸುತ್ತಾನೆಂದು ಕೊಲೆ ಮಾಡಲಾಗಿದೆ.
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ
ಸೈಕೋ ಮನಸ್ಥಿತಿಯ ಆರೋಪಿ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕ ವಿರೋಧ ವ್ಯಕ್ತಪಡಿಸಿದಕ್ಕೆ ಗಂಟಲಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದ. ಬಳಿಕ ಕೊಲೆ ವಿಷಯ ಮರೆಮಾಚಲು ಕಿಡ್ನಾಪ್ ಕಥೆ ಕಟ್ಟಿದ್ದು, ಬಾಲಕನ ಮನೆಯವರಿಗೆ ಕರೆ ಮಾಡಿ 5 ಲಕ್ಷ ರೂ. ಗೆ ಡಿಮ್ಯಾಂಡ್ ಮಾಡಿದ್ದ.
For More Updates Join our WhatsApp Group :